ಉಚಿತ ವಾಹನ ತರಬೇತಿ ಆದರೆ ಲೈಸೆನ್ಸ್ ಬೇಕಂದ್ರೆ ಕೇಳಿದಷ್ಟು ಹಣ ನೀಡಬೇಕು ಇಲ್ಲದಿದ್ದರೆ ಪರೀಕ್ಷೆಯಲ್ಲಿ ಫೇಲ್ ಮಾಡತ್ತಾರೆ.

ಇಷ್ಟು ದಿನ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಕೇಳಿಬಂದಿತ್ತು.. ಆದರೆ ಹುಬ್ಬಳ್ಳಿಯಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಅಧಿಕಾರಿಗಳು ಈಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.. ಬಡ ಯುವಕರಿಗೆ ಉಚಿತವಾಗಿ ನೀಡಬೇಕಾಗಿರುವ ವಾಹನ ತರಬೇತಿಗೆ ಸಾವಿರಾರು ರೂಪಾಯಿ ಲಂಚಪಡೆಯುತ್ತಿದ್ದಾರೆ.. ಮಾನ್ಯ ಸಾರಿಗೆ ಸಚಿವ ಶ್ರೀರಾಮುಲು ಅವರು ಇಲಾಖೆಯಲ್ಲಿ ನಡೆಯುತ್ತಿರುವ ಹಗಲು ದರೋಡೆ, ಮಾನಸಿಕ ಕಿರುಕುಳ, ಲಂಚಾವತಾರದ ಸ್ಟೊರಿ ಇಲ್ಲಿದೆ ನೋಡಿ..

-ಬಡ ನಿರುದ್ಯೋಗಿ ಯುವಕರನ್ನು ಬಡಿ ತಿನ್ನುತ್ತಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ತರಬೇತಿ ಕೇಂದ್ರದ ಅಧಿಕಾರಿಗಳು…

-ಉಚಿತ ವಾಹನ ತರಬೇತಿ ಆದರೆ ಲೈಸೆನ್ಸ್ ಬೇಕಂದ್ರೆ ಕೇಳಿದಷ್ಟು ಹಣ ನೀಡಬೇಕು ಇಲ್ಲದಿದ್ದರೆ ಪರೀಕ್ಷೆಯಲ್ಲಿ ಫೇಲ್ ಮಾಡತ್ತಾರೆ..

-ಅಧಿಕಾರಿಗಳ ಹಣದ ದಾಹಕ್ಕೆ ಕಂಗಾಲಾಗಿರುವ ಅಭ್ಯರ್ಥಿಗಳು..

ವಾ-01: ಸರ್ಕಾರ‌ ಬಡ ಎಸ್ಸಿ ಎಸ್ಟಿ ಯುವಕರ ಜೀವನೋಪಾಯಕ್ಕಾಗಿ ಸಹಾಯವಾಗಲಿ ಅಂತ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಉಚಿತ ಡ್ರೈವಿಂಗ್ ಹೇಳಿಕೊಡಲು ಎನ್ಇ ಕೆಎಸ್ ಆರ್ ಟಿಸಿ ವಿಶೇಷ ತರಬೇತಿ ಕೇಂದ್ರವನ್ನು ಆರಂಭಿಸಿದೆ.. ಇಲ್ಲಿ ತರಬೇತಿಗೆಂದು ಬರುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ವಸತಿ, ಊಟ ಮತ್ತು ಭಾರಿ ವಾಹನದ ಲೈಸೆನ್ಸ್ ನ್ನೂ‌ ಸಹ ಉಚಿತವಾಗಿ ಮಾಡಿಸಿಕೊಡುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಲಾಗಿದೆ. ಇದಕ್ಕಾಗಿ ಒಂದು ತರಬೇತಿ ಕೇಂದ್ರವನ್ನು, ಓರ್ವ ಪ್ರಿನ್ಸಿಪಾಲ್ ‌ಮತ್ತು ನುರಿತ ಚಾಲಕರನ್ನು ಸಹ ನೇಮಕ ಮಾಡಿಕೊಳ್ಳಲಾಗಿದೆ.. ತೆಗೆದಕೊಳ್ಳುವ ಸಂಬಳಕ್ಕೆ ಪ್ರಾಮಾಣಿಕವಾಗಿ ಈ ತರಬೇತಿ ಕೇಂದ್ರ ಸಿಬ್ಬಂದಿ ಕೆಲಸ ಮಾಡಿದ್ರೆ, ಇಷ್ಟೋತ್ತಿಗೆ ಅದೇಷ್ಟೊ ಬಡ ಯುವಕರು ದೊಡ್ಡ ದೊಡ ಬಸ್ ಗಳ ಚಾಲಕರು ಆಗುತ್ತಿದ್ದರು..ಇಲ್ಲಿ ಆಗೋತ್ತಿರೋದೆ ಬೇರೆ ಮೊದಲೇ ಕೆಲಸ ಇಲ್ಲದೆ ಅಸಹಾಯಕರಾಗಿ ಇಲ್ಲಿ ತರಬೇತಿ ಬರುವ ಅಭ್ಯರ್ಥಿಗಳಿಂದ ಹೆದರಿಸಿ ಬೆದರಿಸಿ ಹಣ ಕೀಳುವ ಪದ್ದತಿಯನ್ನು ತರಬೇತಿ ಸಿಬ್ಬಂದಿ ಆರಂಭಿಸಿದ್ದಾರೆ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರದ ಸಿಬ್ಬಂದಿ.. ಇನ್ನೂ ಈ ತರಬೇತಿ ಕೇಂದ್ರಕ್ಕೆ ಯಾರಿಗೂ ಎಂಟ್ರಿ ಇಲ್ಲವಂತೆ, ಇವರು ಮಾಡುತ್ತಿರುವ ಘನಂದಾರಿ ಕೆಲಸವನ್ನು ಸುದ್ದಿ ಮಾಡಬೇಕು ಅಂದರೆ ಹಿರಿಯ ಅಧಿಕಾರಿಗಳ ಅನುಮತಿಪಡೆದು ಬರಬೇಕು ಅಂತೆ.

ವಾ-02: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ 2021-22 ನೇ ಸಾಲಿನ ಪರಿಶಿಷ್ಟ ಜಾತಿ, ಪಂಗಡ ಮತ್ತು ಗಿರಿಜನರ ಉಪಯೋಜನೆ ಯಡಿಯಲ್ಲಿ ಲಘು, ಭಾರಿ ವಾಹನ ಚಾಲನಾ ತರಬೇತಿಗೆ ಆರಂಭವಾಗಿದ್ದು, ಹುಬ್ಬಳ್ಳಿ ಗೋಕುಲ ರಸ್ತೆಯ ಕೇಂದ್ರದಲ್ಲಿ ವಿವಿಧ ಜಿಲ್ಲೆಗಳ 180 ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಮೂರು ಬ್ಯಾಚ್ ಗಳಲ್ಲಿ ಉಚಿತವಾಗಿ ಒಂದು ತಿಂಗಳು ವಾಹನ ತರಬೇತಿ ನೀಡಲಾಗುತ್ತಿದೆ.. ಇವರ ತರಬೇತಿ ಮುಗಿದ ಮೇಲೆ ಈ ಅಭ್ಯರ್ಥಿಗಳಿಗೆ ಆರ್ ಟಿಓ ಇಲಾಖೆಯಿಂದ ಲೈಸೆನ್ಸ್ ಮಾಡಿಸಿಕೊಡುವುದು ಸಹ ತರಬೇತಿ ಅಧಿಕಾರಿಗಳ ಮೇಲಿರುತ್ತದೆ.. ಇದನ್ನು ಬಂಡವಾಳವಾಗಿ ಮಾಡಿಕೊಂಡ ವಾಹನ ತರಬೇತಿದಾರು ಅಭ್ಯರ್ಥಿಗಳಿಗೆ ಕುಂಟನೆಪ ಹೇಳಿ ಅವರಿಂದ 5 ರಿಂದ ಆರು ಸಾವಿರ ರೂಪಾಯಿ ಲಂಚಪಡೆಯುತ್ತಿರುವ ಆರೋಪ ಕೇಳಿಬರುತ್ತಿದೆ.. ಅದು ಕೂಡ ಪೋನ್ ಪೇ, ಗೂಗಲ್ ಪೇ ಮೂಲಕ ಅಭ್ಯರ್ಥಿಗಳಿಂದ ವಾಹನ ತರಬೇತಿದಾರಾದ ಆರ್ ಸಿ ಹಿರೇಮಠ, ಚಂದ್ರಶೇಖರ ಹುಳಸೋಗಿ, ಮಹಾಂತಪ್ಪ ಕಂಬಾರ ಎಂಬುವವರು ಪಡೆದುಕೊಂಡಿರುವುದಕ್ಕೆ ಸಾಕ್ಷಿ ದೊರತಿವೆ..

ಬೈಟ್01: ಗುರುನಾಥ್, ತರಬೇತಿ ಪಡೆಯುತ್ತಿರುವ ಅಭ್ಯರ್ಥಿ

ವಾ-03: ಇಷ್ಟೇ ಅಲ್ಲದೆ ಅಭ್ಯರ್ಥಿಗಳು ಒಂದು ವೇಳೆ ಹಣ ನೀಡದಿದ್ದರೆ ಲೈಸೆನ್ಸ್ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ತರಬೇತಿ ನೀಡುವ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದು, ಇಲ್ಲ ಸಲ್ಲದ ನೆಪಗಳನ್ನು ಹೇಳಿ ಮಾನಸಿಕ ಹಿಂಸೆ ನೀಡುತ್ತಿದ್ದಾರಂತೆ. ಇನ್ನೂ ತರಬೇತಿ ಸಮಯದಲ್ಲಿ ಕಡಿಮೆ ಕಿಲೋಮೀಟರ್ ಬಸ್ ಚಲಾವಣೆ ಮಾಡಿ ಜಾಸ್ತಿ ಕಿಲೋಮೀಟರ್ ಲೆಕ್ಕ ತೋರಿಸಲಾಗುತ್ತಿದೆ.‌ಇನ್ನು ಯಾವುದೇ ಪಾಠಗಳನ್ನು ಮಾಡದೆ ನೇರವಾಗಿ ಕಾಟಾಚಾರಕ್ಕೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.. ಈ ಬಗ್ಗೆ ವರದಿ‌ ಮಾಡಲು ಸ್ಥಳಕ್ಕೆ ಹೋದ್ರೆ ಸಿಬ್ಬಂದಿ ತಮಗೆ ಇಷ್ಟಬಂದಂತೆ ವರ್ತನೆ ಮಾಡತ್ತಾರೆ.. ಇನ್ನೂ ಕ್ಯಾಮರಾ ಕಂಡು ತಕ್ಷಣ ತಬ್ಬಿಬಾದ ಸಿಬ್ಬಂದಿ ಅದು ಹೇಗೆ ಕಾಲಕ್ಕಿಳತ್ತಾರೆ ನೀವೆ ನೋಡಿ…
ಆದರೆ ಈ ಬಗ್ಗೆ ಕೇಳಿದ್ರೆ ನಾವು ತರಬೇತಿ ಸರಿಯಾಗಿ ನೀಡುತ್ತಿದ್ದೆವೆ ಆದರೆ ಸಿಬ್ಬಂದಿ ಲಂಚ ಪಡೆಯುತ್ತಿರುವ ಬಗ್ಗೆ ಮಾಹಿತಿ ಇಲ್ಲ ಸಾಕ್ಷಿ ಸಿಕ್ಕ್ರೆ ಕಂಡಿತವಾಗಿ ಕ್ರಮ ತೆಗೆದುಕೊಳ್ಳುತ್ತವೆ ಅಂತ ಹಿರಿಯ ಅಧಿಕಾರಿಗಳು ಸಂಜಾಯಿಸಿ ನೀಡಿತ್ತಾರೆ..
ಬೈಟ್01: ಬೋರಯ್ಯ, ತರಬೇತಿ ಕೇಂದ್ರದ ಪ್ರಿನ್ಸಿಪಾಲ್
ಬೈಟ್02: ಭರತ್ , ಎನ್ಈಕೆಸ್ಆರ್ಟಿಸಿ ಎಂಡಿ

ವಾ-04: ಒಟ್ಟಿನಲ್ಲಿ ಸಕಾಲಕ್ಕೆ ಉದ್ಯೋಗ ಸಿಗದೆ, ಹೊಟ್ಟೆಪಾಡಿಗಾಗಿ ಉಚಿತವಾಗಿ ವಾಹನ ಕಲಿತು ಭವಿಷ್ಯ ರೂಪಿಸಿಕೊಳ್ಳಲು ಬಡ ಯುವಕರು ಬಂದ್ರೆ ಅಂತವರನ್ನು ಬಿಡುತ್ತಿಲ್ಲ ಕೆಸ್ ಆರ್ ಟಿಸಿ ಅಧಿಕಾರಿಗಳು.. ಇದು ಕೇವಲ ಕೆಳಹಂತದ ಸಿಬ್ಬಂದಿ ಲಂಚಾವತಾರನಾ ಅಥವಾ ಇದರ ಹಿಂದೆ ಬೇರೆಯವರ ಕೈವಾಡ ಇದೆಯಾ ಎಂಬುವುದರ ಬಗ್ಗೆ ತನಿಖೆಯಾಬೇಕು, ಬಡ ಯುವಕರಿಂದ ಲಂಚ ತಿಂದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮವಾಗಬೇಕು ಎಂಬುವುದು ನೊಂದ ಅಭ್ಯರ್ಥಿಗಳ ಮಾತು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನಗೆ ಕ್ಯಾನ್ಸರ್ ಇದೆ;

Fri Feb 3 , 2023
ಯುವತಿಯೊಬ್ಬಳು ತಾನು ಕ್ಯಾನ್ಸರ್ ರೋಗಿ ಕಿಮೊಥೆರಪಿ ಮಾಡಿಸಬೇಕು ಅಂತಾ ಹೇಳ್ಕೊಂಡು 400 ಕ್ಕೂ ಹೆಚ್ಚು ಜನರನ್ನು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಮ್ಯಾಡಿಸನ್ ಮೇರಿ ರುಸ್ಸೋ (19) ತಾನು ಕ್ಯಾನ್ಸರ್ ರೋಗಿಯಂತೆ ನಟಿಸಿ 400 ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದಾರೆ. ಕ್ಯಾನ್ಸರ್‌ನಿಂದಾಗಿ ಕಿಮೊಥೆರಪಿ ಮಾಡಬೇಕಾಗಿದೆ ಎಂದು ಯುವತಿ ತನ್ನ ವಿಡಿಯೋದಲ್ಲಿ ಹೇಳಿಕೊಂಡಿದ್ದು, ವೈದ್ಯರು ನನಗೆ 5 ವರ್ಷ ಬದುಕಬಹುದು ಎಂದು ಹೇಳಿದ್ದಾರೆ ಅಂತಾ ಹೇಳಿಕೊಂಡಿದ್ದಾಳೆ. ಕೆಲವು ವೈದ್ಯರು ಮ್ಯಾಡಿಸನ್ ಮೇರಿ […]

Advertisement

Wordpress Social Share Plugin powered by Ultimatelysocial