ಫೆ.13 ರಿಂದ ಭಾರತಕ್ಕೆ 5 ದೇಶಗಳಿಂದ ಆಗಮಿಸುವ ʼವಿದೇಶಿ ಪ್ರಯಾಣಿಕರಿಗೆ RT-PCR ಟೆಸ್ಟ್‌ ಕಡ್ಡಾಯವಲ್ಲʼ

ವದೆಹಲಿ: ಚೀನಾ, ಸಿಂಗಾಪುರ, ಕೊರಿಯಾ, ಥಾಯ್ಲೆಂಡ್ ಮತ್ತು ಜಪಾನ್‌ನಿಂದ ಆಗಮಿಸುವ ಪ್ರಯಾಣಿಕರಿಗೆ ವಿಧಿಸಲಾಗಿದ್ದ ಕಡ್ಡಾಯ ಕೋವಿಡ್ ಪರೀಕ್ಷಾ ನಿಯಮವನ್ನು ಕೈಬಿಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.  ಅಧಿಸೂಚನೆಯ ಪ್ರಕಾರ, ಫೆಬ್ರವರಿ 13 ರಿಂದ ಚೀನಾ, ಸಿಂಗಾಪುರ್, ಹಾಂಗ್ ಕಾಂಗ್, ರಿಪಬ್ಲಿಕ್ ಆಫ್ ಕೊರಿಯಾ, ಥೈಲ್ಯಾಂಡ್ ಮತ್ತು ಜಪಾನ್’ ದೇಶಗಳಿಂದ ಭಾರತಕ್ಕೆ ಆಗಮಿಸುವವರು ಕಡ್ಡಾಯ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

‘ಸಚಿವಾಲಯವು ತನ್ನ ‘ಅಂತರರಾಷ್ಟ್ರೀಯ ಆಗಮನಕ್ಕಾಗಿ ಮಾರ್ಗಸೂಚಿಗಳನ್ನು’ ನವೀಕರಿಸುತ್ತಿದೆ ಮತ್ತು ನಿರ್ಗಮನ ಪೂರ್ವ COVID-19 ಪರೀಕ್ಷೆಯ ಅವಶ್ಯಕತೆಗಳನ್ನು ಕೈಬಿಡುತ್ತಿದೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ‘ಏರ್ ಸುವಿಧಾ’ ಪೋರ್ಟಲ್‌ನಲ್ಲಿ ಸ್ವಯಂ-ಆರೋಗ್ಯ ಘೋಷಣೆಯನ್ನು ಅಪ್‌ಲೋಡ್ ಮಾಡಲಾಗಿದೆ

ಕೆಲ ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷಾ ನಿಯಮದಿಂದ ವಿನಾಯಿತಿ ನೀಡಲಾಗಿದೆ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಚೀನಾ, ಸಿಂಗಾಪುರ, ಕೊರಿಯಾ, ಥೈಲ್ಯಾಂಡ್ ಮತ್ತು ಜಪಾನ್‌ನಿಂದ ಆಗಮಿಸುವ ಪ್ರಯಾಣಿಕರು ‘ಏರ್ ಸುವಿಧಾ’ ಪೋರ್ಟಲ್‌ನಲ್ಲಿ ಆರ್‌ಟಿ-ಪಿಸಿಆರ್ ವರದಿಯನ್ನು ಅಪ್‌ಲೋಡ್ ಮಾಡಲು ಸರ್ಕಾರ ಈ ಹಿಂದೆ ಕಡ್ಡಾಯಗೊಳಿಸಿತ್ತು. ಇದೀಗ ಹಿಂಪಡೆಯಲಾಗಿದೆ. ಹಾಗಾಗಿ ಇನ್ಮುಂದೆ ಈ ಐದು ದೇಶಗಳ ವಿದೇಶಿಗರು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು-ಮೈಸೂರು ರಸ್ತೆ: ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಸ್ಥಾಪನೆಗೆ ಶೀಘ್ರವೇ ಒಪ್ಪಿಗೆ.

Fri Feb 10 , 2023
ಬೆಂಗಳೂರು, ಜನವರಿ 10: ಬೆಂಗಳೂರು – ಮೈಸೂರು ರಸ್ತೆಯ ವಿವಿಧೆಡೆ ಕರ್ನಾಟಕ ಏಕೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಸ್ಥಾಪನೆಯ ಪ್ರಸ್ತಾವ ಇದೆ. ಅದಕ್ಕೆ ಅನುಮೋದನೆ ನೀಡಿ ಶೀಘ್ರವೇ ಕೆಲಸ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಶುಕ್ರವಾರ ವಿಧಾನಸೌಧ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರ 115 ನೇ ಜನ್ಮ ದಿನಾಚಾರಣೆ ನಡೆಯಿತು. ಈ ಪ್ರಯುಕ್ತ ಕೆಂಗಲ್ ಹನುಮಂತ್ಯನವರ ಪ್ರತಿಮೆಗೆ ಮಾಳಾರ್ಪಣೆ […]

Advertisement

Wordpress Social Share Plugin powered by Ultimatelysocial