ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ನಾವು ಸೇವಿಸುವ ಆಹಾರದ ಪರಿಣಾಮ ಎಲ್ಲಕ್ಕಿಂತ ದೊಡ್ಡದು.

ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ನಾವು ಸೇವಿಸುವ ಆಹಾರದ ಪರಿಣಾಮ ಎಲ್ಲಕ್ಕಿಂತ ದೊಡ್ಡದು. ಮನುಕುಲವೀಗ ಕೋವಿಡ್-19 ಸಾಂಕ್ರಾಮಿಕದ ಮೂರನೇ ವರ್ಷಕ್ಕೆ ಪ್ರವೇಶಿಸುತ್ತಿರುವ ವೇಳೆ, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಮತ್ತು ಸಮಗ್ರ ಯೋಗಕ್ಷೇಮದ ಮೇಲೆ ಆಹಾರದ ಪೌಷ್ಟಿಕಾಂಶದ ಪರಿಣಾಮವನ್ನು ಇನ್ನಷ್ಟು ಆಳವಾಗಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.ಆರೋಗ್ಯಯುತ ಪಥ್ಯ ಅಭ್ಯಸಿಸಿಕೊಳ್ಳಲು ನೆರವಾಗಲೆಂದು, ದಿ ಆರ್ಗ್ಯಾನಿಕ್ ವರ್ಲ್ಡ್‌ನ ಉಮಾ ಪ್ರಸಾದ್ ಅವರು ಈ ವರ್ಷದ ಟಾಪ್ 5 ಆಹಾರ ಟ್ರೆಂಡ್‌ಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.ಉತ್ಪಾದನೆ ಹೆಚ್ಚಿಸುವ ಸಲುವಾಗಿ, ಇಂದು ಕಾರ್ಖಾನೆಗಳಲ್ಲಿ ಯಾಂತ್ರಿಕವಾಗಿ ತುಪ್ಪ ತಯಾರಿಸುವ ಮಂದಿ ಮೊಸರಿನಿಂದ ಪಡೆದ ಬೆಣ್ಣೆಯಿಂದ ಬರುವ ತುಪ್ಪವನ್ನು ಹೊರತೆಗೆಯುವ ಪಾಲಿಸಬೇಕಾದ ಸಾಂಪ್ರದಾಯಿಕ ಮತ್ತು ಆರೋಗ್ಯಕರ ಪ್ರಕ್ರಿಯೆಗಳನ್ನು ಪಾಲಿಸುವುದಿಲ್ಲ. ಬದಲಿಗೆ, ಕೆನೆ ಅಥವಾ ಇತರ ರೀತಿಯ ಕೊಬ್ಬನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ, ತುಪ್ಪದ ಉತ್ಪಾದನೆಗೆ ಚುರುಕು ನೀಡಲು ಯಂತ್ರಗಳನ್ನು ಬಳಸಿ ಸಂಸ್ಕರಿಸುತ್ತಾರೆ. ಇದು ಹೆಚ್ಚಿದ ಇಳುವರಿಗೆ ಸಹಾಯ ಮಾಡುತ್ತದೆ ನಿಜ. ಆದರೆ, ರಾಸಾಯನಿಕಗಳು ಮತ್ತು ಶಾಖದ ಅತಿಯಾದ ಬಳಕೆಯ ಕಾರಣದಿಂದ ಸಾಂಪ್ರದಾಯಿಕವಾಗಿ ಕೈಯಿಂದ ಮಾಡಿದ ತುಪ್ಪಕ್ಕೆ ಹೋಲಿಸಿದರೆ ಈ ತುಪ್ಪವು ಪೌಷ್ಟಿಕಾಂಶದ ಮೌಲ್ಯದಲ್ಲಿ ಬಹಳ ಹಿಂದೆ ಉಳಿಯುತ್ತದೆ. ಕೈಯಲ್ಲಿ ಕಡೆದ ಬೆಣ್ಣೆಯಿಂದ ಕಾಯಿಸಿದ ತುಪ್ಪವು ಆರೋಗ್ಯಕರ ಪಥ್ಯಕ್ಕೆ ನೆರವಾಗುತ್ತದೆ ಎಂದು ಕಾಲಕಾಲಿಕವಾಗಿ ಸಾಬೀತಾಗುತ್ತಲೇ ಬಂದಿದೆ.ಇಂದು, ಆಹಾರದ ಗುಣಮಟ್ಟ ಮತ್ತು ಪೋಷಕಾಂಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕಚ್ಚಾ ಸಾಮಗ್ರಿಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಈ ಅವಧಿಯಲ್ಲಿ ಶುದ್ಧವಾದ, ಕೈಯಿಂದ ಮಾಡಿದ ತುಪ್ಪವು ಮನೆಗಳು ಮತ್ತು ಅಡಿಗೆ ಮನೆಗಳಿಗೆ ಮರಳಲು ಸಿದ್ಧವಾಗಿದೆ. ಹಲವಾರು ದಿನಸಿ ವ್ಯಾಪಾರಿಗಳು ಇಂದು ಶುದ್ಧ ಮತ್ತು ಸಾವಯವ ಆಹಾರಗಳನ್ನು ಮಾರುತ್ತಿದ್ದಾರೆ.ಸಾವಿರಾರು ಮೈಲುಗಳಷ್ಟು ದೂರದಿಂದ ಆಮದಾಗುವ ಆಹಾರವು ಸಾಮಾನ್ಯವಾಗಿ ರಾಸಾಯನಿಕ ಸಂರಕ್ಷಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಉದಾಹರಣೆಗೆ, ಸೋಡಿಯಂ ಆರ್ಥೋಫೆನೈಲ್ಫೆನೇಟ್ (SOPP) ಮತ್ತು ಥಿಯಾಬೆಂಡಜೋಲ್ (TBZ) ಗೋಚರಿಸಬಲ್ಲಂಥ ಅಚ್ಚುಗಳನ್ನು ತಡೆಗಟ್ಟಲು ಮತ್ತು ವಿಳಂಬಗೊಳಿಸಲು ಬಳಸಲಾಗುತ್ತದೆ. ಇದೇ ವೇಳೆ ಕಿನಿನ್‌ಗಳು ಮತ್ತು ಕೈನೆಟಿಕ್ಸ್‌ಗಳು ಹಸಿರು ತರಕಾರಿಗಳನ್ನು ಹಳದಿ ಬಣ್ಣಕ್ಕೆ ತಿರುಗದಂತೆ ಮಾಡುತ್ತದೆ.ಮತ್ತೊಂದೆಡೆ, ಸ್ಥಳೀಯವಾಗಿ-ಬೆಳೆದ ಆಹಾರವನ್ನು ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ತಲುಪಿಸಬಹುದು. ಜೊತೆಗೆ ಈ ರೀತಿಯ ಆಹಾರದಲ್ಲಿ ನೈಸರ್ಗಿಕ ಪೌಷ್ಟಿಕಾಂಶದ ಮೌಲ್ಯವು ರಾಸಾಯನಿಕಗಳಿಂದ ಕಲುಷಿತಗೊಂಡಿರುವ ಸಾಧ್ಯತೆ ಇರುವುದಿಲ್ಲ. ಇಂಥ ಆಹಾರಗಳು ನೈಸರ್ಗಿಕವಾಗಿ ಮಾಗಿದ ಸ್ಥಿತಿಯಲ್ಲಿ ಸಿಕ್ಕರೆ ಇನ್ನಷ್ಟು ಉತ್ತಮ ತಾಜಾ ಉತ್ಪನ್ನಗಳನ್ನು ಒಮ್ಮೆ ಕಿತ್ತುಕೊಂಡರೆ, ಜೀವಕೋಶಗಳು ಕುಗ್ಗಲು ಪ್ರಾರಂಭಿಸುತ್ತವೆ ಮತ್ತು ಪೋಷಕಾಂಶಗಳು ಶೀಘ್ರದಲ್ಲೇ ಖಾಲಿಯಾಗಲು ಪ್ರಾರಂಭಿಸುತ್ತವೆ, ಹೀಗಾಗಿ ಸಾಧ್ಯವಾದಷ್ಟು ಬೇಗನೇ ಆಹಾರವನ್ನು ಸೇವಿಸಬೇಕು ಎಂಬುದು ಬಹಳ ಮುಖ್ಯ.ಬೀಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿವೆ. ನಮ್ಮ ನಮ್ಮ ಪ್ರಾದೇಶಿಕ ಸಂಸ್ಕೃತಿಗಳಿಗೆ ಹೆಚ್ಚು ಪೂರಕವಾದ ಧಾನ್ಯಗಳು ಮತ್ತು ಬೀಜಗಳ ಉತ್ತಮಿಕೆ ಬಳಸಿಕೊಂಡು ತಯಾರಿಸಲಾದ ತಿಂಡಿಗಳನ್ನು ನಾವು ಆಯ್ದುಕೊಳ್ಳುವುದು ಉತ್ತಮ. ಕಡ್ಲೇಮಿಠಾಯಿಂಥ ಆಯ್ಕೆಗಳು ಈ ನಿಟ್ಟಿನಲ್ಲಿ ಬಹಳ ಉತ್ತಮವಾದವು.ಸಾಂಪ್ರದಾಯಿಕ ತಿಂಡಿಗಳನ್ನು ಮಾಡುವ ಪಾಕವಿಧಾನಗಳು ಆಯಾ ಋತುಗಳನ್ನು ಆಧರಿಸಿವೆ. ಇದರಿಂದಾಗಿ ಪ್ರಕೃತಿಯಲ್ಲಿ ಬದಲಾಗುವ ಲಯಗಳಿಗೆ ತಕ್ಕಂತೆ ನಮಗೆ ಅಗತ್ಯವಿರುವ ಪೋಷಣೆ ಮತ್ತು ಶಕ್ತಿಯನ್ನು ಪಡೆಯಲು ಈ ವಿಧಾನಗಳು ನೆರವಾಗುತ್ತವೆ. ಬೆಲ್ಲದ ಉದಾಹರಣೆಯನ್ನೇ ತೆಗೆದುಕೊಂಡರೆ: ವ್ಯಾಪಕವಾದ ರಕ್ತ ಶುದ್ಧಿಕಾರಕ, ಮತ್ತು ವಿಟಮಿನ್ ಡಿಯ ಪ್ರಬಲ ಮೂಲವಾದ ಬೆಲ್ಲ ನಮ್ಮ ದೇಹದಲ್ಲಿ ಶಕ್ತಿ ಮತ್ತು ಚೈತನ್ಯವನ್ನು ಪುನಃಸ್ಥಾಪಿಸಲು, ಸಾಂಪ್ರದಾಯಿಕವಾಗಿ ತಯಾರಿಸಬಲ್ಲ ಖಾದ್ಯಗಳಲ್ಲಿ ಒಂದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

.

Please follow and like us:

Leave a Reply

Your email address will not be published. Required fields are marked *

Next Post

ವಿಶ್ವಾಸ್‌ ಇಲ್ಲಾದೇ ಏನ ಬದುಕು..? | Upendra Rao | Special Interview | Speed News Kannada

Wed Feb 9 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial