ERSS 112 ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಉಳಿದ ಎರಡು ಜೀವಗಳು..!

ಜೀವನದಲ್ಲಿ ಜಿಗುಪ್ಸೆಗೊಂಡು ಮಗಳ ಸಮೇತ ಕಾಲುವೆಯ ನೀರಲ್ಲಿ ಮುಳಗಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆ ಹಾಗೂ ಮಗಳ ಪ್ರಾಣವನ್ನ ERSS 112 ಪೊಲೀಸ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಉಳಿದಿದೆ..

ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಹಾರೋಗೇರಿ‌ ಗ್ರಾಮದ 38 ವರ್ಷದ ಮಹಿಳೆ ತನ್ನ ಹದಿನಾಲ್ಕು ವರ್ಷದ ಮಗಳನ್ನು ಕರೆದುಕೊಂಡು ಗ್ರಾಮದ ಸಮೀಪದಲ್ಲಿಯೇ ಇರುವ ದೊಡ್ಡ ಕಾಲುವೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಳು. ಮಗಳನ್ನು ನೀರಲ್ಲಿ ಮುಳಗಿಸುತ್ತಿದ್ದಂತೆಯೇ ಕಣ್ಣಾರೆ ಕಂಡ ಗ್ರಾಮಸ್ಥರು ERSS 112 ಕ್ಕೆ ಕರೆ ಮಾಡಿ ಮಾಹಿತಿ ‌ತಿಳಿಸಿದ್ದಾರೆ.

ಮಾಹಿತಿ ದೊರಕುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ 112 ಸಿಬ್ಬಂದಿ ಮಗಳನ್ನು ಹಾಗೂ ತಾಯಿಯನ್ನು ರಕ್ಷಿಸಿದ್ದಾರೆ. ನೀರಲ್ಲಿ ಮುಳಗಿದ್ದ ಹದಿನಾಲ್ಕು ವರ್ಷ ಮಗಳು ನೀರು ಸೇವಿಸಿದ್ದರಿಂದ. ತೀವ್ರ ಅಸ್ವಸ್ಥಗೊಂಡಿದ್ದಳು. ತಕ್ಷಣ ಇಬ್ಬರನ್ನೂ ತಮ್ಮ ವಾಹನದಲ್ಲಿ ಗದಗ ಜಿಮ್ಸ್ ಆಸ್ಪತ್ರೆಗೆ ಕರೆ ತಂದು ಸೂಕ್ತ ಚಿಕಿತ್ಸೆ ‌ಕೊಡಿಸಿದ್ದಾರೆ. ಇಬ್ಬರು ಪ್ರಾಣಾಪಯದಿಂದ ಪಾರಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಅಂತಾ ವೈದ್ಯರು ಹೇಳಿದ್ದಾರೆ, ಸಕಾಲಕ್ಕೆ ಕರೆತಂದು ಪ್ರಾಣ ಉಳಿಸಿದ ERSS 112 ಸಿಬ್ಬಂದಿ ಮುಂಡರಗಿ ಠಾಣೆಯ ಹೆಡ್ ಕಾನಸ್ಟೇಬಲ್ ಕಾಸೀಮಸಾಬ್ ಡಿ ಹರಿವಾಣ, ಪೇದೆ ಎಸ್ ಎಮ್ ಸುಂಕದ ಹಾಗೂ ಚಾಲಕ ದಾವಲಸಾಬ್. ಎ ಕಲೆಗಾರ. ಅವರ ಸಮಯ ಪ್ರಜ್ಞೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ. ಹಾಗೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಟಿ ನರಸೀಪುರ ತಾಲ್ಲೂಕು ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ಕರೆದ E.O

Fri Jul 29 , 2022
ಟಿ ನರಸೀಪುರ :ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳ ಬೆವರಿಳಿಸಿದ E.O ಇಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕರೆದು ಕೃಷಿ ಇಲಾಖೆ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು .ತಾಲ್ಲೂಕಿನಲ್ಲಿ ಕಬಿನಿ ಮತ್ತು ರಾಮಸ್ವಾಮಿ ನಾಲೆಗಳಿಗೆ ನೀರು ಬಿಟ್ಟಿದ್ದು ರೈತರ ಬೇಡಿಕೆಯಂತೆ ಬಿತ್ತನಬೀಜ ವನ್ನು ಸರಿಯಾಗಿ ವಿತರಿಸುವುದರಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ನೀವು ರೈತರಿಗೆ ಸರಿಯಾದ ಸಮಯಕ್ಕೆ […]

Advertisement

Wordpress Social Share Plugin powered by Ultimatelysocial