ಅಕ್ರಮ ಕಲ್ಲು ಗಣಿಗಾರಿಕೆ ಅಧಿಕಾರಿಗಳು ಸಾಮಿಲು ಆರೋಪ..

ಗದಗ ಜಿಲ್ಲೆ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೌನವಾಗಿರುವದು ಸಾರ್ವಜನಿಕರ ಶಂಕೆಗೆ ಕಾರಣವಾಗಿದೆ.

ಗೋಮಾಳ ನಾಶ:
ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಗೋಮಾಳಗಳಲ್ಲಿ ಆಕ್ರಮವಾಗಿ ಗುಡ್ಡ ಬೆಟ್ಟಗಳಲ್ಲಿ ಕಲ್ಲು ತೆಗೆಯುವ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ.ಕಲ್ಲು ಬಂಡೆಗಳಲ್ಲಿ ಕ್ವಾರಿಯವರಿಗೆ ಕಲ್ಲು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವಾನಗಿಯನ್ನು ಪಡೆಯುವುದರ ಜೊತೆಗೆ ಸಂಬಂಧ ಪಟ್ಟ ಇಲಾಖೆಗೆ ಗೌರವಧನವನ್ನು ಪಾವತಿಸಿರಬೇಕು. ಆನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಪರವಾನಗಿ ಪಡೆದ ವ್ಯಕ್ತಿಗಳಿಗೆ ಇಂತಿಷ್ಟು ವ್ಯಾಪ್ತಿ ಎಂದು ಗಡಿಯನ್ನು ಗುರುತಿಸಿ ಕೊಟ್ಟಿರುತ್ತಾರೆ. ಆ ಜಾಗದಲ್ಲಿ ಮಾತ್ರ ಕಲ್ಲುಗಳನ್ನು ತೆಗೆಯಬಹುದು.ಆದರೆ ಬೆಟ್ಟಗುಡ್ಡಗಳಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡಿ ಕಲ್ಲು ತೆಗೆಯುತ್ತಿದ್ದಾರೆ.
ಬೇಕಾಬಿಟ್ಟಿ ಕಲ್ಲು ಲೂಟಿ:
ಆದರಹಳ್ಳಿ ಗ್ರಾಮದಲ್ಲಿ ಕೆಲವೊಂದು ಕ್ವಾರಿಗಳಿಗೆ ಪರವಾನಿಗೆ ನೀಡಲಾಗಿದೆ ಪರವಾನಿಗಿ ನೀಡಿದ ಜಾಗ ಬಟ್ಟು ಬಿಕಾಬಿಟ್ಟಿ ಎಲ್ಲೆಂದರಲ್ಲಿ ಕಲ್ಲು ತೆಗೆಯುತ್ತಿದ್ದಾರೆ.ಅದರೆ ಇಲ್ಲಿ ಸುಮಾರು ಮಂದಿ ಆಕ್ರಮವಾಗಿ ಅಕ್ರಮವಾಗಿ ಕಲ್ಲುಗಳನ್ನು ತೆಗೆಯುತ್ತಿದ್ದಾರೆ. ಆಕ್ರಮವಾಗಿ ತೆಗೆದ ಕಲ್ಲುಗಳನ್ನು ಲಾರಿ ಟಿಪ್ಪರ ಮೂಲಕ ರಾಜರೋಷವಾಗಿ ಸಾಗಿಸುತ್ತಿದ್ದಾರೆ. ಕಣ್ಣು ಮುಂದೆಯೇ ಪ್ರಾಕೃತಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿರುವುದು ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ.
ಬೊಕ್ಕಸಕ್ಕೆ ಅಪಾರ ನಷ್ಟ:
ಇಲ್ಲಿ ನಡೆಯುತ್ತಿರುವುದೆಲ್ಲವೂ ಅಕ್ರಮವಾಗಿರುವುದರಿಂದ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಅಲ್ಲದೇ, ಬೇಕಾಬಿಟ್ಟಿಯಾಗಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಪರಿಸರದ ಮೇಲೆ ಅಪಾರ ಪರಿಣಾಮ ಬೀರುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೊಮ್ಮಾಯಿ. ದೇಶ ದ್ರೋಹದ ಕೆಲಸಮಾಡಿ, ಜನರ ನಡುವೆ ದ್ವೇಶ ಬಿತ್ತಿ.

Thu Jul 28 , 2022
ಕೋಮು ಕೋಮುಗಳ ನಡುವೆ ಸಂಘರ್ಷ ನಡೆಸಲಾಗ್ತಿದೆ. ಇದು ದೇಶ ವ್ಯಾಪ್ತಿ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ 22ಕ್ಕೂ ಹೆಚ್ಚು ಕಡೆ ಹತ್ಯೆ ನಡೆದಿದೆ. ಯಾವ ರೀತಿ ಹತ್ಯೆ ಆಗಿದ್ದು, ಕ್ರಮ ತೆಗೆದುಕೊಳ್ಳಲಾಗಿದೆ. ಮಂಗಳೂರು, ಡಿ.ಜೆ ಹಳ್ಳಿಯಲ್ಲಿ ನಡೆದ ರೀತಿ ಮಾಡದೆ ನೇರವಾಗಿ ಕ್ರಮ. ದೃಡವಾದ ಸಂಕಲ್ಪ ಮಾಡಿದ್ದೇವೆ, ಹೊರಗೆ ತರಬೇಕು ಅಂತ. ಸಾಮಾನ್ಯ ತನಿಖೆ ಜೊತೆ, ವಿಶೇಷ ಕಾನೂನು ತರಲಾಗ್ತಿದೆ. PFI ಟೆರರಿಸ್ಟ್ ಅಂತ ಹೇಳಿದ್ದು, ಅದಕ್ಕೆಲ್ಲಾ ಸಾಕ್ಷಿ ಇದೆ. […]

Advertisement

Wordpress Social Share Plugin powered by Ultimatelysocial