ಉಕ್ರೇನ್​​ ಗಡಿಯಲ್ಲಿ ರಷ್ಯಾದಿಂದ ಸೇನಾಪಡೆ ನಿಯೋಜನೆ.! ಉಪಗ್ರಹ ಫೋಟೋದಿಂದ ಬಹಿರಂಗ

ರಷ್ಯಾವು ಉಕ್ರೇನ್​​ ಗಡಿಯ ಸಮೀಪದಲ್ಲಿ ಶಸ್ತ್ರಸಜ್ಜಿತ ಉಪಕರಣಗಳು ಹಾಗೂ ಸೇನಾಪಡೆಗಳನ್ನು ನಿಯೋಜನೆ ಮಾಡುತ್ತಿದೆ ಎಂದು ಅಮೆರಿಕವು ಹೇಳಿದೆ. ಅಮೆರಿಕದ ಖಾಸಗಿ ಕಂಪನಿಯು ಉಪಗ್ರಹ ಚಿತ್ರಗಳನ್ನು ಪ್ರಸ್ತುತಪಡಿಸುವ ಮೂಲಕ ಈ ಮಾಹಿತಿಯನ್ನು ನೀಡಿದೆ.ಹೊಸ ಚಟುವಟಿಕೆಯು ಹೆಚ್ಚಿದ ಮಿಲಿಟರಿ ಸನ್ನದ್ಧತೆಯನ್ನು ಸೂಚಿಸುತ್ತದೆ ಎಂದು ಅಮೆರಿಕ ಮೂಲದ ಮ್ಯಾಕ್ಸರ್ ಟೆಕ್ನಾಲಜೀಸ್ ನಿರ್ದೇಶಕರು ಹೇಳಿದ್ದಾರೆ.ಅನೇಕ ವಾರಗಳ ಕಾಲ ರಷ್ಯಾದ ಸೇನಾ ಚಟುವಟಿಕೆಯನ್ನು ಟ್ರ್ಯಾಕ್​ ಮಾಡಿರುವ ಖಾಸಗಿ ಕಂಪನಿಯು ಈ ಮಾಹಿತಿಯನ್ನು ಬಹಿರಂಗಪಡಿಸಿದೆ.ಈ ಹೊಸ ಚಟುವಟಿಕೆಯು ರಷ್ಯಾದಲ್ಲಿ ಈ ಹಿಂದೆ ಇದ್ದ ಯುದ್ಧ ಚಟುವಟಿಕೆಗಳಲ್ಲಿ ಆಗಿರುವ ಬದಲಾವಣೆಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ಮ್ಯಾಕ್ಸರ್​ ಹೇಳಿದರು. ಉಪಗ್ರಹಗಳ ಚಿತ್ರಗಳು ನೀಡಿರುವ ಮಾಹಿತಿಯ ಪ್ರಕಾರ ಫೆಬ್ರವರಿ 13ರ ಸುಮಾರಿಗೆ ರಷ್ಯಾದ ಸೊಲಿಟಿಯಲ್ಲಿರುವ ಮಿಲಿಟರಿ ಗ್ಯಾರಿಸನ್​​ ಸುತ್ತಲೂ ಯುದ್ಧ ಗುಂಪುಗಳ ದೊಡ್ಡ ನಿಯೋಜನೆಯನ್ನು ಗಮನಿಸಲಾಗಿದೆ ಎಂದು ಮ್ಯಾಕ್ಸರ್​ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಬೇಡ್ಕರ್ ಫೋಟೋ ಸಾಲು: ಬೆಂಗಳೂರಿನಲ್ಲಿ ದಲಿತ ಗುಂಪುಗಳ ಪ್ರತಿಭಟನೆ, ಕ್ರಮಕ್ಕೆ ಸಿಎಂ ಬೊಮ್ಮಾಯಿ ಭರವಸೆ;

Mon Feb 21 , 2022
ರಾಯಚೂರಿನಲ್ಲಿ ಗಣರಾಜ್ಯೋತ್ಸವದಂದು ಮಹಾತ್ಮಾ ಗಾಂಧಿ ಅವರ ಭಾವಚಿತ್ರದ ಪಕ್ಕದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಡುವುದನ್ನು ವಿರೋಧಿಸಿದ ಕರ್ನಾಟಕ ಜಿಲ್ಲಾ ನ್ಯಾಯಾಧೀಶರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು. ಆನಂದ್ ರಾವ್ ವೃತ್ತದ ಮೇಲ್ಸೇತುವೆಯನ್ನು ಮುಚ್ಚಿಹಾಕಿದ ಬೃಹತ್ ರ್ಯಾಲಿ, ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾಕಾರರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರೇರೇಪಿಸಿತು. ಅವರ ಮನವಿಯನ್ನು ಸ್ವೀಕರಿಸಿದ ಬೊಮ್ಮಾಯಿ ಅವರು ತಮ್ಮ ಬೇಡಿಕೆಗಳನ್ನು ಸಂಬಂಧಪಟ್ಟವರಿಗೆ ತಿಳಿಸುವುದಾಗಿ ಭರವಸೆ ನೀಡಿದರು. ಸಿಎಂ ಬೊಮ್ಮಾಯಿ ಉದ್ಯಾನವನದಲ್ಲಿ ಪ್ರತಿಭಟನಾಕಾರರನ್ನು […]

Advertisement

Wordpress Social Share Plugin powered by Ultimatelysocial