ರಾಜ್ಯದ ಎಲ್ಲ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಗಲಾಟೆ ಇಲ್ಲ ಜ್ಞಾನೇಂದ್ರ

ಕಲಬುರಗಿ: ರಾಜ್ಯದ ಎಲ್ಲ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಗಲಾಟೆ ಇಲ್ಲ. ಕೆಲವು ಬೆರಳೆಣಿಕೆಯಷ್ಟು ಕಾಲೇಜು, ಶಾಲೆಗಳಲ್ಲಿ ಮತಾಂಧ ಶಕ್ತಿಗಳ ಕೈವಾಡದಿಂದ ಗಲಾಟೆ ಸೃಷ್ಟಿಯಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲೇಜುಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ತಾಳ್ಮೆಯಿಂದ ವೀಕ್ಷಣೆ ಮಾಡಲಾಗುತ್ತಿದೆ. ಗಲಾಟೆ ಸೃಷ್ಟಿಸುತ್ತಿರುವವರಿಗೆ ಎಚ್ಚರಿಕೆ ನೀಡಿ, ತನಿಖೆ ನಡೆಸಿ ಮೊಕ್ಕದಮೆ ಹೂಡಲಾಗುತ್ತಿದೆ ಎಂದು ಹೇಳಿದರು.ಹಿಜಾಬ್ ಸಮಸ್ಯೆ ಕುರಿತು ತನಿಖೆಗೆ ಅಲ್ಪಸಂಖ್ಯಾತ ಶಾಸಕರು ಮನವಿ ಸಲ್ಲಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಎಲ್ಲರೂ ಕೂಡಿಕೊಂಡು ಈ ಸ್ಥಿತಿಯಿಂದ ಹೊರತರಬೇಕು. ಮಕ್ಕಳಲ್ಲಿ ಸಂಸ್ಕಾರ ತುಂಬುವ ಕೆಲಸ ಮಾಡಬೇಕು. ಕೋರ್ಟ್ ಕಾಯ್ದೆ, ಸಂವಿಧಾನದ ಪ್ರಕಾರವೇ ಹೋಗಬೇಕು. ಪಿಎಫ್‌ಐ, ಎಸ್ ಡಿಪಿಐನಂಥಾ ಸಂಸ್ಥೆಗಳನ್ನು ನಿರ್ಜೀವಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.ಈಶ್ವರಪ್ಪ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಕಾಂಗ್ರೆಸ್ ವಾದದಲ್ಲಿ ಹುರುಳು ಇಲ್ಲ. ಡಿ.ಕೆ.ಶಿವಕುಮಾರ್ ರಾಷ್ಟ್ರ ಧ್ವಜ ಇಳಿಸಿ, ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಸುಳ್ಳು ಹೇಳಿದಂತೆಯೇ ಈಶ್ವರಪ್ಪ ಹೇಳಿಕೆಯ ಬಗ್ಗೆ ಸುಳ್ಳು ಹರಡಲಾಗುತ್ತಿದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಫ್ಘಾನಿಸ್ತಾನದ ಸಿಖ್-ಹಿಂದೂ ಸಮುದಾಯವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಭಾರತ ನಿಮ್ಮ ಮನೆ ಎಂದು ಹೇಳಿದರು

Sat Feb 19 , 2022
  ನವದೆಹಲಿ, ಫೆಬ್ರವರಿ 19: ಪ್ರಧಾನಿ ನರೇಂದ್ರ ಮೋದಿ ಅವರು ಅಫ್ಘಾನಿಸ್ತಾನದ ಸಿಖ್-ಹಿಂದೂ ನಿಯೋಗದ ಸದಸ್ಯರನ್ನು ಇಂದು ಮುಂಜಾನೆ 7 ಲೋಕ ಕಲ್ಯಾಣ ಮಾರ್ಗದಲ್ಲಿ ಭೇಟಿಯಾದರು. ಅವರು ಪ್ರಧಾನಿಯನ್ನು ಗೌರವಿಸಿದರು ಮತ್ತು ಅಫ್ಘಾನಿಸ್ತಾನದಿಂದ ಸಿಖ್ ಮತ್ತು ಹಿಂದೂಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಪ್ರಧಾನಿಯವರು ನಿಯೋಗವನ್ನು ಸ್ವಾಗತಿಸಿದರು ಮತ್ತು ಅವರು ಅತಿಥಿಗಳಲ್ಲ ಆದರೆ ಅವರ ಸ್ವಂತ ಮನೆಯಲ್ಲಿದ್ದಾರೆ ಎಂದು ಹೇಳಿದರು, ಭಾರತವು ಅವರ ಮನೆಯಾಗಿದೆ ಎಂದು ಹೇಳಿದರು. […]

Advertisement

Wordpress Social Share Plugin powered by Ultimatelysocial