ಏಪ್ರಿಲ್‌ ಒಂದರಿಂದ ರಾಜ್ಯಾದ್ಯಂತ “ಲೋಕಲ್ ಟ್ರೈನ್” ಸಂಚಾರ.

ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ “ಲೋಕಲ್ ಟ್ರೈನ್” ಚಿತ್ರ ಇದೇ ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

‌ಕೊರೋನ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಗಿತ್ತು. ಚಿತ್ರ ಬಿಡುಗಡೆಗೆ ಕೊರೋನ ಕಾರಣವಾಗಿತ್ತು. ಈಗ ಮೊದಲಿನ ವಾತಾವರಣ ಮರುಕಳಿಸಿದ್ದು, ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರಕ್ಕೆ ಸಹಕಾರ ನೀಡಿದ ನಾಯಕ ಡಾರ್ಲಿಂಗ್ ಕೃಷ್ಣ ಆದಿಯಾಗಿ ಸಮಸ್ತರಿಗೂ ಧನ್ಯವಾದ ಅರ್ಪಿಸಿದರು ನಿರ್ಮಾಪಕ ಸುಬ್ರಾಯ ವಾಳ್ಕೆ.

ಬೆಂಗಳೂರಿಗೆ ಸುತ್ತಮುತ್ತಲಿನ ಊರಿನ ಜನರು ಕಾರ್ಯದ ನಿಮಿತ್ತವಾಗಿ, ಓದಿನ ಸಲುವಾಗಿ ಸಾಕಷ್ಟು ಜನರು ದಿನ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಆ ರೈಲಿನಲ್ಲೇ ನಮ್ಮ ಚಿತ್ರದ ಕಥೆ ಸಾಗುತ್ತದೆ. ಭರ್ಜರಿ ಆಕ್ಷನ್ ಸನಿವೇಶಗಳು, ಸುಮಧುರ ಹಾಡುಗಳನ್ನೊಳಗೊಂಡಿರುವ ನಮ್ಮ ಚಿತ್ರ ಎಲ್ಲರಿಗೂ ಹಿಡಿಸಲಿದೆ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.

ನನ್ನದು ಇದರಲ್ಲಿ ಈವರೆಗೂ ಮಾಡಿರದ ಪಾತ್ರ. ನನ್ನ ಅಭಿನಯದ ಹಾಡೊಂದು ಅದ್ದೂರಿಯಾಗಿ ಮೂಡಿಬಂದಿದೆ. ಚಿತ್ರ ಗೆಲುತ್ತದೆ ಎಂಬ ಭರವಸೆಯಿದೆ ಎಂದರು ನಾಯಕಿ ಎಸ್ತರ್ ನರೋನ.

ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. “ಲೋಕಲ್ ಟ್ರೈನ್” ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂದರು ಮತ್ತೊಬ್ಬ ನಾಯಕಿ ಮೀನಾಕ್ಷಿ ದೀಕ್ಷಿತ್.

ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದೀನಿ. ಆದರೆ ನನ್ನ ಪಾತ್ರ‌ ಹಾಸ್ಯದ ಮೂಲಕ ಸಾಗುತ್ತದೆ. ಇದೊಂದು ವಿಭಿನ್ನ ಪಾತ್ರ
ಎನ್ನಬಹುದು ಎಂದರು ಭಜರಂಗಿ ಲೋಕಿ.

ಸಂಕಲನದ ಬಗ್ಗೆ ಪಿ.ಆರ್ ಸೌಂದರ್ ರಾಜ್ ಮಾತನಾಡಿದರು.

ರುದ್ರಮುನಿ ನಿರ್ದೇಶನದ ಈ ಚಿತ್ರಕ್ಕೆ
ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಮೇಶ್ ಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಡಾರ್ಲಿಂಗ್ ಕೃಷ್ಣ, ಮೀನಾಕ್ಷಿ ದೀಕ್ಷಿತ್, ಎಸ್ತರ್ ನರೋನ, ಸಾಧುಕೋಕಿಲ, ಭಜರಂಗಿ ಲೋಕಿ, ಟೆನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮಲಕಿ ಏಕಾದಶಿ ವ್ರತ 2022 ಪಾರಣ ಸಮಯ ಮತ್ತು ವಿಧಿ!

Mon Mar 14 , 2022
ಏಕಾದಶಿಯು ಹಿಂದೂ ಕ್ಯಾಲೆಂಡರ್‌ನಲ್ಲಿ ಪ್ರಮುಖ ದಿನವಾಗಿದೆ ಏಕೆಂದರೆ ಇದು ಭೂಮಿಯ ಮೇಲೆ ಜೀವವನ್ನು ಪೋಷಿಸುವ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಆದ್ದರಿಂದ, ಭಕ್ತರು ದಶಮಿ ತಿಥಿ ಸಂಜೆಯಿಂದ ದ್ವಾದಶಿ ತಿಥಿಯ ಮುಂಜಾನೆಯವರೆಗೆ ವ್ರತವನ್ನು ಆಚರಿಸುತ್ತಾರೆ. ಫಾಲ್ಗುಣದ ಏಕಾದಶಿ, ಶುಕ್ಲ ಪಕ್ಷ (ಫಾಲ್ಗುಣ ಮಾಸದಲ್ಲಿ ಚಂದ್ರನ ವ್ಯಾಕ್ಸಿಂಗ್ ಹಂತದಲ್ಲಿ ಹನ್ನೊಂದನೇ ದಿನ), ಅಮಲಕಿ ಏಕಾದಶಿ ಎಂದು ಉಲ್ಲೇಖಿಸಲಾಗುತ್ತದೆ. ಮತ್ತು ಇದು ಆಮ್ಲಾ ಮರದೊಂದಿಗೆ (ಭಾರತೀಯ ನೆಲ್ಲಿಕಾಯಿ) ಸಂಬಂಧಿಸಿದೆ. ಈ ವರ್ಷ, ಅಮಲಕಿ ಏಕಾದಶಿ […]

Advertisement

Wordpress Social Share Plugin powered by Ultimatelysocial