ಯಾದಗಿರಿ | ತಿಂಥಣಿ ಜಾತ್ರೆ: ಸರಳ ಪೂಜೆಗೆ ಅವಕಾಶ

ಕಕ್ಕೇರಾ: ಕೋವಿಡ್ ಕಾರಣದಿಂದಾಗಿ ತಿಂಥಣಿ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಿ ಕೇವಲ ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.ಮಂಗಳವಾರ ದೇವಾಲಯದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಫೆ.11ರಿಂದ 16ರವರೆಗೆ ನಡೆಯಬೇಕಿದ್ದ ತಿಂಥಣಿಯ ಮೌನೇಶ್ವರ ಜಾತ್ರಾ ಮಹೋತ್ಸವವನ್ನು ಕೋವಿಡ್‌ ಕಾರಣದಿಂದಾಗಿ ರದ್ದುಪಡಿಸಿ, ಕೇವಲ ಸರಳ ಪೂಜಾ ವಿಧಿವಿಧಾನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ’ ಎಂದರು.ಗ್ರಾಮಸ್ಥರು, ಭಕ್ತರು ತಾಲ್ಲೂಕು ಆಡಳಿತದ ನಿರ್ಣಯಕ್ಕೆ ಸಹಕರಿಸಬೇಕು. ನಿಯಮ ಉಲ್ಲಂಘಿಸಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.ಡಿವೈಎಸ್ಪಿ ಡಾ.ದೇವರಾಜ ಬಿ ಮಾತನಾಡಿ, ಭಕ್ತರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಾತ್ರೆಯನ್ನು ರದ್ದುಪಡಿಸಿದ್ದು, ಎಲ್ಲರೂ ಸಹಕರಿಸಬೇಕು ಎಂದರು.ದೇವಾಲಯದ ಮೌನೇಶ್ವರ ಸ್ವಾಮೀಜಿ, ಮೇಲ್ವಿಚಾರಕ ಶಿವಾನಂದಯ್ಯ ಹಿರೇಮಠ, ಉಪ ತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಕಂದಾಯ ನಿರೀಕ್ಷಕ ವಿಠಲ್ ಬಂದಾಳ್, ಗುರುಬಸಪ್ಪ, ಪಿಎಸ್‌ಐ ಕೃಷ್ಣ ಸುಬೇದಾರ, ಪಿಡಿಒ ಶರಣಪ್ಪ ಚವ್ಹಾಣ, ಗ್ರಾಮಲೆಕ್ಕಾಧಿಕಾರಿ ಮಹೇಶ, ಚಿನ್ನಪ್ಪ ಗುರಗುಂಟಾ, ತಿಪ್ಪಣ್ಣ, ಮಲ್ಲಿಕಾರ್ಜುನ ಸಾಹುಕಾರ, ದೇವಿಂದ್ರಪ್ಪ ಅಂಬಿಗೇರ, ಸಂಜೀವನಾಯಕ ಕವಾಲ್ದಾರ್, ಗಂಗಾಧರನಾಯಕ, ರತ್ನರಾಜ ಶಾಲಿಮನಿ, ಬೈರಣ್ಣ ಅಂಬಿಗೇರ ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇರಳ: ವೆಂಟಿಲೇಟರ್‌ನಿಂದ ತೆಗೆದ ಹಾವು ಹಿಡಿಯುತ್ತಿದ್ದ ವಾವಾ ಸುರೇಶ್; ಸುಧಾರಣೆ ತೋರಿಸುತ್ತದೆ

Thu Feb 3 , 2022
ಖ್ಯಾತ ಉರಗ ತಜ್ಞ ಮತ್ತು ವನ್ಯಜೀವಿ ಸಂರಕ್ಷಣಾಧಿಕಾರಿ ವಾವಾ ಸುರೇಶ್ ಅವರನ್ನು ರಕ್ಷಿಸಲು ಹೋದ ನಾಗರಹಾವು ಕಚ್ಚಿದ ನಂತರ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ, ಅವರು ಸುಧಾರಣೆಯ ಲಕ್ಷಣಗಳನ್ನು ತೋರಿಸಿದ ನಂತರ ಗುರುವಾರ ವೆಂಟಿಲೇಟರ್ ಬೆಂಬಲವನ್ನು ತೆಗೆದುಹಾಕಲಾಯಿತು. ಇಂದು ಬೆಳಗ್ಗೆ ಅವರು ಉಸಿರಾಡುತ್ತಿರುವ ಹಿನ್ನೆಲೆಯಲ್ಲಿ ಲೈಫ್ ಸಪೋರ್ಟ್ ತೆಗೆಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ರಾತ್ರಿ, ಅವರು ತಮ್ಮ ಕಣ್ಣುಗಳನ್ನು ತೆರೆದರು […]

Advertisement

Wordpress Social Share Plugin powered by Ultimatelysocial