ಗೋವಾ ರಾಜ್ಯ ಪಂಚಾಯತ್ ಚುನಾವಣೆ ಮುಂದೂಡಿಕೆ ಅರ್ಜಿ ವಜಾ

 

ಪಣಜಿ: ಗೋವಾ ರಾಜ್ಯ ಪಂಚಾಯತ್ ಚುನಾವಣೆಯನ್ನು 30 ದಿನಗಳ ಕಾಲ ಮುಂದೂಡುವಂತೆ ಕೋರಿ ರಾಜ್ಯ ಸರ್ಕಾರ ಮುಂಬಯಿ ಹೈಕೋರ್ಟ ಗೋವಾ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು.‌

ಆದರೆ ಇದನ್ನು ನ್ಯಾಯಪೀಠ ವಜಾ ಗೊಳಿಸಿದೆ. ಇದರಿಂದಾಗಿ ಮುಂಬಯಿ ಹೈಕೋರ್ಟ್ ನೀಡಿರುವ ಆದೇಶದಂತೆ ಗೋವಾ ಸರ್ಕಾರ ರಾಜ್ಯದಲ್ಲಿ ಆಗಷ್ಟ್ 12 ರ ಒಳಗಾಗಿ ಪಂಚಾಯತ್ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.

ರಾಜ್ಯದಲ್ಲಿನ 186 ಗ್ರಾಮ ಪಂಚಾಯತಿಗಳ ಅಧಿಸೂಚನೆಯನ್ನು ಮೂರು ದಿನಗಳಲ್ಲಿ ಹೊರಡಿಸಿ 15 ದಿನಗಳಲ್ಲಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮುಂಬಯಿ ಹೈಕೋರ್ಟ್ ಗೋವಾ ಪೀಠವು ಆದೇಶಿಸಿದೆ.

ಸದ್ಯ ಮಳೆಗಾಲ ಮತ್ತು ಗೋವಾ ವಿಧಾನಸಭೆ ಅಧಿವೇಶನ ಉಲ್ಲೇಖಿಸಿ ಗ್ರಾ.ಪಂ ಚುನಾವಣೆಯನ್ನು ಸಪ್ಟೆಂಬರ್ 12 ರವರೆಗೆ ಮುಂದೂಡುವಂತೆ ಕೋರಿ ಗೋವಾ ಸರ್ಕಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಅಲೋಕ್ ಆರಾಧೆ ನೇಮಕ

Thu Jun 30 , 2022
ಬೆಂಗಳೂರು: ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಅವರು ಜುಲೈ 2ರಂದು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರನ್ನು ಕರ್ನಾಟಕ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಗುರುವಾರ ನೇಮಕ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಆರಾಧೆ ಅವರನ್ನು ನೇಮಿಸಿರುವ ಕುರಿತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ. ನ್ಯಾಯಮೂರ್ತಿ ಆರಾಧೆ ಅವರು ಕರ್ನಾಟಕ ಹೈಕೋರ್ಟ್ ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದು, ಜುಲೈ […]

Advertisement

Wordpress Social Share Plugin powered by Ultimatelysocial