ಗೋಧಿ ರಫ್ತು ನಿಷೇಧ

ನವದೆಹಲಿ,ಜ.8- ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಮಾರುಕಟ್ಟೆಯಲ್ಲಿನ ದಾಸ್ತಾನು ಪೂರೈಕೆ ಮತ್ತು ಅಗತ್ಯವಿರುವ ವಿತರಣೆ ಗಣನೆಗೆ ತೆಗೆದುಕೊಂಡು ಗೋದಿ ರಪ್ತು ನಿಷೇಧ ಮಾಡಿದ್ದ ಸರ್ಕಾರ , ಈ ಬಗ್ಗೆ ಮರುಚಿಂತನೆ ನಡೆಸಲು‌ ಮುಂದಾಗಿದೆ.ಡಿಸೆಂಬರ್ ನಂತರ ಉಚಿತ ಆಹಾರ ಧಾನ್ಯಗಳ ಯೋಜನೆ ಸ್ಥಗಿತಗೊಳಿಸಿದ ನಂತರ, ಗೋಧಿ ರಫ್ತು ಮೇಲೆ 2022 ರ ಮೇ ತಿಂಗಳಲ್ಲಿ ನಿಷೇಧ ತೆಗೆದುಹಾಕುವ ಕುರಿತು ಚಿಂತನೆ ನಡೆದಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.ಗೋದಿ ದಾಸ್ತಾನುಗಳ ಸ್ಥಿತಿಗತಿ ನಿರ್ಣಯಿಸಲು ಸರ್ಕಾರ ಅಂತರ-ಸಚಿವಾಲಯಗಳ ನಡುವೆ ಸಮಾಲೋಚನೆಗಳಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ದೇಶದ ಬಡಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 2020ರ ಏಪ್ರಿಲ್ ತಿಂಗಳಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಅಡಿಯಲ್ಲಿ ಹೆಚ್ಚುವರಿ ಹಂಚಿಕೆ ಮುಗಿದ ನಂತರ ಒಟ್ಟಾರೆ ವಿತರಣೆಯು ಈಗ ಪ್ರಮಾಣದಲ್ಲಿ ಕಡಿಮೆಯಾಗಿದೆ.ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಸುಮಾರು 81.35 ಕೋಟಿ ಜನರಿಗೆ ತಿಂಗಳಿಗೆ 5 ಕೆಜಿ ಆಹಾರ ಉಚಿತವಾಗಿ ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.ಇದರ ಜೊತೆಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಪಡಿತರ ಆಹಾರಧಾನ್ಯಗಳನ್ನು ಲಭ್ಯವಾಗುವಂತೆ ಮಾಡಲು ಸರ್ಕಾರ ನಿರ್ಧರಿಸಿದೆ‌.ಈ ವರ್ಷದ ಜನವರಿ ಯಿಂದ ಒಂದು ವರ್ಷದವರೆಗೆ ಅಡಿಯಲ್ಲಿ ಉಚಿತವಾಗಿ ಆಹಾರ ಧಾನ್ಯ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.”ಕೋವಿಡ್ ಸಂಕಷ್ಟದ ಯೋಜನೆಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಗಲಿಲ್ಲ, ಸಾರ್ವಜನಿಕ ಬಳಕೆಗೆ ಸಂವೇದನಾಶೀಲರಾಗಿದ್ದೇವೆ. ಇದರ ಪರಿಣಾಮವಾಗಿ, ಹೆಚ್ಚಿನ ಆಹಾರ ದಾಸ್ತಾನುಗಳನ್ನು ಉಚಿತ ವಿತರಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಕೇಂದ್ರದ ದಾಸ್ತಾನಿನಲ್ಲಿ ಕಳೆದ ಆರು ತಿಂಗಳಿನಿಂದ ಪ್ರತಿ ತಿಂಗಳು ದಶಲಕ್ಷ ಟನ್‌ಗಳನ್ನು ಹೊಂದಿವೆ. ಭಾರತೀಯ ಆಹಾರ ನಿಗಮದ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 1 ರಂದು ಗೋಧಿ ದಾಸ್ತಾನು ಆರು ವರ್ಷಗಳ ಕನಿಷ್ಠ 19.02 ದಶಲಕ್ಷ ಟನ್‌ಗೆ ತಲುಪಿದೆ ಎಂದು ತಿಳಿಸಲಾಗಿದೆ.ಗೋಧಿ ಬೆಳೆಗೆ ವಿಪರೀತ ಶಾಖದ ಪರಿಣಾಮ ಕಳೆದ ವರ್ಷದಂತೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವ್ಯಕ್ತಿ ಹತ್ಯೆ: ದಂಪತಿ ಸೆರೆ

Fri Jan 13 , 2023
ಬೆಂಗಳೂರು,ಜ.೮- ಕೊಲೆ ಮಾಡಿ ದ್ವಿಚಕ್ರ ವಾಹನದಲ್ಲಿ ಮೃತದೇಹವನ್ನು ಸಾಗಿಸಿ ಮೃತದೇಹವನ್ನು ನಿರ್ಜನ ಪ್ರದೇಶದ ರಸ್ತೆಯ ಬದಿ ಬಂದಿದ್ದ ಪ್ರಕರಣವನ್ನು ಬೇಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ದಂಪತಿ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ರೀನಾ, ಗಂಗೇಶ್ ಹಾಗೂ ಬಿಜೋಯ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ದಂಪತಿ ನಿಬಾಶೀಶ್ ಪಾಲ್ ಎಂಬಾತನನ್ನು ಕೊಲೆ ಮಾಡಿದ ನಂತರ ಹೆಣ ಸಾಗಿಸಲು ಮತ್ತೊಬ್ಬ ಆರೋಪಿ ಬಿಜೋಯ್ ನ ಸಹಾಯ ಪಡೆದಿದ್ದರು ಎನ್ನುವುದು ತನಿಖೆ ವೇಳೆ […]

Advertisement

Wordpress Social Share Plugin powered by Ultimatelysocial