ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿ!

ವದೆಹಲಿ : ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿ ಸಿಕ್ಕಿದ್ದು, ಚಿನ್ನದ ಆಭರಣಗಳಲ್ಲಿ ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸಿದ ನಂತ್ರ ಈಗ ಚಿನ್ನದ ಗಟ್ಟಿಗೂ ಹಾಲ್ಮಾರ್ಕಿಂಗ್ ಅಗತ್ಯವಾಗಬಹುದು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್   ಉದ್ಯಮಕ್ಕೆ ಸಂಬಂಧಿಸಿದ ಜನರ ಬೇಡಿಕೆಯನ್ನ ಗಮನದಲ್ಲಿಟ್ಟುಕೊಂಡು ಒಂದು ಗುಂಪನ್ನ ರಚಿಸಿದೆ.

ಈ ಕುರಿತು ಮಾಹಿತಿ ನೀಡಿದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಡೈರೆಕ್ಟರ್ ಜನರಲ್ ಪ್ರಮೋದ್ ಕುಮಾರ್ ತಿವಾರಿ, ಹಾಲ್ಮಾರ್ಕಿಂಗ್ ಗುಣಮಟ್ಟದ ಪ್ರಮಾಣಪತ್ರದಂತೆ 288 ಜಿಲ್ಲೆಗಳಲ್ಲಿ ಜುಲೈ 1, 2022 ರಿಂದ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು. 14 ಕ್ಯಾರೆಟ್, 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನ ಮತ್ತು ಕಲಾಕೃತಿಗಳಿಗೆ ಇದು ಅವಶ್ಯಕವಾಗಿದೆ.

ಚಿನ್ನದ ಗಟ್ಟಿಯು ಆಭರಣಗಳ ಶುದ್ಧತೆಯನ್ನ ಖಚಿತಪಡಿಸುತ್ತದೆ.!
ಚಿನ್ನದ ಗಟ್ಟಿಗೆ ಹಾಲ್ಮಾರ್ಕ್ ಕಡ್ಡಾಯಗೊಳಿಸಿದಾಗ ಮಾತ್ರ ಆಭರಣಗಳ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಬಹುದು ಎಂಬುದು ಗ್ರಾಹಕರ ಬಹುದಿನಗಳ ಬೇಡಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಇದಕ್ಕಾಗಿ ತನ್ನ ಮಾರ್ಗಸೂಚಿಗಳ ಕರಡನ್ನ ಸಿದ್ಧಪಡಿಸಿದೆ. ಚಿನ್ನದ ಗಟ್ಟಿಯು ಒಂದು ಕಚ್ಚಾ ವಸ್ತುವಾಗಿದ್ದು, ಅದರ ಮೂಲಕ ಆಭರಣಗಳನ್ನ ತಯಾರಿಸಲಾಗುತ್ತದೆ. ಇದರೊಂದಿಗೆ, ಪ್ರಮೋದ್ ಬಿಐಎಸ್ ಮಹಾನಿರ್ದೇಶಕರು ಈ ಮಾರ್ಗಸೂಚಿಯ ಕರಡು ಕುರಿತು ಜನರಿಂದ ಸಲಹೆಗಳನ್ನ ತೆಗೆದುಕೊಳ್ಳುವುದಾಗಿ ಮತ್ತು ಅದರಲ್ಲಿ ಉತ್ತಮ ಕಾಮೆಂಟ್ಗಳನ್ನು ಸೇರಿಸುವುದಾಗಿ ಹೇಳಿದ್ದಾರೆ.

ಗೋಲ್ಡ್ ಬುಲಿಯನ್ ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸುವ ನಿರ್ಧಾರದ ಕುರಿತು ಎರಡು ಸಭೆಗಳನ್ನ ನಡೆಸಲಾಗಿದೆ. ಆಮದು ಮಾಡಿಕೊಳ್ಳುವ ಚಿನ್ನದ ಗುಣಮಟ್ಟ ಮತ್ತು ಶುದ್ಧತೆಯನ್ನ ರಿಫೈನರ್ಗಳು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಈ ನಿರ್ಧಾರದ ಹಿಂದಿನ ಕಾರಣ. ಇದರೊಂದಿಗೆ ಚಿನ್ನದ ಆಭರಣಗಳ ಪರಿಶುದ್ಧತೆಯ ಮೇಲೂ ಇದರ ಪರಿಣಾಮ ಕಂಡುಬರಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತನ್ನ ಕಾಲೇಜ್ ಕ್ರಶ್ ಯಾರೆಂಬುದನ್ನು ಬಿಚ್ಚಿಟ್ಟ ರಿಷಬ್ ಶೆಟ್ಟಿ!

Tue Mar 7 , 2023
ಮೊನ್ನೆಯಷ್ಟೇ ನಾಲ್ಕನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 2022ರಲ್ಲಿ ಬಿಡುಗಡೆಗೊಂಡು ಅತ್ಯುತ್ತಮ ಸಾಧನೆ ಮಾಡಿದ ಚಿತ್ರಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಳೆದ ವರ್ಷ ಅಬ್ಬರಿಸಿದ ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಚಿತ್ರಗಳು ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡವು. ನಿರ್ದೇಶನದ ಜತೆಗೆ ನಟನೆಯನ್ನೂ ಸಹ ಮಾಡಿ ಕಾಂತಾರ ಚಿತ್ರದ ದೊಡ್ಡ ಯಶಸ್ಸಿನಲ್ಲಿ ಪ್ರಮುಖ […]

Advertisement

Wordpress Social Share Plugin powered by Ultimatelysocial