ಮನೆ ಕಟ್ಟೋರಿಗೆ ಗುಡ್ ನ್ಯೂಸ್ :

ವದೆಹಲಿ : ಫೆಬ್ರವರಿ 18 ರಂದು ಜಿಎಸ್ ಟಿ ಮಂಡಳಿ ಸಭೆ ನಡೆಯಲಿದ್ದು, ಸಿಮೆಂಟ್ ಮೇಲಿನ ದರಗಳನ್ನು ಕಡಿತಗೊಳಿಸಲು ನಿರ್ಧರಿಸಲಿದೆ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.

ಫೆಬ್ರವರಿ 18ರಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದೆ. ಹಣಕಾಸು ಸಚಿವರು ಘೋಷಿಸಿದಂತೆ ಸಿಮೆಂಟ್ ಮೇಲಿನ ದರ ಕಡಿತದ ಬಗ್ಗೆ ನಿರ್ಧರಿಸಲು ಫಿಟ್ ಮೆಂಟ್ ಸಮಿತಿ ಸಭೆ ಸೇರಲಿದೆ. ಪ್ರಸ್ತುತ, ಸಿಮೆಂಟ್ ಮೇಲೆ ಶೇಕಡಾ 28 ರಷ್ಟು ಜಿಎಸ್ಟಿ ಇದೆ ಎಂದು ಸಿಬಿಐಸಿ ಅಧ್ಯಕ್ಷ ವಿವೇಕ್ ಜೋಹ್ರಿ ಹೇಳಿದ್ದಾರೆ.

ಮೂಲಸೌಕರ್ಯ ವಲಯಕ್ಕೆ ಪ್ರಮುಖ ಇನ್ಪುಟ್ ಆಗಿರುವ ಸಿಮೆಂಟ್ ಮೇಲಿನ 28% ಸರಕು ಮತ್ತು ಸೇವಾ ತೆರಿಗೆಯನ್ನು ಕಡಿತಗೊಳಿಸುವ ಉದ್ಯಮದ ಬೇಡಿಕೆಯನ್ನು ಜಿಎಸ್ಟಿ ಕೌನ್ಸಿಲ್ ಅಡಿಯಲ್ಲಿ ಫಿಟ್ಮೆಂಟ್ ಸಮಿತಿಗೆ ಕೊಂಡೊಯ್ಯಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಸೂಚಿಸಿದ್ದರು. ಹೀಗಾಗಿ ಫೆ. 18 ರಂದು ನಡೆಯಲಿರುವ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಸಿಮೆಂಟ್ ಬೆಲೆಯಲ್ಲಿ ಕಡಿಮೆ ಮಾಡುವ ಸಾಧ್ಯತೆ ಇದ್ದು, ಪ್ರತಿ ಚೀಲಕ್ಕೆ 30 ರಿಂದ 40 ರೂ.ಕಡಿತವಾಗಬಹುದು ಎನ್ನಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ, ತುಮಕೂರು ರಸ್ತೆ- ಬಳ್ಳಾರಿ ರಸ್ತೆ ಜೋಡಿಸುವ ಪೆರಿಫೆರಲ್ ರಿಂಗ್ ರೋಡ್‌: ಈ ಯೋಜನೆಗಳ ಮಾಹಿತಿ

Sat Feb 11 , 2023
ಬೆಂಗಳೂರು, ಫೆಬ್ರವರಿ 11: ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಶುಕ್ರವಾರ ತಮ್ಮ ಭಾಷಣದಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಸಂಕಷ್ಟಗಳಿಂದ ರಾಜ್ಯದ ಆರ್ಥಿಕತೆಯು ಚೇತರಿಸಿಕೊಂಡಿದೆ ಮತ್ತು ಸರ್ಕಾರವು ತನ್ನ ಆದಾಯ ಸಂಗ್ರಹದ ಗುರಿಯ ಶೇ 91 ಅನ್ನು ಸಾಧಿಸಿದೆ ಎಂದು ಹೇಳಿದರು. ಜನವರಿ 2022 ಕ್ಕೆ ಹೋಲಿಸಿದರೆ ಕರ್ನಾಟಕದ ತೆರಿಗೆ ಆದಾಯವು 2023ರ ಜನವರಿಯಲ್ಲಿಯೇ ಶೇ 21 ರಷ್ಟು ಏರಿಕೆ ಕಂಡಿದೆ […]

Advertisement

Wordpress Social Share Plugin powered by Ultimatelysocial