ಬಿ.ವಿಠ್ಠಲಾಚಾರ್ಯ ಚಲನಚಿತ್ರೋದ್ಯಮದಲ್ಲಿ ದೊಡ್ಡ ಹೆಸರು.

ಬಿ.ವಿಠ್ಠಲಾಚಾರ್ಯ ಚಲನಚಿತ್ರೋದ್ಯಮದಲ್ಲಿ ದೊಡ್ಡ ಹೆಸರು. ಕನ್ನಡಿಗರಾದ ಅವರು ತೆಲುಗು ಮತ್ತು ಕನ್ನಡ ಚಲನಚಿತ್ರಗಳ ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಪ್ರಸಿದ್ಧರಾದವರು.ವಿಠ್ಠಲ ಆಚಾರ್ಯರು 1920ರ ಜನವರಿ 20ರಂದು ಅಂದಿನ ಉಡುಪಿ ತಾಲೂಕಿನ ಉದ್ಯಾವರದಲ್ಲಿ ಜನಿಸಿದರು. ಅವರಿಗೆ ಬಾಲ್ಯದಿಂದಲೂ ನಾಟಕ, ಬಯಲಾಟ ಮತ್ತು ಯಕ್ಷಗಾನಗಳಲ್ಲಿ ಅಪಾರ ಆಸಕ್ತಿ. ಅವರ ತಂದೆ ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಒಬ್ಬ ಹೆಸರಾಂತ ಆಯುರ್ವೇದ ವೈದ್ಯರಾಗಿದ್ದರು.ವಿಠ್ಠಲಾಚಾರ್ಯರು ಓದಿದ್ದು ಮೂರನೆ ತರಗತಿವರೆಗೆ ಮಾತ್ರಾ. ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ ಮನೆಬಿಟ್ಟು ಹೊರಟರು. ಅರಸೀಕೆರೆ ತಲುಪಿದ ಅವರು ನಾನಾ ಕೆಲಸಗಳನ್ನು ಮಾಡಿ ಕೊನೆಗೆ ತನ್ನ ಸೋದರ ಸಂಬಂಧಿಯಿಂದ ಉಡುಪಿ ಹೋಟೆಲೊಂದನ್ನು ಖರೀದಿಸಿ ಯಶಸ್ವಿಯಾಗಿ ನಡೆಸಿದರು. ಕೆಲವು ಸ್ನೇಹಿತರ ಜೊತೆ ಬ್ರಿಟಿಷ್ ಸರ್ಕಾರದ ವಿರುದ್ಧ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿ ಬಂಧಿಯಾದರು. ಬಿಡುಗಡೆಯಾದ ನಂತರ, ತನ್ನ ಕಿರಿಯ ಸೋದರನಿಗೆ ತಮ್ಮ ಹೋಟೆಲ್ ಉದ್ಯಮವನ್ನು ಹಸ್ತಾಂತರಿಸಿದರು.ವಿಠ್ಠಲಾಚಾರ್ಯರು ಮುಂದೆ ತಮ್ಮ ಸ್ನೇಹಿತ ಡಿ. ಶಂಕರ್ ಸಿಂಗ್ ಮತ್ತು ಇತರರ ಜೊತೆಗೂಡಿ ಹಾಸನ ಜಿಲ್ಲೆಯಲ್ಲಿ ಒಂದು ಟೂರಿಂಗ್ ಟಾಕೀಸ್ ಅನ್ನು ಸ್ಥಾಪಿಸಿದರು. ಮುಂದೆ ಒಂದು ಇದ್ದ ಟೂರಿಂಗ್ ಟಾಕೀಸು ನಾಲ್ಕಾಗಿ ಬೆಳೆಯಿತು. ತಾವು ಪ್ರದರ್ಶಿಸುತ್ತಿದ್ದ ಪ್ರತಿಯೊಂದು ಚಲನಚಿತ್ರವನ್ನೂ ನೋಡುತ್ತಿದ್ದ ಅವರಲ್ಲಿ ವಿಶಿಷ್ಟ ರೀತಿಯ ಚಿಂತನೆಗಳು ಹೊಳೆದವು.ವಿಠ್ಠಲಾಚಾರ್ಯರು 1944ರಲ್ಲಿ ಮೈಸೂರಿಗೆ ತೆರಳಿ ಗೆಳೆಯ ಶಂಕರ್ ಸಿಂಗ್ ಮತ್ತು ಇತರರ ಜೊತೆಗೂಡಿ ಮಹಾತ್ಮ ಪಿಕ್ಚರ್ಸ್ ಹೆಸರಿನಲ್ಲಿ ಒಂದು ಚಿತ್ರನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು. 1944ರಿಂದ 1953ರ ಅವಧಿಯಲ್ಲಿ 18 ಕನ್ನಡ ಚಿತ್ರಗಳನ್ನು ನಿರ್ಮಿಸಿದರು. ಈ ಚಿತ್ರಗಳಲ್ಲಿ ಕೆಲವನ್ನು ವಿಠ್ಠಲಾಚಾರ್ಯರೂ, ಕೆಲವನ್ನು ಶಂಕರಸಿಂಗ್ ಅವರೂ ಇನ್ನು ಕೆಲವನ್ನು ಉಳಿದವರೂ ನಿರ್ದೇಶಿಸಿದರು. ಅವುಗಳಲ್ಲಿ ನಾಗಕನ್ಯಾ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ ಮುಂತಾದವು ಬಹಳ ಯಶಸ್ವಿಯಾದವು. ಕಾಲಾನುಕ್ರಮದಲ್ಲಿ ಮಹಾತ್ಮ ಚಿತ್ರಸಂಸ್ಥೆಯಲ್ಲಿ ವಿಠ್ಠಲಾಚಾರ್ಯ ಮತ್ತು ಶಂಕರ್ ಸಿಂಗ್ ಇಬ್ಬರೇ ಉಳಿದರು. 1953 ರಲ್ಲಿ ಈ ಜೋಡಿಯೂ ಬೇರೆ ಆಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಇಬ್ಬರು ವೈದ್ಯರು ಸೇರಿ 7 ಮಂದಿ ವಿದ್ಯಾರ್ಥಿಗಳ ಬಂಧನ.

Sun Jan 22 , 2023
ಮಂಗಳೂರು, ಜನವರಿ, 22: ನಶೆಯಲ್ಲಿದ್ದ ವೈದ್ಯರ ಬೆನ್ನು ಹತ್ತಿದ್ದ ಪೊಲೀಸರು ಮತ್ತೆ 9 ಮಂದಿಯನ್ನು‌ ಬಂಧನ ಮಾಡಿದ್ದಾರೆ. ಇಬ್ಬರು ವೈದ್ಯರು ಸೇರಿದಂತೆ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಪೊಲೀಸರ ಅತಿಥಿಗಳಾಗಿದ್ದು, ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ವೈದ್ಯರ ಗಾಂಜಾ ಘಾಟಿನ ನಶೆ ಇನ್ನೂ ಇಳಿಯುವ ಲಕ್ಷಣ ಕಾಣುತ್ತಿಲ್ಲ‌. ಪೊಲೀಸರು ಕೆದಕಿದಷ್ಟು ಹೆಚ್ಚು ಮಂದಿ ಈ ಪ್ರಕರಣದಲ್ಲಿ ಬಲೆಗೆ ಬೀಳುತ್ತಲೇ ಇದ್ದಾರೆ. ವೈದ್ಯರ ಗಾಂಜಾ ಘಾಟಿನ ಹಿಂದೆ‌ ಬಿದ್ದ ಪೊಲೀಸರು ಇದೀಗ […]

Advertisement

Wordpress Social Share Plugin powered by Ultimatelysocial