ಸದಾ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುವ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ!

ಮುಂಬೈಸದಾ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುವ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಇಟ್ಟುಕೊಂಡು ಟಾಲಿವುಡ್​​ಅನ್ನು ಟೀಕೆ ಮಾಡಿದ್ದಾರೆ. ‘ತೆಲುಗು ಚಿತ್ರರಂಗ ಪ್ರಪಂಚದಾದ್ಯಂತ ಹೆಸರು ಮಾಡುತ್ತಿದೆ.ಟಾಲಿವುಡ್​ನ ಜನಪ್ರಿಯತೆಯು ಕೇವಲ ತೆಲುಗು ನಾಡಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಪ್ರಪಂಚವು ಈಗ ಟಾಲಿವುಡ್ ಬಗ್ಗೆ ಚರ್ಚಿಸುತ್ತದೆ. ಬೆಳ್ಳಿತೆರೆಯಿಂದ ಒಟಿಟಿ ಪ್ಲಾಟ್‌ಫಾರ್ಮ್‌ ವರೆಗೆ ತೆಲುಗು ಸಿನಿಮಾ ಸದ್ದು ಮಾಡುತ್ತಿದೆ. ಹೊರ ದೇಶಗಳಲ್ಲೂ ಜನರು ತೆಲುಗು ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ’ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಮಾತನಾಡಿದ್ದರು. ರಾಜಮೌಳಿ ನಿರ್ದೇಶನದ ‘ಬಹುಬಲಿ’ ಸರಣಿಯ ಎರಡೂ ಚಿತ್ರಗಳು ಹಿಟ್​ ಆಗಿದ್ದವು. ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಕಳೆದ ವರ್ಷಾಂತ್ಯಕ್ಕೆ ತೆರೆಕಂಡ ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರ ಕೂಡ ಒಳ್ಳೆಯ ಹೆಸರು ಮಾಡಿತ್ತು. ಈ ಚಿತ್ರಗಳನ್ನು ಮೋದಿ ಹೊಗಳಿದ್ದರು. ಈ ಸಿನಿಮಾಗಳು ನಮ್ಮ ಹೆಮ್ಮೆ ಎಂದು ಕೊಂಡಾಡಿದ್ದರು. ಈ ವಿಚಾರದಲ್ಲಿ ರಾಮ್​ ಗೋಪಾಲ್​ ವರ್ಮಾ ಟಾಲಿವುಡ್​ಅನ್ನು ಟೀಕಿಸಿದ್ದಾರೆ.’ಟಾಲಿವುಡ್​ ಮಂದಿ ಪ್ರಧಾನಿ ಮೋದಿ ಹೊಗಳಿದ ವಿಚಾರಕ್ಕೆ ಸಂತಸ ಪಡುವ ಅಗತ್ಯವಿಲ್ಲ. ಅವರು ‘ಬಾಹುಬಲಿ’ ಹಾಗೂ ‘ಪುಷ್ಪ’ ಚಿತ್ರಗಳ ಬಗ್ಗೆ ಮಾತ್ರ ಮಾತನಾಡಿದ್ದಾರೆ. ನಾವು ಪ್ರತಿ ವರ್ಷ ಮಾಡುವ ಇತರ 150 ಚಿತ್ರಗಳ ಬಗ್ಗೆ ಅವರು ಮಾತನಾಡಿಲ್ಲ. ರಾಜಮೌಳಿ ಹಾಗೂ ಅಲ್ಲು ಅರ್ಜುನ್ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್‌ವುಡ್ ಅನ್ನು ಹೊಗಳುತ್ತಿದ್ದರು’ ಎಂದಿದ್ದಾರೆ. ಈ ಮೂಲಕ ಆ ದಿಗ್ಗಜರು ಇರುವುದಕ್ಕೆ ಟಾಲಿವುಡ್​​​ನ ಖ್ಯಾತಿ ಹೆಚ್ಚಿದೆ. ಇದಕ್ಕೆ ಎಲ್ಲಾ ಚಿತ್ರಗಳು ಕಾರಣವಾಗಿಲ್ಲ. ಕೆಲವೇ ಸ್ಟಾರ್​ಗಳು ಇದಕ್ಕೆ ಸಹಾಯ ಮಾಡಿದ್ದಾರೆ ಎಂಬರ್ಥದಲ್ಲಿ ಅವರು ಬರೆದುಕೊಂಡಿದ್ದಾರೆ. ಇನ್ನೂ ಮೋದಿ ಜನರನ್ನ ಮೆಚ್ಚಿಸಲು ಹೀಗೆ ಹೇಳಿದ್ದಾರೆ ಅಂತಾ ವರ್ಮಾ ಟೀಕಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್- ಕೇಸರಿ ಶಾಲು ವಿವಾದದ್ದಲ್ಲಿ ಕಲ್ಲುತೂರಾಟ,

Tue Feb 8 , 2022
ರಬಕವಿ-ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಹಾಕುವ ಕುರಿತು ಎರಡು ಕೋಮಿನ ವಿದ್ಯಾರ್ಥಿಗಳ ನಡುವೆ ವಿವಾದ ಉಂಟಾಗಿದ್ದು, ಕಾಲೇಜು ಎದುರಿಗೆ ಕಲ್ಲು ತೂರಾಟ ನಡೆಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.ಕಾಲೇಜಿಗೆ ರಜೆ ನೀಡಿ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಲು ಪ್ರಾಧ್ಯಾಪಕರು ಹರಸಾಹಸ ಪಡುತ್ತಿದ್ದು, ಶಾಲೆ ಹತ್ತಿರ ಜಮಾವಣೆಗೊಂಡ ಎರಡು ಕೋಮಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಿಗುವಿನ ವಾತಾವರಣ ಉಂಟಾಗಿದೆ.ಹಿಜಾಬ್ ಧರಿಸಿದ ವಿದ್ಯಾಥಿ೯ನಿಯರನ್ನು ಗೇಟ್ […]

Advertisement

Wordpress Social Share Plugin powered by Ultimatelysocial