ಕೋಟಿ ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರಿ ಇಲಾಖೆಗಳು.

ಆ ಇಲಾಖೆ ಎಲ್ಲರ ಮನೆಗೆ ಹಾಗೂ ಸಂಘ ಸಂಸ್ಥೆಗಳಿಗೆ ಬೆಳಕಾಗಿರುವ ಇಲಾಖೆ. ಎಲ್ಲರಿಗೂ ಬೆಳಕಾಗಿರುವ ಇಲಾಖೆ ಸರ್ಕಾರಿ ಹಾಗೂ ಅರೆ ಸರ್ಕಾರಿ ಸ್ವಾಮ್ಯದಿಂದ ಕತ್ತಲು ಆವರಿಸುವಂತಾಗಿದೆ. ಹಾಗಿದ್ದರೇ ಅಲ್ಲಿ ಆಗಿದ್ದಾದರೂ ಏನು.. ಆ ಇಲಾಖೆ ಆದರೂ ಯಾವುದು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್  ಗ್ರಾಮೀಣ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯು 63ಕ್ಕೂ ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವುದರಿಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು (ಹೆಸ್ಕಾಂ) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೌದು ಹೊರೆ ಸರಿದೂಗಿಸಿಕೊಳ್ಳಲು ಕೋವಿಡ್‌ ಸ್ಥಿತಿಯಲ್ಲಿಯೂ ವಿದ್ಯುತ್‌ ದರ ಏರಿಕೆಗೆ ಹೆಸ್ಕಾಂ ಮುಂದಾಗಿದ್ದು, ಸರ್ಕಾರಿ ಸ್ವಾಮ್ಯದ ಇಲಾಖೆಯಿಂದ 63ಕ್ಕೂ ಹೆಚ್ಚು ಬಾಕಿ ಉಳಿದಿರುವುದು ಹೆಸ್ಕಾಂಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಈ ಹಿಂದೆ ಸುಮಾರು ಸರ್ಕಾರಿ ಇಲಾಖೆಗಳಿಂದ ಬಾಕಿ ಉಳಿದಿದ್ದ 500 ಕೋಟಿಗೂ ಅಧಿಕ ಬಾಕಿ ಕಂತುಗಳಲ್ಲಿ ಪಾವತಿಯಾಗಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಒಂದೇ ಇಲಾಖೆಯೇ 63 ಕೋಟಿ ಬಾಕಿ ಉಳಿಸಿಕೊಂಡಿದೆ.ಇನ್ನೂ ಕುಡಿಯುವ ನೀರು ಹಾಗೂ ಬೀದಿ ದೀಪಗಳಿಗೆ ಬಳಸುವ ವಿದ್ಯುತ್‌ ಬಿಲ್‌ ಬಾಕಿ ಪ್ರತಿ ವರ್ಷ ಹೆಚ್ಚುತ್ತಿದೆ. ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯು ದೊಡ್ಡಮಟ್ಟದ ಬಾಕಿ ಉಳಿಸಿಕೊಂಡಿದೆ. ಈಗಾಗಲೇ ಸುಮಾರು ಬಾಕಿ ಮೊತ್ತ ಪಾವತಿಯಾಗಿದ್ದು, ಪಾಲಿಕೆ, ನಗರಸಭೆ, ತಾಲೂಕು ಆಡಳಿತದ ಆರು ತಿಂಗಳ ಅವಧಿಯ ರೀತಿಯಲ್ಲಿ ಪಾವತಿಯಾಗುತ್ತಿದ್ದು, ಒಂದೇ ಇಲಾಖೆಯ ದೊಡ್ಡ ಮೊತ್ತ ಬಾಕಿ ಉಳಿದಿರುವುದು ನಿಜಕ್ಕೂ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ.ಒಟ್ಟಿನಲ್ಲಿ ಸರ್ಕಾರದ ಅಂಗ ಸಂಸ್ಥೆಗಳೇ ಈ ರೀತಿಯಲ್ಲಿ ಬಾಕಿ ಉಳಿಸಿಕೊಂಡರೇ ಹೇಗೆ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅಲ್ಲದೇ ಇವರು ಮಾಡುವ ಬಾಕಿಯಿಂದ ಇದರ ಹೊರೆಯನ್ನು ಸಾರ್ವಜನಿಕರು ಹೊರಬೇಕಾಗಿರುವುದು ವಿಪರ್ಯಾಸಕರ ಸಂಗತಿಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಮಗಳೂರು ಉತ್ಸವಕ್ಕೆ ಕ್ಷಣಗಣೆ.

Wed Jan 18 , 2023
  ಚಿಕ್ಕಮಗಳೂರು, ಜನವರಿ, 18: ಜಿಲ್ಲಾ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ‌.ಎನ್.ರಮೇಶ್ ಮಾಹಿತಿ ನೀಡಿದ್ದಾರೆ. ಹಾಗಯೇ ವಿವಿಧ ರೀತಿಯ ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಉತ್ಸವದ ಮೆರಗನ್ನು ಹೆಚ್ಚಿಸಲಿದ್ದಾರೆ. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತಾನಾಡಿದ ಅವರು ಬುಧವಾರ ಸಂಜೆ 5:30ಕ್ಕೆ ಜಿಲ್ಲಾ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಸಲಿದ್ದು, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ […]

Advertisement

Wordpress Social Share Plugin powered by Ultimatelysocial