ಭಾರತ್ ಜೋಡೋಗೆ ನಾಳೆ ತೆರೆ.

ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ ಸುಮಾರು ೫ ತಿಂಗಳ ಸುದೀರ್ಘ ಅವಧಿಯಲ್ಲಿ ೧೨ ರಾಜ್ಯಗಳ ಮೂಲಕ ೪ ಸಾವಿರ ಕಿ.ಮೀ ಪಾದಯಾತ್ರೆ ಸಾಗಿ ಜಮ್ಮು ಕಾಶ್ಮೀರ ತಲುಪಿದ್ದು ಹೊಸ ದಾಖಲೆ ಬರೆದಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ೪ ಸಾವಿರ ಕಿ.ಮೀ ಪೂರೈಸಿರುವ ಹಿನ್ನೆಲೆಯಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಹುಲ್ ಗಾಂಧಿ ಧ್ವಜಾರೋಹಣ ಮಾಡಲಿದ್ದು ನಾಳೆ ಯಾತ್ರೆ ಅಧಿಕೃತವಾಗಿ ಸಂಪನ್ನವಾಗಲಿದೆ.
ನಾಳೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತ್ ಜೋಡೊ ಯಾತ್ರೆ ಮುಕ್ತಾಯಗೊಳಿಸಲಿದೆ. ಇಂದು ನಗರದ ಲಾಲ್ ಚೌಕ್‌ನಲ್ಲಿ ರಾಹುಲ್ ಗಾಂಧಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸೆಪ್ಟೆಂಬರ್ ೭ ರಂದು ತಮಿಳುನಾಡಿದ ಶ್ರೀ ಪರಂಬೂರಿನಲ್ಲಿ ರಾಜೀವ್ ಗಾಂಧಿ ಸಮಾಧಿಗೆ ನಮಿಸಿ ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆ ನಾಳೆ ಸಮಾರೋಪ ಸಮಾರಂಭ ನಡೆಯಲಿದೆ.
ಭಾರತ್ ಜೋಡೋ ಯಾತ್ರೆ ಜಮ್ಮು ಕಾಶ್ಮೀರದ ಪಾದಯಾತ್ರೆ ವಿಶೇಷವಾಗಿ ಮಹತ್ವದ್ದಾಗಿದೆ. ಬನಿಹಾಲ್‌ನಲ್ಲಿ ಭದ್ರತಾ ಲೋಪವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ರಸ್ತೆ ತಡೆ ನಡೆಸಿತ್ತು. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ , ಸಹೋದರಿ ಪ್ರಿಯಾಂಕ ಗಾಂಧಿ ಸೇರಿ ಹಲವು ಮಂ ರಾಹುಲ್ ಗಾಂಧಿಯವರೊಂದಿಗೆ ಅವಂತಿಪೊರಾ ಮತ್ತು ಬನಿಹಾಲ್‌ನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ಕನ್ಯಾಕುಮಾರಿಯಿಂದ ಕಾಶ್ಮೀರ ಯಾತ್ರೆ ದೇಶದ ದಕ್ಷಿಣ ತುದಿಯಿಂದ ಸೆಪ್ಟೆಂಬರ್ ೭ ರಂದು ಪ್ರಾರಂಭವಾಯಿತು ಮತ್ತು ಜನವರಿ ೩೦ ರಂದು ಶ್ರೀನಗರದಲ್ಲಿ ಕೊನೆಗೊಳ್ಳುತ್ತದೆ, ಸುಮಾರು ೧೪೫ ದಿನಗಳು ಮತ್ತು ಸುಮಾರು ೪,೦೦೦ ಕಿಮೀ ನಂತರ. ಬೆಳಗ್ಗೆ ಪಂಥಾ ಚೌಕ್‌ನಿಂದ ಪುನರಾರಂಭಗೊಂಡಿದ್ದು ನಗರದ ಬೌಲೆವರ್ಡ್ ರಸ್ತೆಯಲ್ಲಿರುವ ನೆಹರು ಪಾರ್ಕ್ ಬಳಿ ಮುಕ್ತಾಯಗೊಳ್ಳಲಿದೆ.ರಾಜಸ್ಥಾನದ ಕಾಂಗ್ರೆಸ್ ನಾಯಕರಾದ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಮಾತಿನ ಚಕಮಕಿ ನಡೆದಿದ್ದರೂ ಭಾರತ್ ಜೋಡೋ ರಾಜಸ್ಥಾನದಲ್ಲಿ ಕಾಲ್ನಡಿಗೆಯ ಅವಧೀಯಲ್ಲಿ ಏಕತೆ ತೋರಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜ. 24 ಸಾರಿಗೆ ನೌಕರರ ಧರಣಿ.

Mon Jan 30 , 2023
ವೇತನ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸರ್ಕಾರದ ವಿರುದ್ಧ ನಾಳಿದ್ದು(ಜ.೨೪) ಸಾರಿಗೆ ನೌಕರರು ನಗರದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಂದು ದಿನ ಬಸ್ ಸಂಚಾರ ವ್ಯತ್ಯಯ ಸಾಧ್ಯತೆಯಿದೆ. ರಾಜ್ಯ ಸರ್ಕಾರವು ೬ ವರ್ಷಗಳು ಕಳೆದರೂ ವೇತನ ಹೆಚ್ಚಳ ಮಾಡದಿರುವುದರಿಂದ ಸಿಡಿದೆದ್ದಿರುವ ಸಾರಿಗೆ ನೌಕರರು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಪ್ರತಿಭಟನೆಗೆ ಕೆ.ಎಸ್.ಆರ್.ಟಿ.ಸಿ ಸ್ಟಾಪ್ ಹಾಗೂ ವರ್ಕರ್ಸ್ ಫೆಡರೇಷನ್, ಅಖಿಲ ಕರ್ನಾಟಕ ರಾಜ್ಯ […]

Advertisement

Wordpress Social Share Plugin powered by Ultimatelysocial