ಜಿಎಸ್‌ಟಿ ಸಲ್ಲಿಸಲು ಕೊನೆಯ ದಿನ ಯಾವಾಗ ಎಂದು ಟ್ವೀಟ್‌ಗಳ ಸರಣಿ ಮೂಲಕ ಸಿಬಿಐಸಿ ತಿಳಿಸಿದೆ.

ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ (ಜಿಎಸ್‌ಟಿಆರ್‌) ಸಲ್ಲಿಸಲು ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕ (ಸಿಬಿಐಸಿ) ಕೊನೆಯ ದಿನಾಂಕಗಳನ್ನು ಪ್ರಕಟಿಸಿದೆ. ವಿವಿಧ ವರ್ಗಗಳಿಗೆ ಜಿಎಸ್‌ಟಿಆರ್‌ ಸಲ್ಲಿಸಲು ಕೊನೆಯ ದಿನ ಯಾವಾಗ ಎಂದು ಟ್ವೀಟ್‌ಗಳ ಸರಣಿ ಮೂಲಕ ಸಿಬಿಐಸಿ ತಿಳಿಸಿದೆ.ಜಿಎಸ್‌ಟಿಆರ್‌ ಸಲ್ಲಿಕೆಯ ಕೊನೆ ದಿನಾಂಕಗಳ ಪಟ್ಟಿ ಇಂತಿದೆ:ಇ-ಕಾಮರ್ಸ್‌ ವರ್ತಕರುಜಿಎಸ್‌ಟಿ ಅಡಿಯಲ್ಲಿ ಮೂಲದಲ್ಲಿ ತೆರಿಗೆಯನ್ನು (ಟಿಸಿಎಸ್‌) ಸಂಗ್ರಹಿಸಬೇಕಾದ ಇ-ಕಾಮರ್ಸ್ ಆಪರೇಟರ್‌ಗಳು ಫೆಬ್ರವರಿ 10, 2022ಕ್ಕೂ ಮುನ್ನ 2022ರ ಜನವರಿ ತಿಂಗಳಿಗೆ ತಮ್ಮ ಜಿಎಸ್‌ಟಿಆರ್‌-8 ರಿಟರ್ನ್ ಫೈಲ್ ಮಾಡಿ ಎಂದು   ಟ್ವೀಟ್ ಮಾಡಿದೆ.ಕ್ಯೂಆರ್‌ಎಂಪಿ ಯೋಜನೆಯಡಿಯಲ್ಲಿಲ್ಲದ ಜಿಎಸ್‌ಟಿ ತೆರಿಗೆದಾರರುಕ್ಯೂಆರ್‌ಎಂಪಿ ಯೋಜನೆಯಡಿಯಲ್ಲಿಲ್ಲದ ಜಿಎಸ್‌ಟಿ ತೆರಿಗೆದಾರರ ಗಮನಕ್ಕೆ! ಫೆಬ್ರವರಿ 11, 2022ರ ಮುನ್ನ 2022ರ ಜನವರಿ ತಿಂಗಳಿಗೆ ನಿಮ್ಮ ಜಿಎಸ್‌ಟಿಆರ್‌-1 ರಿಟರ್ನ್ ಫೈಲ್ ಮಾಡಿ,” ಎಂದು ಸಿಬಿಐಸಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ.ಕೇಂದ್ರೀಯ ಅಬಕಾರಿ ಕಾಯಿದೆ ಅಡಿ ನೋಂದಾಯಿತ ಉತ್ಪಾದಕರುಕೇಂದ್ರೀಯ ಅಬಕಾರಿ ಕಾಯಿದೆ ಅಡಿ ನೋಂದಾಯಿತ ಉತ್ಪಾದಕರಿಗೆ ಸಂಬಂಧಿಸಿದಂತೆ, “ಕೇಂದ್ರ ಅಬಕಾರಿ ಕಾಯಿದೆ, 1944 ರ ಅಡಿಯಲ್ಲಿ ನೋಂದಾಯಿತ ಉತ್ಪಾದಕರ ಗಮನಕ್ಕೆ ! ಜನವರಿ, 2022ರ ನಿಮ್ಮ ಕೇಂದ್ರೀಯ ಅಬಕಾರಿ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕ ಫೆಬ್ರವರಿ 10, 2022 ಆಗಿದೆ,” ಎಂದು ಟ್ವೀಟ್ ಮಾಡಿದೆ ಸಿಬಿಐಸಿಜಿಎಸ್‌ಟಿಯ ಅಧಿಕೃತ ಜಾಲತಾಣ   ಲಾಗಿನ್ ಆಗಿ ತೆರಿಗೆದಾರರು ಅಗತ್ಯ ಕೆಲಸ ಮಾಡಬಹುದಾಗಿದೆ.ಜಿಎಸ್‌ಟಿ ಅಡಿಯಲ್ಲಿ ಟಿಡಿಎಸ್‌ನಂತರದ ಟ್ವೀಟ್‌ ಒಂದರಲ್ಲಿ, “ಜಿಎಸ್‌ಟಿ ಅಡಿಯಲ್ಲಿ ಮೂಲದಲ್ಲಿ (ಟಿಡಿಎಸ್) ತೆರಿಗೆಯನ್ನು ಕಡಿತಗೊಳಿಸುವ ಅಗತ್ಯವಿರುವ ಜಿಎಸ್‌ಟಿ ತೆರಿಗೆದಾರ ಗಮನಕ್ಕೆ! ಜನವರಿ, 2022ರ ನಿಮ್ಮ ಜಿಎಸ್‌ಟಿಆರ್-7 ರಿಟರ್ನ್ ಅನ್ನು ಸಲ್ಲಿಸಲು ಅಂತಿಮ ದಿನಾಂಕ ಫೆಬ್ರವರಿ 10, 2022 ಆಗಿದೆ,” ಎಂದು ಅಲರ್ಟ್ ಮಾಡಿದೆ ಸಿಬಿಐಸಿ.ಈ ಹಿನ್ನೆಲೆಯಲ್ಲಿ, ಆದಾಯ ಇಲಾಖೆಯು ಐಟಿ ರಿಟರ್ನ್ ಫೈಲಿಂಗ್ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಿರುವುದನ್ನು ಆದಾಯ ತೆರಿಗೆ (ಐಟಿ) ಪಾವತಿದಾರರು ಗಮನಿಸಬೇಕು. ಐಟಿಆರ್‌ ಸಲ್ಲಿಕೆಯನ್ನು ಮಾರ್ಚ್ 15, 2022 ವಿಸ್ತರಿಸಲಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಮತ್ತು ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ, 2021-22 ರ ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಕೆಯಾದ ಲೆಕ್ಕಪರಿಶೋಧನೆಯ ವಿವಿಧ ವರದಿಗಳು ಮತ್ತು ಇತರ ಪಾಲುದಾರರು ವರದಿ ಮಾಡಿದ ಅನಾನುಕೂಲತೆಗಳನ್ನು ಪರಿಗಣಿಸಿ, 1961ರ ಆದಾಯ ತೆರಿಗೆ ಕಾಯಿದೆ ಅನುಸಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಐಟಿಆರ್‌ ಸಲ್ಲಿಕೆಗೆ ಕೊನೆಯ ದಿನಾಂಕ ಡಿಸೆಂಬರ್ 31, 2021 ಆಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಶಿಕ್ಷಕ

Thu Feb 10 , 2022
ಯಾದಗಿರಿ: ಶಿಕ್ಷಕರೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ನಗರದ ಸರ್ಕಾರಿ ಡಿಗ್ರಿ ಕಾಲೇಜು ಬಳಿ ನಡೆದಿದೆ.50 ವರ್ಷದ ಸಂಗನಬಸಯ್ಯ ಆತ್ಮಹತ್ಯೆಗೆ ಶರಣಾದ ಶಿಕ್ಷಕ. ಸಾವಿಗೂ ಮುನ್ನ ಶಿಕ್ಷಕ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದ್ದು, ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಮುಖ್ಯಶಿಕ್ಷಕಿ ಮಲ್ಲಮ್ಮ ಬಿರಾದಾರ್ ಕಾರಣ ಎಂದು ಬರೆದಿಟ್ಟಿದ್ದಾರೆ.ರಾಯಚೂರು ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial