ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್

ಭಾನುವಾರದ ಬಾಡೂಟ ಮಾಡಲು ವಿವಿಧ ಭೋಜನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಆದರೆ ಕೆಲವರಿಗೆ ಮನೆಯಲ್ಲಿ ನಾನ್ವೆಜ್ ತಿಂದಷ್ಟು ತೃಪ್ತಿ ಆಗುವುದಿಲ್ಲ.
ಹೀಗಾಗಿಯೇ ನಿಮ್ಮ ಭಾನುವಾರವನ್ನು ನಿಮಗ್ ಇಷ್ಟ ಬಂದ ರೀತಿಯಲ್ಲಿ ಅಡುಗೆ ಮಾಡಿಕೊಂಡು ತಿನ್ನಲು ಮನೆಯಲ್ಲಿಯೇ ವಿವಿಧ ಬಗೆಯ ಮಾಂಸಹಾರಿ ಅಡುಗೆಗಳನ್ನು ಮಾಡಿಕೊಳ್ಳಬಹುದು.

ಅದರಲ್ಲೂ ರೆಸ್ಟೋರೆಂಟ್ ಶೈಲಿಯ ಆಹಾರ ಪದಾರ್ಥ ಇಷ್ಟಪಡುವವರು ಕಡಾಯಿ ಚಿಕನ್ ಮಾಡಿಕೊಂಡು ಸೇವನೆ ಮಾಡಬಹುದು. ಕಡಾಯಿ ಚಿಕನ್ ಮಾಡುವ ವಿಧಾನ ಇಲ್ಲಿದೆ. ಕಡಾಯಿ ಚಿಕನ್ ಇದು ನೀವು ರೆಸ್ಟೋರೆಂಟ್ಗಳಿಗೆ ಹೋದಾಗ ಮೆನುವಿನಲ್ಲಿ ಕಾಣ ಸಿಗುವ ಒಂದು ಐಟಂ ಆಗಿದೆ.

ರೆಸ್ಟೋರೆಂಟ್ ರುಚಿಯಲ್ಲಿಯೇ ಕಡಾಯಿ ಚಿಕನ್ ಅನ್ನು ಮನೆಯಲ್ಲಿಯೂ ಮಾಡಬಹುದು.ಇನ್ನು ಈ ಕಡಾಯಿ ಚಿಕನ್ ಸೆಮಿ ಗ್ರೇವಿ ರೆಸಿಪಿಯಾಗಿದ್ದು ರೊಟ್ಟಿ/ನೀರುದೋಸೆ/ಅನ್ನ/ಚಪಾತಿಗೆ ಸೇರಿಸಿ ತಿನ್ನಲು ಸಖತ್ ಟೇಸ್ಟಿ ರೆಸಿಪಿಯಾಗಿದೆ. ಹಾಗಿದ್ರೆ ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಹೇಗೆ ಕಡಾಯಿ ಚಿಕನ್ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.

*1 ಚಮಚ ಕಾಳು ಮೆಣಸು
*2 ಚಮಚ ಕೊತ್ತಂಬರಿ ಬೀಜ
*2 ಚಮಚ ಜೀರಿಗೆ
*3 ಚಮಚ ತುಪ್ಪ
*1 ಪಲಾವ್ ಎಲೆ
*4 ಈರುಳ್ಳಿ
*6 ಬೆಳ್ಳುಳ್ಳಿ ಎಸಳು
*ಸ್ವಲ್ಪ ಶುಂಠಿ
*1-2 ಮೆಣಸಿನ ಕಾಯಿ
*1 ಚಮಚ ಖಾರದ ಪುಡಿ
*1 ಚಮಚ ಖಾರದ ಪುಡಿ
*1 ಚಮಚ ಅರಿಶಿಣ ಪುಡಿ
*1/2 ಕೆಜಿ ಚಿಕನ್
*3 ಟೊಮೆಟೊ
*1 ಕ್ಯಾಪ್ಸಿಕಂ
*ಉಪ್ಪು
*ಮಾವಿನ ಕಾಯಿ ಪುಡಿ
ಮಾಡುವ ವಿಧಾನ
ಮೊದಲಿಗೆ ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಬೀಜ ಇವುಗಳನ್ನು ಹುರಿಯಿರಿ. ನಂತರ ಅವುಗಳನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಬಳಿಕ ಈಗ ಪ್ಯಾನ್ಗೆ ತುಪ್ಪ ಹಾಕಿ ಹಾಕಿ ಬಿಸಿ ಮಾಡಿ, ನಂತರ ಪಲಾವ್ ಎಲೆ ಹಾಕಿ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ತಿರುಗುವಷ್ಟು ಹೊತ್ತು ಫ್ರೈ ಮಾಡಿ.ಕತ್ತರಿಸಿದ ಒಣ ಮಾವಿನಕಾಯಿ ಪುಡಿ, ಗರಂ ಮಸಾಲ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.

ನಂತರ ಶುಂಠಿ, ಬೆಳ್ಳುಳ್ಳಿ ಜಜ್ಜಿ ಹಾಕಿ 2 ಸೆಕೆಂಡ್ ಸೌಟ್ನಿಂದ ಆಡಿಸಿ. ನಂತರ ತರಿತರಿಯಾಗಿ ರುಬ್ಬಿದ ಮಸಾಲೆ ಹಾಕಿ.ನಂತರ ಚಿಕನ್ ಹಾಕಿ ಮಿಕ್ಸ್ ಮಾಡಿ. ಬಳಿಕ ಚಿಕನ್ ಮಸಾಲೆ ಜೊತೆ ಮಿಕ್ಸ್ ಆದ ಮೇಲೆ ಟೊಮೆಟೊ ಪೇಸ್ಟ್, ಕ್ಯಾಪ್ಸಿಕಂ ಹಾಕಿ 2-3 ನಿಮಿಷ ಸೌಟ್ನಿಂದ ಆಡಿಸುತ್ತಾ ಇರಿ.

ನಂತರ ಅರಿಶಿಣ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಜೊತಗೆ ತಾಜಾ ತೆಂಗಿನಕಾಯಿ ಹಾಲು ಹಾಕಿ ಮಿಕ್ಸ್ ಮಾಡಿ 25-30 ನಿಮಿಷ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ಹೀಗೆ ಬೇಯಿಸುವಾಗ ಆಗಾಗ ತಿರುಗಿಸುತ್ತಾ ಇರಿ. ಹೀಗೆ ಮಾಡಿದ್ರೆ ಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್ ಬಿಸಿ ಬಿಸಿ ಅನ್ನ, ರೊಟ್ಟಿ, ಚಪಾತಿ, ನೀರ್ ದೋಸೆ, ದೋಸೆ ಜೊತೆಗೆ ಸವಿಯಲು ಸಿದ್ದ.

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದಲ್ಲಿ ಆಕ್ಟೀವ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ

Mon Dec 20 , 2021
ಚಳಿ ಶುರುವಾಗಿದ್ದರಿಂದ ಬೆಳಗ್ಗೆ ಬೇಗ ಏಳಲಾಗುತ್ತಿಲ್ಲ. ಯಾವ ಕೆಲಸವೂ ಅಂದುಕೊಂಡಂತೆ ಆಗುವುದಿಲ್ಲ. ಇಂತಹ ಅನೇಕ ಸಮಸ್ಯೆಗಳು ಚಳಿಗಾಲದಲ್ಲಿ ಸಾಮಾನ್ಯ.ಈ ಸಮಯದಲ್ಲಿ ಸಕ್ರಿಯವಾಗಿರಲು ಮತ್ತು ಚಿಂತನೆಯ ಪ್ರಕ್ರಿಯೆಯನ್ನು ಉತ್ತಮವಾಗಿ ಪೂರ್ಣಗೊಳಿಸಲು ಕೆಲವು ಕ್ರಮಗಳನ್ನು ಅನುಸರಿಸುವುದು ಅವಶ್ಯಕ ಎಂದು ವೈದ್ಯರು ಸಲಹೆ ನೀಡುತ್ತಾರೆ. ಅವು ಯಾವುವು ಎಂಬುದು ಇಲ್ಲಿದೆ. ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಒಂದೆಲ್ಲ ಒಂದು ಸಮಸ್ಯೆ ಕಾಡುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಇರುವುದು ಮುಖ್ಯವಾಗುತ್ತದೆ. ಸೂರ್ಯನ ಬೆಳಕು : ಚಳಿಗಾಲದಲ್ಲಿ ಬೆಳಿಗ್ಗೆ ಎದ್ದೇಳಲು […]

Advertisement

Wordpress Social Share Plugin powered by Ultimatelysocial