ಎಚ್. ಜಿ. ಶಶಿಧರ

 
ಆತ್ಮೀಯ ಗೆಳೆಯ ಎಚ್. ಜಿ. ಶಶಿಧರ ಚರಿತ್ರೆ-ಶಿಲ್ಪಕಲೆ-ಸಾಹಿತ್ಯ-ಛಾಯಾಗ್ರಹಣ-ಕಲೆ ಹೀಗೆ ಅಪರಿಮಿತ ಆಸಕ್ತಿ ಉಳ್ಳವರು.
ಮಾರ್ಚ್ 27 ಶಶಿಧರ ಅವರ ಜನ್ಮದಿನ. ಹೊಸಕೋಟೆಯ ಡಿ. ಹೊಸಹಳ್ಳಿ ಅವರ ಹುಟ್ಟಿದ ಊರು. ಮುಂದೆ ಅವರ ಜೀವನ ಸಾಗುತ್ತಿರುವುದು ಬೆಂಗಳೂರಲ್ಲಿ.
ಶಶಿಧರ ಅವರು ವಿದ್ಯಾಭ್ಯಾಸದಲ್ಲಿ ಎಂ.ಬಿ.ಎ ಮಾಡಿ ಬಾಯರ್ ಕ್ರಾಪ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ವೃತ್ತಿ ಆದರೆ ಅವರ ಪ್ರವೃತ್ತಿ ಸಾಹಿತ್ಯ ಮತ್ತು ಚರಿತ್ರೆಯ ಚಿತ್ತದ ಸಾಂಸ್ಕೃತಿಕ ಮುಖಿ. ಅದಕ್ಕಾಗಿ ಅವರು ಪ್ರಾಚೀನ ಚರಿತ್ರೆ ಮತ್ತು ಪ್ರಾಕ್ತನ ಶಾಸ್ತ್ರ (Ancient History and Archeology)ದಲ್ಲಿ ಎರಡನೇ ವರ್ಷದ ಸ್ನಾತಕೋತ್ತರ ವ್ಯಾಸಂಗ ನಡೆಸಿದ್ದಾರೆ.
ಶಶಿಧರ ಅವರಿಗೆ ದೇವಾಲಯಗಳ ಬಗ್ಗೆ ಅದರಲ್ಲೂ ಹೊಯ್ಸಳ ದೇವಾಲಯಗಳ ಬಗ್ಗೆ ಅಪರಿಮಿತ ಆಸಕ್ತಿ. ಇದುವರೆವಿಗೂ ಅವರು 350ಕ್ಕೂ ಹೆಚ್ಚು ಹೊಯ್ಸಳ ದೇವಾಲಯಗಳಿಗೆ ಭೇಟಿ ಇತ್ತು, ಮಾಹಿತಿ ಸಂಗ್ರಹಿಸಿ, ಸುಂದರ ಛಾಯಾಚಿತ್ರಗಳನ್ನೂ ಸೆರೆಹಿಡಿದಿದ್ದಾರೆ. ಶಂಕರ ಅಜ್ಜಂಪುರ ಅವರೊಡಗೂಡಿ 250ಕ್ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ.
ಅಮೂಲ್ಯ ನಾಣ್ಯ ಸಂಗ್ರಹಕಾರರಾದ ಶಶಿಧರ 3000ಕ್ಕೂ ಹೆಚ್ಚು ನಾಣ್ಯ ಸಂಗ್ರಹ ಮಾಡಿದ್ದಾರೆ. ಕರ್ನಾಟಕದ ವೀರಗಲ್ಲುಗಳು ಎಂಬ ಫೇಸ್ಬುಕ್ ಸಮೂಹ ಸಂಘಟಿಸಿದ್ದಾರೆ. ಮಸಾಲ ಚಾಯ್ ಮೀಡಿಯಾ ಎಂಬ ಯೂ ಟ್ಯುಬ್ ಚಾನೆಲ್ ನಿರ್ವಹಣೆ, ಪ್ರಾಚೀನ ಸ್ಮಾರಕಗಳ ಕುರಿತಾದ ವಿಡಿಯೋ ಚಿತ್ರಣ ಮತ್ತು ನಿರೂಪಣೆ ಇವರ ಇನ್ನಿತರ ಸಕ್ರಿಯ ಆಸಕ್ತಿಗಳಲ್ಲಿ ಸೇರಿವೆ.

ಆತ್ಮೀಯ ಉತ್ಸಾಹಿ ಶಶಿಧರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿರಮ್ಮ (ವಿಶ್ವ ರಂಗಭೂಮಿ ವಿಶೇಷ)

Mon Mar 28 , 2022
  ಲೇಖನ ಕೃಪೆ: ಅರೇನಳ್ಳಿ ಧರ್ಮೇಂದ್ರ ಕುಮಾರ್ ಅಣ್ಣಾವ್ರ ಜೊತೆ ನಟಿಸಿರೋ ಸಿನೆಮಾ ಹೀರೋಯಿನ್ ಗಳನ್ನ ನೋಡಿದೀರಾ… ಅಂತ ನಾನು ನಿಮ್ಮನ್ನ ಕೇಳಿದರೆ… ಓ… ನೋಡಿಲ್ದೇ ಏನು… ಲೀಲಾವತಿ , ಆರತಿ , ಭಾರತಿ , ಜಯಂತಿ , ಜಯಪ್ರದ , ಅಂಬಿಕಾ , ಸರಿತಾ , ಗೀತಾ… ಒಂದ್ ದೊಡ್ ಲಿಸ್ಟೇ ಬಿಸಾಕ್ತಿರಾ ನನ್ನ್ ಮುಂದಕ್ಕೆ… ಆದೇ… ಅಣ್ಣಾವ್ರ ಜೊತೆ ನಟಿಸಿರೋ ರಂಗಭೂಮಿ ಕಲಾವಿದರನ್ನ ನೋಡಿದಿರಾ… ಅಂತ ಕೇಳಿದರೆ… […]

Advertisement

Wordpress Social Share Plugin powered by Ultimatelysocial