ಮನೆಯ ಹಾಲ್ ನಲ್ಲಿ ಕಾಣಿಸಿಕೊಂಡ ಪಟ್ಟೆ ಕುಕ್ಕರಿ ಅಪರೂಪದ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದ,ಸ್ನೇಕ್ ಕಿರಣ್!

ಮನೆಯ ಹಾಲ್ ನಲ್ಲಿ ಕಾಣಿಸಿಕೊಂಡ ಪಟ್ಟೆ ಕುಕ್ಕರಿ ಅಪರೂಪದ ಹಾವನ್ನು ಸ್ನೇಕ್ ಕಿರಣ್ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಶಿವಮೊಗ್ಗ ನಗರದ ಸಹ್ಯಾದ್ರಿ ನಗರದ ನರಸಿಂಹ ಮೂರ್ತಿ ಎಂಬುವರ ಮನೆಯಲ್ಲಿ ನೆನ್ನೆ ರಾತ್ರಿ ಹಾಲ್ ನಲ್ಲಿ ಇದ್ದಕ್ಕಿದ್ದ ಹಾಗೆ ಹಾವು ಕಾಣಿಸಿಕೊಂಡಿದೆ. ಹಾವನ್ನು ಕಂಡ ಮನೆಯವರು ಹೇಗೋ ಉಪಾಯ ಮಾಡಿ ಟಬ್ ನಲ್ಲಿ ಹಾಕಿದ್ದಾರೆ. ಇದು ನಾಗರಹಾವೇ ಇರಬೇಕು ಎಂದು ಟಬ್ ಮುಟ್ಟುವ ಪ್ರಯತ್ನ ಮಾಡದ ನರಸಿಂಹಮೂರ್ತಿಯವರು ಸ್ನೇಕ್ ಕಿರಣ್ ಗೆ ಫೋನ್ ಮಾಡಿದ್ದಾರೆ. ತಕ್ಷಣ ಆಗಮಿಸಿದ ಕಿರಣ್ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಪಟ್ಟೆ ಕುಕ್ಕರಿ ಹಾವು ಕಾಣಿಸಿಕೊಳ್ಳುವುದು ಅಪರೂಪ. ಇದು ವಿಷಕಾರಿ ಹಾವಲ್ಲ. ನೋಡಲು ಸುಂದರವಾಗಿರುವ ಹಾವನ್ನು ತೋಳದ ಹಾವೆಂದು ಕರೆಯುತ್ತಾರೆ. ಈ ಹಾವಿನ ಬೆಳವಣಿಗೆ ಕಡಿಮೆ ಒಂದುವರೆ ಅಡಿ ಬೆಳೆದರೂ ಹೆಚ್ಚು.ಗರಿಷ್ಠ ಎಂದರೂ ನಾಲ್ಕೈದು ಮೊಟ್ಟೆಗಳನ್ನು ಇಡಬಹುದು ಎಂದು ಸ್ನೇಕ್ ಕಿರಣ್ ಮಾಹಿತಿ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆರೆಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Thu May 5 , 2022
ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಕೆರೆಯಲ್ಲಿ ಪತ್ತೆ ಬೆಳ್ಳಂ ಬೆಳಗ್ಗೆ ನವಜಾತ ಶಿಶುವಿನ ಕೊಳೆತ ಸ್ಥಿತಿಯ ಶವ ಕಂಡು ಮಮ್ಮಲಮರುಗಿದ ಜನ ಬೆಳಗಿನ ಜಾವ ಜನ ಬಹಿರ್ದೆಸೆಗೆ ಪ್ರಕರಣ ಬೆಳಕಿಗೆ ಎರಡು ದಿನಗಳ ಹಿಂದೆ ಜನಿಸಿದ ಮಗು ಎಂದು ಹೇಳಲಾಗ್ತಿದೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial