BENGALURU:ಬೈಕ್ ಸವಾರರೇ ಎಚ್ಚರ.! “ಹಾಫ್ ಹೆಲ್ಮೆಟ್ ಧರಿಸಿದ್ರೆ ಜೀವಕ್ಕೆ ಕುತ್ತು” :

ಬೆಂಗಳೂರು : ಯಾರ ಆಯಸ್ಸು ಎಲ್ಲಿವರೆಗೆ ಅಂತ ಯಾರಿಗೂ ಗೊತ್ತಿರಲ್ಲ. ಆದರೆ ಪ್ರತಿಯೊಬ್ಬರಿಗೂ ತಮ್ಮ ಜೀವದ ಬಗ್ಗೆ ಕಾಳಜಿ ಮುಖ್ಯ. ಬೈಕ್ (Bike) ಅಪಘಾತದಲ್ಲಿ ಅದೆಷ್ಟೊ ಜನರ ಉಸಿರು ನಿಂತಿದೆ. ಹೀಗಾಗಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ (Helmet) ಧರಿಸಬೇಕು ಅಂತ ಕಾನೂನಿದೆ.

ಆದರೆ ಈ ನಿಯಮದ ಕಾಳಜಿ ಕೆಲ ಜನರಿಗೆ ಇನ್ನೂ ಅರ್ಥವೇ ಆಗಿಲ್ಲ. ಹೀಗಾಗಿ ಬೇಕಾಬಿಟ್ಟಿ ಹೆಲ್ಮೆಟ್ ಧರಿಸದೇ ಓಡಾಡುತ್ತಾರೆ. ಇನ್ನು ಕೆಲವರು ದಂಡ ಕಟ್ಟುವುದನ್ನು ತಪ್ಪಿಸಲು ಹೆಲ್ಮೆಟ್ ಧರಿಸುತ್ತಾರೆ. ಇದೇನೇಯಿರಲಿ, ಈ ಹೆಲ್ಮೆಟ್ ವಿಚಾರಕ್ಕೆ ಸಂಬಂಧಿಸಿ ನಿಮ್ಹಾನ್ಸ್ ಮತ್ತು ಪೊಲೀಸರು ನಡೆಸಿದ ಅಧ್ಯಯನದಲ್ಲಿ ಮಹತ್ವದ ಅಂಶಗಳು ಬೆಳಕಿಗೆ ಬಂದಿದೆ.

ಹಾಫ್ ಹೆಲ್ಮೆಟ್ ಧರಿಸುವದರಿಂದ ಜೀವಕ್ಕೆ ಕುತ್ತು ತರುತ್ತದೆ ಅಂತ ಅಧ್ಯಯನ ವೇಳೆ ತಿಳಿದುಬಂದಿದೆ. ನಗರದಲ್ಲಿ ನಡೆದ ಬೈಕ್ ಅಪಘಾತದ ಸಾವು ಪ್ರಕರಣಗಳ ಅಂಕಿ ಅಂಶಗಳನ್ನ ಪರಿಶೀಲಿಸಿದ ವೇಳೆ ಈ ಸತ್ಯ ಬಯಲಾಗಿದೆ. ಹಾಫ್ ಹೆಲ್ಮೆಟ್ ಬೈಕ್ ಸವಾರರ ಸಾವಿಗೆ ಕಾರಣವಾಗುತ್ತಿದೆ. ಅಪಘಾತದ ವೇಳೆ ಹಾಫ್ ಹೆಲ್ಮೆಟ್ನಿಂದಲೇ ಹೆಚ್ಚು ಸಾವಾಗುತ್ತಿವೆ ಎಂಬ ಅಂಶ ನಿಮ್ಹಾನ್ಸ್ ಮತ್ತು ಪೊಲೀಸರು ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.

ನಿಮ್ಹಾನ್ಸ್ ತಜ್ಞ ವೈದ್ಯರು ಹಾಗೂ ಪೊಲೀಸರ ಅಧ್ಯಯನದಲ್ಲಿ ಕಂಡು ಬಂದ ಮಾಹಿತಿ ಏನು?

ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಸವಾರರ ಮರಣೋತ್ತರ ಪರೀಕ್ಷೆ ಅಧ್ಯಯನದಲ್ಲಿ ಅಪಘಾತದ ವೇಳೆ ಹಾಫ್ ಹೆಲ್ಮೆಟ್ ಸಾವಿಗೆ ಕಾರಣವಾಗುತ್ತಿದೆ. ಹಾಫ್ ಹೆಲ್ಮೆಟ್ ಹಾಕಿದಾಗ ಅದರ ಹಿಂಬದಿ, ಮೆದುಳ ಬಳ್ಳಿಯ ಬುಡಕ್ಕೆ ಹೊಡೆಯುತ್ತಂತೆ. ಈ ವೇಳೆ ಮೆದುಳ ಬಳ್ಳಿ ಅಲ್ಲೆ ಕಟ್ ಅಗುತ್ತದೆ. ಹೀಗಾಗಿ ಬೈಕ್ ಸವಾರರು ಘಟನಾ ಸ್ಥಳದಲ್ಲೇ ಸಾವಿಗೀಡಾಗುತ್ತಾರೆ ಅಂತ ಅಧ್ಯಯನದಲ್ಲಿ ತಿಳಿದುಬಂದಿದೆ.

ಕಳಪೆ ಹೆಲ್ಮೆಟ್ ಧರಿಸುವವರೇ ಹೆಚ್ಚು:

ಈ ಸಂಬಂಧ ನಗರದ 15 ಸ್ಥಳಗಳಲ್ಲಿ 90 ಸಾವಿರ ದ್ವಿಚಕ್ರ ವಾಹನ ಸವಾರರನ್ನು ಪರಿಶೀಲನೆ ಮಾಡಲಾಗಿದೆ. ಪರಿಶೀಲನೆ ವೇಳೆ ಕಳಪೆ ಹೆಲ್ಮೆಟ್ಗಳ ಬಳಕೆ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿದೆ. ಶೇಕಡಾ 60 ರಷ್ಟು ಜನ ಕಳಪೆ ದರ್ಜೆಯ ಹೆಲ್ಮೆಟ್ ಧರಿಸಿ ಸಂಚರಿಸುತ್ತಿದ್ದಾರೆ. ಶೇಕಡಾ 70 ರಷ್ಟು ಹಿಂಬದಿ ಸವಾರರು ಹೆಲ್ಮೆಟ್ ಧರಿಸುತ್ತಾರೆ. ಅದರಲ್ಲಿ ಶೇಕಡಾ 50 ರಷ್ಟು ಜನ ಕಳಪೆ ದರ್ಜೆಯ ಹೆಲ್ಮೆಟ್ ಧರಿಸುತ್ತಾರೆ.

ಸದ್ಯ ಹೆಲ್ಮೆಟ್ ಬಗ್ಗೆ 15 ದಿನ ಅರಿವು ಮೂಡಿಸಲು ಪೊಲೀಸರ ಚಿಂತನೆ ನಡೆಸಿದ್ದು, 15 ದಿನಗಳ ನಂತರ ಹಾಫ್ ಹೆಲ್ಮೆಟ್ ಹಾಕಿದರೆ ಹೆಲ್ಮೆಟ್ ಧರಿಸಿಯೇ ಇಲ್ಲ ಎಂದು ದಂಡ ಹಾಕಲು ನಿರ್ಧರಿಸಿದ್ದಾರೆ. ಈಗಾಗಲೇ ಟ್ರಾಫಿಕ್ ಪೊಲೀಸರು ನಗರದಲ್ಲಿ ಸಾರ್ವಜನಿಕರಿಗೆ ಹಾಫ್ ಹೆಲ್ಮೆಟ್ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

How you can find a Sugar Daddy in Brisbane

Wed Jan 26 , 2022
If you’re considering a sweets baby in Brisbane, you’re here in luck. You can find hundreds of local Australian sugar daddies on sites like Sugar Daddy Match. These over the internet online dating sites bring together like-minded individuals and make this easy to connect with them. The site is especially […]

Advertisement

Wordpress Social Share Plugin powered by Ultimatelysocial