ಹಾನಗಲ್ ನಲ್ಲಿ ಮತದಾರರಿಗೆ ನಿರಾಣಿ ಮೋಡಿ..!!  

ಜಿದ್ದಾಜಿದ್ದಿನ ಕಣವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಉಸ್ತುವಾರಿಯಾಗಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ,ಕ್ಷೇತ್ರಾದ್ಯಂತ ಮಿಂಚಿನ ಪ್ರಚಾರ ನಡೆಸಿ, ಮತದಾರರ ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳ್ಳಿಯಿಂದ ತಾಲೂಕು ಮಟ್ಟದವರೆಗೆ ಕಾರ್ಯಕರ್ತರನ್ನು ಭೇಟಿಯಾಗಿ, ಅಭ್ಯರ್ಥಿ ಶಿವರಾಜ ಸಜ್ಜನ ಪರ ಮತಯಾಚನೆ ಮಾಡಿದರುನಾಮಪತ್ರ ಸಲ್ಲಿಕೆ ವೇಳೆ ಖುದ್ದು ಹಾಜರಿದ್ದ ನಿರಾಣಿ, ಕಾರ್ಯಕರ್ತರ ಜೊತೆಗೂಡಿ ಕ್ಷೇತ್ರದ ನಾನಾ ಕಡೆ ಮತಯಾಚನೆ ಮಾಡಿದ್ದರು.ಕಳೆದ ಒಂದು ವಾರದಿಂದ ಹಾನಗಲ್ನಲ್ಲೇ ಬೀಡುಬಿಟ್ಟಿದ್ದ ನಿರಾಣಿ, ಬೆಳಗ್ಗೆಯಿಂದ ಸಂಜೆವರೆಗೂ ಕ್ಷೇತ್ರದ ನಾನಾ ಕಡೆ ಪ್ರಚಾರ ನಡೆಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಬಿ.ಸಿ.ಪಾಟೀಲ್ ಸೇರಿದಂತೆ ಪಕ್ಷದ ಮುಖಂಡರ ಜೊತೆ ಪ್ರಚಾರ ನಡೆಸಿದ್ದರು. ಶಿವರಾಜ್ ಸಜ್ಜನ್ 25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆ ಎಂದು ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾ

ಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರ ನಡೆಸುವ ತನಿಖೆಯಲ್ಲಿ ನಂಬಿಕೆಯಿಲ್ಲ...!!

Thu Oct 28 , 2021
ಬಿಟ್‌ ಕಾಯಿನ್‌ ಪ್ರಕರಣಕ್ಕೆ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ..ಬಿಟ್ ಕಾಯಿನ್ ಬಗ್ಗೆ ಮಾಧ್ಯಮಗಳಲ್ಲಿ ಬರ್ತಾ ಇದೆ ನಾನು ನೋಡಿದ್ದೇನೆ ಬಿಟ್ ಪ್ರಕರಣ ಹೊರ ಬಂದ್ರೆ ಬೊಮ್ಮಾಯಿ ಸರ್ಕಾರಕ್ಕೆ ಕಂಟಕವಾಗಲಿದೆ ಈ ವಿಷಯ ಪ್ರಧಾನಿ ಕಚೇರಿಗೂ ಮಾಹಿತಿ ಹೋಗಿದೆ.ಅಲ್ಲಿಂದ ವರದಿ ಬಂದ ಮೇಲೆ ಶ್ರೀಕಿ ಅವರನ್ನು ಬಂಧಿಸಲಾಯಿತು..ಪ್ರಭಾವಿ ನಾಯಕರು ಅಂದರೆ ಸಹಜವಾಗಿ ಆಡಳಿತ ಪಕ್ಷದವರೇ ಇರ್ತಾರೆ ಆಡಳಿತ ಪಕ್ಷದವರು ಹೆಸರು ಬಂದ್ರೆ ಬೊಮ್ಮಾಯಿ ಸರ್ಕಾರಕ್ಕೆ ಕೂಡ  ಕಂಟಕವಾಗಲಿದೆ…ಬಿಟ್ ಕಾಯಿನ್ ಪ್ರಕರಣ ನ್ಯಾಯಾಂಗ […]

Advertisement

Wordpress Social Share Plugin powered by Ultimatelysocial