ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.

 

Health Benefits of Quinoa : ಯಾವುದೇ ಆಹಾರವಾಗಲೀ ಪಾನೀಯವಾಗಲಿ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯವಾಗಿರಲು ಬಯಸುವುದಾದರೆ ದೈನಂದಿನ ಆಹಾರದಲ್ಲಿ ಕೆಲವು ಧಾನ್ಯಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಕ್ವಿನೋವಾ ಅಂತಹ ಪೋಷಕಾಂಶ-ಭರಿತ ಧಾನ್ಯಗಳಲ್ಲಿ ಒಂದು. ಇದನ್ನು ಚಳಿಗಾಲದ ಸೂಪರ್ ಫುಡ್ ಎಂದು ಕೂಡಾ ಕರೆಯಲಾಗುತ್ತದೆ. ಕ್ವಿನೋವಾದಲ್ಲಿ ಫೈಬರ್, ವಿಟಮಿನ್ ಬಿ , ವಿಟಮಿನ್ ಇ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ರಂಜಕದಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಇದರಲ್ಲಿರುವ ಪೋಷಕಾಂಶಗಳು ಹೃದಯಾಘಾತ ಮತ್ತು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ತಡೆಯುತ್ತದೆ. ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ : ಒಮೆಗಾ 3 ಕೊಬ್ಬಿನಾಮ್ಲಗಳುಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಕ್ವಿನೋವಾದಲ್ಲಿವೆ. ಕ್ವಿನೋವಾ ಹೃದ್ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. Health Tips: ಬಿಪಿ-ಶುಗರ್ ಅಷ್ಟೇ ಅಲ್ಲ ಕ್ಯಾನ್ಸರ್ ರೋಗಿಗಳಿಗೂ ತುಂಬಾ ಲಾಭಕಾರಿ ಈ ಹಸಿರು ತರಕಾರಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ :ಮ ಕ್ವಿನೋವಾ ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಇದರಲ್ಲಿ ಫೈಬರ್ ಅಂಶ ಹೇರಳವಾಗಿರುತ್ತದೆ. ಇದನ್ನು ಸೇವಿಸುವುದರಿಂದ ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆಗಳು ದೂರವಾಗುತ್ತವೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ನಿಮ್ಮ ಆಹಾರದ ಮೆನುವಿನಲ್ಲಿ ಕ್ವಿನೋವಾಕ್ಕೆ ಒಂದು ಜಾಗವಿರಲಿ. ಕ್ಯಾನ್ಸರ್ ಗೆ ಪರಿಹಾರ ಕ್ವಿನೋವಾ : ಕ್ವಿನೋವಾ ಕ್ಯಾನ್ಸರ್‌ನಂತಹಮಾರಕ ಕಾಯಿಲೆಗಳನ್ನು ಗುಣಪಡಿಸುವ ಕೆಲಸ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ವಿನೋವಾ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಯೋಜನಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸುತ್ತದೆ : ಪ್ರೋಟೀನ್, ಅಮೈನೋ ಆಮ್ಲಗಳು, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ರಂಜಕದಂತಹ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಕ್ವಿನೋವಾವನ್ನು ತಿನ್ನುವ ಮೂಲಕ ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್‌ನಂತಹ ರೋಗಗಳ ಅಪಾಯವನ್ನು ತೆಗೆದುಹಾಕುತ್ತದೆ. ರಕ್ತಹೀನತೆಯ ಅಪಾಯವನ್ನು ನಿವಾರಿಸುತ್ತದೆ : ಈ ಧಾನ್ಯವು ಕಬ್ಬಿಣದ ಅಂಶದಲ್ಲಿ ಸಮೃದ್ಧವಾಗಿದೆ. ಕ್ವಿನೋವಾ ಸೇವನೆಯು ದೇಹದಲ್ಲಿನ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ. ಮತ್ತು ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯಿದ್ದರೆ ಕ್ವಿನೋವಾ ಸೇವನೆ ಪರಿಹಾರ ನೀಡುತ್ತದೆ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಧಾನಿಯಲ್ಲಿ ದೊಡ್ಡ ದುರಂತ ಮೆಟ್ರೋ ಕಾಮಗಾರಿಗೆ ತಾಯಿ-ಮಗು ಬಲಿ

Tue Jan 10 , 2023
  ಬೆಳ್ಳಂಬೆಳಗ್ಗೆ ರಾಜಧಾನಿಯಲ್ಲಿ ದೊಡ್ಡ ದುರಂತಮೆಟ್ರೋ ಕಾಮಗಾರಿಗೆ ತಾಯಿ-ಮಗು ಬಲಿ !!ಬೆಂಗಳೂರಿನ ಹೆಚ್‌ಬಿಆರ್ ಲೇಔಟ್‌ನಲ್ಲಿ ದುರ್ಘಟನೆಕಬ್ಬಿಣದ ರಾಡ್ ಬಿದ್ದು ಗಂಭೀರ ಗಾಯ, ಸಾವುಮೆಟ್ರೋ ಪಿಲ್ಲರ್‌ನ ಕಬ್ಬಿಣದ ರಾಡ್ ಬಿದ್ದು ಗಾಯಗಾಯಾಳುಗಳಿಗೆ ಆಲ್ಟಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆ ಫಲಕಾರಿಯಾಗದೆ ಮೂವರಲ್ಲಿ ಇಬ್ಬರ ಸಾವು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial