ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕರಗಿಸಿ ಬಿಡುತ್ತದೆ ಈ ಹಣ್ಣು.

ಬೆಂಗಳೂರು : ಚಳಿ ಹೆಚ್ಚಾಗುತ್ತಿದ್ದಂತೆ ಹೃದಯಾಘಾತ ಪ್ರಕರಣಗಳು ಕೂಡಾ ಹೆಚ್ಚಾಗುತ್ತವೆ. ತಜ್ಞರ ಪ್ರಕಾರ, ಅಪಧಮನಿಗಳಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಹೃದಯಾಘಾತಕ್ಕೆ ಪ್ರಮುಖ ಕಾರಣ. ಕೊಲೆಸ್ಟ್ರಾಲ್ ಹೆಚ್ಚಳದಿಂದ ಅಪಧಮನಿಗಳು ಕಿರಿದಾಗಿದ್ದರೆ, ಹೊಟ್ಟೆಯಲ್ಲಿರುವ ಅಂಗಗಳಿಗೆ ರಕ್ತ ಪೂರೈಕೆ ಮೇಲೆ ಕೂಡಾ ಪರಿಣಾಮ ಬೀರುತ್ತದೆ.

ಇಂಥಹ ಪರಿಸ್ಥಿತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಲು ಈ ಹಣ್ಣು ಸಹಾಯಮಾಡುತ್ತದೆ.

ದಾಳಿಂಬೆಯಂತೆ ಸೇಬು ಕೂಡಾ ಹಲವು ರೋಗಗಳಿಗೆ ರಾಮಬಾಣ :
ದೇಹದ ಅಪಧಮನಿಗಳನ್ನು ಕಿರಿದಾಗಿಸಲು ಅಥವಾ ಬ್ಲಾಕ್ ಮಾಡಲು ಕೆಟ್ಟ ಕೊಲೆಸ್ಟ್ರಾಲ್ಕಾರಣವಾಗಬಹುದು. ಇದರಿಂದಾಗಿ ಹೃದಯಾಘಾತದ ಅಪಾಯ ಹೆಚ್ಚುತ್ತದೆ. ಹಾಗಾಗಿ ಆಹಾರದ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಜೊತೆಗೆ, ಲಿಪಿಡ್ ಪ್ರೊಫೈಲ್ ಮಟ್ಟವನ್ನು ಕಾಯ್ದುಕೊಳ್ಳುವ ವಸ್ತುಗಳ ಸೇವನೆಯನ್ನು ಹೆಚ್ಚಿಸಬೇಕು. ಅಧಿಕ ಕೊಲೆಸ್ಟ್ರಾಲ್ ಇದ್ದಾಗ ಸೇಬು ತಿನ್ನುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಅಧಿಕ ಕೊಲೆಸ್ಟ್ರಾಲ್ ಇದ್ದಾಗ ಸೇಬು ತಿನ್ನುವ ಪ್ರಯೋಜನಗಳು :
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಮತ್ತು ಇತರ ವಿಜ್ಞಾನ ಜರ್ನಲ್‌ಗಳಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ ,ಅಧಿಕ ಕೊಲೆಸ್ಟ್ರಾಲ್ಸಮಸ್ಯೆಯ ಸಮಯದಲ್ಲಿ ಸೇಬುಗಳನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ ಎಂದು ಹೇಳಲಾಗಿದೆ. ಈ ಸಂಶೋಧನೆಯಲ್ಲಿ, 46 ಸ್ಥೂಲಕಾಯದ ರೋಗಿಗಳ ಮೇಲೆ ಎರಡು ತಿಂಗಳವರೆಗೆ ಸಂಶೋಧ ನಡೆಸಲಾಯಿತು. ಮಾತ್ರವಲ್ಲ ಅವರ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಸೇಬಿನ ಪಾಲಿಫಿನಾಲ್ ಗಳು ಮತ್ತು ಫೈಬರ್ ಹೇಗೆ ಪ್ರಮುಖ ಪಾತ್ರವಹಿಸುತ್ತವೆ ಎಂಬುದನ್ನು ಕಂಡುಹಿಡಿಯಲಾಯಿತು.

ತಾಜಾ ಸೇಬಿನಲ್ಲಿ 485 ಮಿಗ್ರಾಂ ಪಾಲಿಫಿನಾಲ್ ಮತ್ತು 4.03 ಗ್ರಾಂ/100 ಗ್ರಾಂ ಫೈಬರ್ ಇದೆ ಎನ್ನುವುದನ್ನು ಈ ಸಂಶೋಧನೆಯಲ್ಲಿ ಹೇಳಲಾಗಿದೆ. 2 ತಿಂಗಳ ಕಾಲ ಸೇಬನ್ನು ನಿರಂತರವಾಗಿ ಸೇವಿಸುವುದರಿಂದ, ಬೊಜ್ಜು ಹೊಂದಿರುವ ಹೈಪರ್ಲಿಪಿಡೆಮಿಕ್ ಜನರ ಲಿಪಿಡ್ ಪ್ರೊಫೈಲ್ ಅನ್ನು ಸರಿಪಡಿಸಲಾಯಿತು. ಅದೇ ರೀತಿ, ಇನ್ನೊಂದು ವರದಿಯ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 2 ಸೇಬುಗಳನ್ನು ತಿನ್ನುವ ಮೂಲಕ ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಂದರೆ, ಪ್ರತಿದಿನ ಒಂದರಿಂದ ಎರಡು ಸೇಬುಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಯಾಗಲು ಸಹಾಯವಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ಬಜೆಟ್ ಮಂಡನೆ

Fri Jan 13 , 2023
ನವದೆಹಲಿ,ಜ.೧೩- ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಫೆ. ೧ ರಂದು ಮಂಡನೆಯಾಗಲಿದೆ. ಕರ್ನಾಟಕ ಸೇರಿದಂತೆ ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯುವ ರಾಜ್ಯಗಳಿಗೆ ಭರಪೂರ ಕೊಡುಗೆಗಳು ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ. ಶ್ರೀಸಾಮಾನ್ಯನಿಗೆ ಹೊರೆಯಾಗದ ರೀತಿಯಲ್ಲಿ ಜನಪ್ರಿಯ ಬಜೆಟ್ ಮಂಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿದ್ಧತೆ ನಡೆಸಿದ್ದಾರೆ.ಕೇಂದ್ರ ಮುಂಗಡ ಪತ್ರದ ಬಜೆಟ್ ಅಧಿವೇಶನ ಈ ತಿಂಗಳ ೩೧ ರಿಂದ ಏಪ್ರಿಲ್ ೬ರ ವರೆಗೆ ನಡೆಸಲು ಕೇಂದ್ರ ಸರ್ಕಾರ […]

Advertisement

Wordpress Social Share Plugin powered by Ultimatelysocial