ಕಾಶ್ಮೀರದ ಶ್ರೀನಗರದಲ್ಲಿ ಭಾರೀ ಹಿಮಪಾತವು ಇಂದು ನಡೆಯಲಿರುವ ಕಾಂಗ್ರೆಸ್‌ನ ಪ್ಯಾನ್-ಇಂಡಿಯಾ ಪಾದಯಾತ್ರೆ.

ಹೊಸದಿಲ್ಲಿ: ಕಾಶ್ಮೀರದ ಶ್ರೀನಗರದಲ್ಲಿ ಭಾರೀ ಹಿಮಪಾತವು ಇಂದು ನಡೆಯಲಿರುವ ಕಾಂಗ್ರೆಸ್‌ನ ಪ್ಯಾನ್-ಇಂಡಿಯಾ ಪಾದಯಾತ್ರೆ ‘ಭಾರತ್ ಜೋಡೊ ಯಾತ್ರೆ’ಯ ಸಮಾರೋಪ ಸಮಾರಂಭದ ಸಂಭ್ರಮಾಚರಣೆಯ ಉತ್ಸಾಹವನ್ನು ಕುಗ್ಗಿಸಬಹುದು.

135 ದಿನಗಳ ಸುದೀರ್ಘ ಕನ್ಯಾಕುಮಾರಿ-ಕಾಶ್ಮೀರ ಯಾತ್ರೆಯ ಸಮಾರೋಪದ ಅಂಗವಾಗಿ ಕಾಂಗ್ರೆಸ್ ಪಕ್ಷವು ಶೇರ್-ಐ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೆಗಾ ರ್ಯಾಲಿಯನ್ನು ಆಯೋಜಿಸುತ್ತಿದೆ.

ಇಡೀ ಕಾಂಗ್ರೆಸ್ ನಾಯಕತ್ವವಲ್ಲದೆ , ವಿರೋಧ ಪಕ್ಷಗಳ ಹನ್ನೆರಡು ನಾಯಕರು ರ್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದಾಗ್ಯೂ, ಹಿಮಪಾತವು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚುವಂತೆ ಮಾಡಿದೆ. ಇದು ವಿಮಾನ ಸಂಚಾರಕ್ಕೂ ಅಡ್ಡಿಪಡಿಸಬಹುದು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಹಲವು ವಿರೋಧ ಪಕ್ಷದ ನಾಯಕರಿಗೆ ಭಾಗವಹಿಸಲು ಸಾಧ್ಯವಾಗದಿರಬಹುದು.

ಕಡಿಮೆ ಗೋಚರತೆ ಹಾಗೂ ನಿರಂತರ ಹಿಮಪಾತವು ಶ್ರೀನಗರಕ್ಕೆ ಎಲ್ಲಾ ವಿಮಾನಗಳನ್ನು ವಿಳಂಬಗೊಳಿಸಿದೆ ಎಂದು ಶ್ರೀನಗರದ ವಿಮಾನ ನಿಲ್ದಾಣದ ನಿರ್ದೇಶಕ ಕುಲದೀಪ್ ಸಿಂಗ್ ರಿಷಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ವಿಸ್ತಾರಾ ಏರ್‌ಲೈನ್ಸ್ ದಿಲ್ಲಿಯಿಂದ ಶ್ರೀನಗರಕ್ಕೆ ತನ್ನ ಎರಡೂ ವಿಮಾನಗಳನ್ನು ದಿನದ ಮಟ್ಟಿಗೆ ರದ್ದುಗೊಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಧ್ಯ ನಿಷೇದ ಮರು ಪರಿಶೀಲನೆಗೆ ಮಾಂಝಿ ಮನವಿ.

Mon Jan 30 , 2023
ರಾಜ್ಯದಲ್ಲಿ ಮದ್ಯ ನಿಷೇಧ ಹಿಂಪಡೆಯುವಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಮಧ್ಯ ನಿಷೇಧದಿಂದ ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಮದ್ಯದ ನೀತಿಯನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ .ಮಹಾಮೈತ್ರಿಕೂಟದ ಮಿತ್ರಪಕ್ಷವಾದ ಹಿಂದೂಸ್ತಾನಿ ಅವಾಮ್ ಮೋರ್ಚಾದ ಗಯಾದಲ್ಲಿ ಮೂರು ದಿನಗಳ ಕಾಲ ನಡೆದ ಬೋಧ ಮಹೋತ್ಸವದ ಸಭೆ ಉದ್ದೇಶಿಸಿ ಮಾತನಾಡಿದ ಜಿತನ್ ರಾಮ್ ಮಾಂಝಿ, “ರಾಜ್ಯದಲ್ಲಿ […]

Advertisement

Wordpress Social Share Plugin powered by Ultimatelysocial