ಪ್ರತಿದಿನ ಈ ಹರ್ಬಲ್‌ ಚಹಾ ಕುಡಿದ್ರೆ ಕೊರೊನಾ ಭಯವಿಲ್ಲ..!

ಗತ್ತಿನಾದ್ಯಂತ ಮತ್ತೆ ಕೊರೊನಾ ಭೀತಿ ಶುರುವಾಗಿದೆ. ಭಾರತದಲ್ಲಿ ಕೂಡ ಕೋವಿಡ್‌ನ ಹೊಸ ರೂಪಾಂತರಿ ವೈರಸ್‌ ಬಿಎಫ್.7 ಆತಂಕ ಸೃಷ್ಟಿಸಿದೆ. ಕೊರೊನಾಕ್ಕೆ ಭಯಪಟ್ಟುಕೊಂಡು ಮನೆಯಲ್ಲೇ ಕೂರುವುದು ಅಸಾಧ್ಯ. ಆದರೆ ಈ ಸಾಂಕ್ರಾಮಿಕ ಕಾಯಿಲೆಯಿಂದ ಬಚಾವ್‌ ಆಗುವುದು ಕೂಡ ಅನಿವಾರ್ಯವಾಗಿದೆ.ಹಾಗಾಗಿ ಕೊರೊನಾಗೆ ಭಯಪಡುವ ಬದಲು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು.ಕೋವಿಡ್-19 ಲಸಿಕೆಯ ಎಲ್ಲಾ ಮೂರು ಡೋಸ್‌ಗಳನ್ನು ಪಡೆಯದೇ ಇದ್ದರೆ ಸೋಂಕಿನ ಅಪಾಯ ಮತ್ತಷ್ಟು ಹೆಚ್ಚಾಗಿರುತ್ತದೆ. ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಲೆಮನ್‌ಗ್ರಾಸ್‌ ಅಥವಾ ಮಜ್ಜಿಗೆ ಹುಲ್ಲಿನ ಚಹಾವನ್ನು ನಿಯಮಿತವಾಗಿ ಸೇವಿಸಿ.ಲೆಮನ್‌ಗ್ರಾಸ್‌ ಒಂದು ಹಸಿರು ಸಸ್ಯವಾಗಿದ್ದು, ಇದನ್ನು ಆಗ್ನೇಯ ದೇಶಗಳಲ್ಲಿ ಆಹಾರವಾಗಿ ಬಳಸಲಾಗುತ್ತದೆ. ಲೆಮನ್‌ಗ್ರಾಸ್‌ನಿಂದ ಹರ್ಬಲ್ ಟೀ ಮಾಡಿ ಕುಡಿದರೆ ರೋಗನಿರೋಧಕ ಶಕ್ತಿ ವೃದ್ಧಿಯಾಗುವುದಲ್ಲದೆ ಜೀರ್ಣಕ್ರಿಯೆಯೂ ಚೆನ್ನಾಗಿ ಆಗುವುದರಿಂದ ತೂಕ ಇಳಿಸುವುದು ಸುಲಭವಾಗುತ್ತದೆ.ಲೆಮನ್‌ ಗ್ರಾಸ್‌, ಎಂಟಿ-ಒಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ, ಇದು ದೇಹಕ್ಕೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್‌ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಪರಿಣಾಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕೋವಿಡ್ -19 ನಂತಹ ವೈರಲ್ ಸೋಂಕನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ. ದೇಹದ ವಿಷವನ್ನು ಹೊರಹಾಕಲು ಸಹಕಾರಿಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷಾಚರಣೆ; ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ...!!

Sat Dec 31 , 2022
ಹೊಸ ವರ್ಷದ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದೆ. ಕೊರೊನಾ ರೂಪಾಂತರಿ ಆತಂಕದ ನಡುವೆ ಹೊಸ ವರ್ಷದ ಸ್ವಾಗತಕ್ಕೆ ಜನರು ಸಿದ್ಧತೆ ನಡೆಸಿದ್ದಾರೆ. ಆದರೆ ರಾಜ್ಯದ ಕೆಲ ಪ್ರವಾಸಿ ತಾಣಗಳಲ್ಲಿ ನಿರ್ಬಂಧ ವಿಧಿಸಲಾಗಿದೆ.ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.ಡಿಸೆಂಬರ್ 31ರ ರಾತ್ರಿ 9 ಗಂಟೆಯಿಂದ 2023ರ ಜನವರಿ 1ರ ಬೆಳಿಗ್ಗೆ 5 ಗಂಟೆಯವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಚಾಮುಂಡಿ ಬೆಟ್ಟದ ವ್ಯೂ […]

Advertisement

Wordpress Social Share Plugin powered by Ultimatelysocial