ವಿರಾಟಪುರ ವಿರಾಗಿ’ಬಿಡುಗಡೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಂಸ್ಥಾಪಕರಾದ ಶ್ರೀ ಹಾನಗಲ್ ಕುಮಾರಸ್ವಾಮಿಗಳವರ ಜೀವನ ಆಧಾರಿತ ಚಲನಚಿತ್ರ `ವಿರಾಟಪುರ ವಿರಾಗಿ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ದಾವಣಗೆರೆಯ ಎಸ್.ಎಸ್.ಮೂವೀ ಟೈಮ್‌ನಲ್ಲಿ ಬಿಡುಗಡೆಗೊಂಡಿತು.ನಗರದ ಎಸ್.ಎಸ್.ಮೂವೀ ಟೈಮ್‌ನಲ್ಲಿ ಏರ್ಪಾಡಾಗಿದ್ದ ಚಿತ್ರದ ಪ್ರದರ್ಶನವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷರುಗಳಾದ ಎಸ್.ಎಸ್.ಗಣೇಶ್, ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.ನಂತರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ `ವಿರಾಟಪುರ ವಿರಾಗಿ’ ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದರು.19ನೇ ಶತಮಾನದಲ್ಲಿ ಸಮಾಜದಲ್ಲಿನ ಮೂಢನಂಬಿಕೆ, ಮಹಿಳಾ ಸ್ವಾತಂತ್ರ÷್ಯ, ಆರೋಗ್ಯ, ಶಿಕ್ಷಣದಲ್ಲಿನ ಜಾತಿ – ಮತ, ಭೇದ, ಭಾವವಿಲ್ಲದೇ ಎಲ್ಲಾ ವರ್ಗಕ್ಕೂ ಸೀಮಿತವಾಗಿ ಕೆಲಸ ಮಾಡಿದ ಹಾನಗಲ್ ಶಿವಯೋಗಿಗಳ ಜೀವನ ಇಂದಿನ ಸಮುದಾಯಕ್ಕೆ ಮಾರ್ಗದರ್ಶನವಾಗಿದ್ದು, ಪ್ರತಿಯೊಬ್ಬರೂ ಈ ಚಿತ್ರವನ್ನು ವೀಕ್ಷಿಸಿ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಐಗೂರು ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರೇಶಿವಪ್ಳರ ಸಿದ್ದೇಶ್, ಅಜ್ಜಂಪುರ ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ರಮೇಶ್ ಬಿ.ಜೆ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶುಭ ಐನಳ್ಳಿ, ಸುಷ್ಮಾ ಪಾಟೀಲ್, ಗೀತಾ ಚಂದ್ರಶೇಖರ್, ನಿರ್ಮಲಾ ಸುಭಾಷ್, ಶಶಿಕಲಾ ಮೂರ್ತಿ ಮತ್ತಿತರರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ರಿಕೆಟ್ ಹಿರಿಯೂರು ತಂಡಕ್ಕೆ ಪ್ರಥಮ ಬಹುಮಾನ

Sat Jan 14 , 2023
ಇಲ್ಲಿನ  ಛಾಯಾಗ್ರಾಹಕರ ಸಂಘದ ವತಿಯಿಂದ  ನೆಹರು ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಿರಿಯೂರು ಛಾಯಾಗ್ರಾಹಕರ ತಂಡ ಪ್ರಥಮ ಬಹುಮಾನಗಳಿಸಿ ಜಯಭೇರಿ ಬಾರಿಸಿದೆ, ಸಮರೋಪ ಸಮಾರಂಭದಲ್ಲಿ  ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ್ ರವರು ಪ್ರಥಮ ಬಹುಮಾನ 50,000 ನಗದು ಮತ್ತು ಆಕರ್ಷಕ ಟ್ರೋಫಿ ನೀಡಿದರು.  ದ್ವಿತೀಯ ಬಹುಮಾನವನ್ನು ಬೆಂಗಳೂರಿನ ದಾಸರಹಳ್ಳಿ ತಂಡ ಪಡೆದಿದ್ದು  30000 ನಗದು  ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು. ಸಮಾರಂಭದಲ್ಲಿ ರಾಜ್ಯ ಪ್ರವರ್ಗ 1ರ ಒಕ್ಕೂಟದ […]

Advertisement

Wordpress Social Share Plugin powered by Ultimatelysocial