ಹೊಸ ವರ್ಷಾಚರಣೆ; ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ…!!

ಹೊಸ ವರ್ಷದ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದೆ. ಕೊರೊನಾ ರೂಪಾಂತರಿ ಆತಂಕದ ನಡುವೆ ಹೊಸ ವರ್ಷದ ಸ್ವಾಗತಕ್ಕೆ ಜನರು ಸಿದ್ಧತೆ ನಡೆಸಿದ್ದಾರೆ. ಆದರೆ ರಾಜ್ಯದ ಕೆಲ ಪ್ರವಾಸಿ ತಾಣಗಳಲ್ಲಿ ನಿರ್ಬಂಧ ವಿಧಿಸಲಾಗಿದೆ.ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.ಡಿಸೆಂಬರ್ 31ರ ರಾತ್ರಿ 9 ಗಂಟೆಯಿಂದ 2023ರ ಜನವರಿ 1ರ ಬೆಳಿಗ್ಗೆ 5 ಗಂಟೆಯವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್ ಬಳಿ ಹೆಚ್ಚು ಜನರು ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರುಚಿಕರ 'ರೋಸ್ ಸಂದೇಶ್' ಮಾಡುವ ವಿಧಾನ

Sat Dec 31 , 2022
ಸಿಹಿ ತಿನ್ನಬೇಕು ಅನಿಸ್ತಿದೆಯಾ.? ಹಾಗಿದ್ರೆ ಇಲ್ಲಿ ಒಂದು ರುಚಿಕರವಾದ ಸಿಹಿ ತಿನಿಸಿದೆ. ಒಮ್ಮೆ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ. ಮಾಡುವ ವಿಧಾನ ಕೂಡ ಸುಲಭವಿದೆ.1 ಟೇಬಲ್ ಸ್ಪೂನ್ – ರೋಸ್ ಶರಬತ್, 5 – ಹನಿ-ರೋಸ್ ಎಸೆನ್ಸ್, 2 ಕಪ್ – ಹಾಲು, 1 ಟೇಬಲ್ ಸ್ಪೂನ್ – ಲಿಂಬೆಹಣ್ಣಿನ ರಸ, 1 ½ ಟೇಬಲ್ ಸ್ಪೂನ್ – ಸಕ್ಕರೆ ಪುಡಿ, 1 ಟೇಬಲ್ ಸ್ಪೂನ್ – ಹಾಲು, […]

Advertisement

Wordpress Social Share Plugin powered by Ultimatelysocial