ರುಚಿಕರ ‘ರೋಸ್ ಸಂದೇಶ್’ ಮಾಡುವ ವಿಧಾನ

ಸಿಹಿ ತಿನ್ನಬೇಕು ಅನಿಸ್ತಿದೆಯಾ.? ಹಾಗಿದ್ರೆ ಇಲ್ಲಿ ಒಂದು ರುಚಿಕರವಾದ ಸಿಹಿ ತಿನಿಸಿದೆ. ಒಮ್ಮೆ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ. ಮಾಡುವ ವಿಧಾನ ಕೂಡ ಸುಲಭವಿದೆ.1 ಟೇಬಲ್ ಸ್ಪೂನ್ – ರೋಸ್ ಶರಬತ್, 5 – ಹನಿ-ರೋಸ್ ಎಸೆನ್ಸ್, 2 ಕಪ್ – ಹಾಲು, 1 ಟೇಬಲ್ ಸ್ಪೂನ್ – ಲಿಂಬೆಹಣ್ಣಿನ ರಸ, 1 ½ ಟೇಬಲ್ ಸ್ಪೂನ್ – ಸಕ್ಕರೆ ಪುಡಿ, 1 ಟೇಬಲ್ ಸ್ಪೂನ್ – ಹಾಲು, 1 ಟೇಬಲ್ ಸ್ಪೂನ್ – ಸಣ್ಣಗೆ ಕತ್ತರಿಸಿಕೊಂಡ ಬಾದಾಮಿ.ಮೊದಲಿಗೆ 2 ಕಪ್ ಹಾಲನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿ 4 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಇದಕ್ಕೆ ಲಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಹಾಲು ಒಡೆಯುತ್ತದೆ. ನಂತರ ಇದನ್ನು ಸೋಸಿಕೊಳ್ಳಿ.ನಂತರ ಇದರ ಮೇಲೆ ತಣ್ಣೀರು ಹಾಕಿ ಮತ್ತೊಮ್ಮೆ ನೀರನ್ನು ಶೋಧಿಸಿಕೊಂಡು ಅದರಲ್ಲಿರುವ ಪನ್ನೀರ್ ಅನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಸಕ್ಕರೆ ಪುಡಿ, ರೋಸ್ ಶರಬತ್ ಹಾಗೂ ರೋಸ್ ಎಸೆನ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ 1 ಟೇಬಲ್ ಸ್ಪೂನ್ ಹಾಲು ಸೇರಿಸಿ ತರಿ ತರಿಯಾಗಿ ರುಬ್ಬಿಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ಇದರಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಮತ್ತೆಗೆ ಒತ್ತಿಕೊಳ್ಳಿ. ಇದರ ಮಧ್ಯ ಭಾಗಕ್ಕೆ ಬಾದಾಮಿ ಚೂರುಗಳನ್ನು ಹಾಕಿ ಸರ್ವ್ ಮಾಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಪ್ಪಲಿಯಿಂದ ಗಾಯವಾಗಿದ್ರೆ ಇಲ್ಲಿದೆ ನೋಡಿ ಮದ್ದು..!

Sat Dec 31 , 2022
  ಹೊಸದಾಗಿ ಕೊಂಡ ಶೂ ಅಥವಾ ಚಪ್ಪಲಿ ಕಾಲಿಗೆ ಕಚ್ಚುತ್ತಿದೆಯೇ, ಅ ನೋವು ತಡೆಯಲಾರದಷ್ಟು ಕಾಡುತ್ತಿದೆಯೇ? ಇದನ್ನು ಸರಿಪಡಿಸುವುದು ಈಗ ಸುಲಭ.ಹೊಸ ಪಾದರಕ್ಷೆ ಕಾಲುಗಳಿಗೆ ಹೊಂದಿಕೊಳ್ಳುವ ತನಕ ಎಲ್ಲಾದರೂ ಒಂದು ಕಡೆ ಉಜ್ಜಿ ಚಿಕ್ಕ ಗಾಯವನ್ನುಂಟು ಮಾಡುತ್ತದೆ.ಗುಳ್ಳೆಯಂತೆ ಅಥವಾ ಗಾಯದ ರೂಪದಲ್ಲಿರುವ ಇದಕ್ಕೆ ಆಲೋವೆರಾದ ಜೆಲ್ ಅನ್ನು ಹಚ್ಚಿ. ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದರಿಂದ ನೋವು ಕಡಿಮೆಯಾಗುತ್ತದೆ ಮತ್ತು ಗಾಯವೂ ಉಳಿಯುವುದಿಲ್ಲ.ಅಲಿವ್ ಎಣ್ಣೆ ಗಾಯಕ್ಕೆ ಹೆಚ್ಚು ಸೂಕ್ತವಾದದ್ದು. […]

Advertisement

Wordpress Social Share Plugin powered by Ultimatelysocial