POLICE CRIME:ಹಾಫ್ ಹೆಲ್ಮೆಟ್ ಧರಿಸಿದವನಿಂದ 100 ರೂ. ಸ್ವೀಕರಿಸಿದ,ಕಾನ್ಸ್ಟೇಬಲ್ ಸಸ್ಪೆಂಡ್;

ಬೆಂಗಳೂರು: ಆಫ್ ಹೆಲ್ಮೆಟ್ ಧರಿಸಿದವನಿಂದ 100 ರೂಪಾಯಿ ಸ್ವೀಕರಿಸಿದ ಪ್ರಕರಣ ಸಂಬಂಧ ಬೆಂಗಳೂರಿನ ಎಚ್‌ಎಎಲ್ ಸಂಚಾರ ಠಾಣಾ ಕಾನ್ಸ್ಟೇಬಲ್ ಪವನ್ ದ್ಯಾಮಣ್ಣನವರ್ ಅಮಾನತುಗೊಳಿಸಲಾಗಿದೆ. ಇತ್ತೀಚಿಗಷ್ಟೇ ದ್ವಿಚಕ್ರ ವಾಹನ ಸವಾರನಿಂದ ಕಾನ್ ಸ್ಟೇ ಬಲ್ ಪವನ್ ದ್ಯಾಮಣ್ಣನವರ್ ಹಣ ಸ್ವೀಕರಿಸುವ ವಿಡಿಯೋ ವೈರಲ್ ಆಗಿತ್ತು.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ಬಳಿಕ ತನಿಖೆಗೆ ಆದೇಶಿಸಲಾಗಿತ್ತು. ತನಿಖೆ ವೇಳೆ ಹಣ ಸ್ವೀಕರಿಸುವುದು, ಬಳಿಕ ಹಣ ವಾಪಾಸ್ ಮಾಡಿರುವುದು ಸಾಭೀತು ಹಿನ್ನೆಲೆ ಸಂಚಾರ ಠಾಣಾ ಕಾನ್ಸ್ಟೇಬಲ್ ಪವನ್ ದ್ಯಾಮಣ್ಣನವರ್ ಅಮಾನತುಗೊಳಿಸಿ ಜಂಟಿ ಆಯುಕ್ತ ಡಾ. ಬಿ. ಆರ್. ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಕಾನ್ಸ್ ಟೇಬಲ್ ಗೆ ದಂಡ ವಿಧಿಸುವ ಅಧಿಕಾರವಿಲ್ಲ. ಎಎಸ್ ಐ ಮೇಲ್ದರ್ಜೆಯ ಅಧಿಕಾರಿಗಳಿಗೆ ಮಾತ್ರ ದಂಡ ವಿಧಿಸುವ ಅಧಿಕಾರವಿದೆ ಅಂತ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀನಗರದಲ್ಲಿ ಎನ್‌ಕೌಂಟರ್‌ನಲ್ಲಿ 2 ಎಲ್‌ಇಟಿ ಭಯೋತ್ಪಾದಕರು ಹತ್ಯೆ; ಇತ್ತೀಚೆಗೆ ನಡೆದ ಪೋಲೀಸರ ಹತ್ಯೆಯಲ್ಲಿ ಒಬ್ಬರು ಭಾಗಿಯಾಗಿದ್ದರು

Sat Feb 5 , 2022
  ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಶನಿವಾರ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿ (ಟಿಆರ್‌ಎಫ್) ನೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ. ಹತರಾದ ಭಯೋತ್ಪಾದಕರನ್ನು ದಕ್ಷಿಣ ಕಾಶ್ಮೀರದ ನಿವಾಸಿಗಳು ಇಖ್ಲಾಕ್ ಅಹ್ಮದ್ ಹಜಾಮ್ ಮತ್ತು ಆದಿಲ್ ನಿಸಾರ್ ದಾರ್ ಎಂದು ಗುರುತಿಸಲಾಗಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಹತ್ಯೆಯಲ್ಲಿ ಹಜಾಮ್ ಭಾಗಿಯಾಗಿದ್ದ. ಜನವರಿ 29 ರಂದು […]

Advertisement

Wordpress Social Share Plugin powered by Ultimatelysocial