ಒಣ ಕಣ್ಣಿನ ಸಮಸ್ಯೆಗೆ ಇಲ್ಲಿದೆ ಆರ್ಯುವೇದದ ಪರಿಹಾರ!

ಣ ಕಣ್ಣಿನ ಸಮಸ್ಯೆಯನ್ನು ಶಮನಗೊಳಿಸಲು ಪ್ರಾಣ ಹೆಲ್ತ್​​ ಕೇರ್​ ಸೆಂಟರ್​​ ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರು ಕೆಲವು ಆರ್ಯುವೇದದ ಸಲಹೆಗಳನ್ನು ನೀಡುತ್ತಾರೆ. ಕೇವಲ ಮೂರು ಪದಾರ್ಥಗಳಿಂದ ನಿಮ್ಮ ಒಣ ಕಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
​​ಇಂದಿನ ಬದಲಾದಜೀವನಶೈಲಿಯಿಂದಾಗಿ ಸಾಕಷ್ಟು ಹೊತ್ತು ಮೊಬೈಲ್​ ಫೋನ್​, ಲ್ಯಾಪ್​​ ಟಾಪ್​​ಗಳಲ್ಲಿ ಸಮಯ ಕಳೆಯುವುದು ಸಾಮಾನ್ಯವಾಗಿದೆ. ಇದು ಕಾಲಕ್ರಮೇಣ ಕಣ್ಣಿನ ಆರೋಗ್ಯವನ್ನು ಕೆಡಿಸಬಹುದು. ಕಣ್ಣಿನ ದೃಷ್ಟಿ ದೋಷದಿಂದ ಹಿಡಿದು, ತಲೆನೋವು, ಒನ ಕಣ್ಣಿನ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಒಣ ಕಣ್ಣಿನ ಸಮಸ್ಯೆಯನ್ನು ಶಮನಗೊಳಿಸಲು ಪ್ರಾಣ ಹೆಲ್ತ್​​ ಕೇರ್​ ಸೆಂಟರ್​​ ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರು ಕೆಲವು ಆರ್ಯುವೇದದ ಸಲಹೆಗಳನ್ನು ನೀಡುತ್ತಾರೆ. ಕೇವಲ ಮೂರು ಪದಾರ್ಥಗಳಿಂದ ನಿಮ್ಮ ಒಣ ಕಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ​​ ಒಣ ಕಣ್ಣು ಹೊಂದಿರುವ ಜನರು ತುರಿಕೆ, ನೋವು, ಆಯಾಸ, ಸುಡುವಿಕೆ ಅಥವಾ ಕಣ್ಣಿನ ಬಣ್ಣದಲ್ಲಿ ಬದಲಾವಣೆ, ಕೆಂಪು ಕಣ್ಣಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸಲಾಗುವುದಿಲ್ಲ. ಆದರೆ ಆರ್ಯುವೇದದ ಮೂಲಕ ಕಣ್ಣಿನ ಸಮಸ್ಯೆ ಹೆಚ್ಚಾಗದಂತೆ ಜಾಗ್ರತೆ ವಹಿಸಬಹುದಾಗಿದೆ.ಆರೋಗ್ಯ ತಜ್ಞರಾದ ಡಿಂಪಲ್​​ ಜಂಗ್ಡಾರವರ ಕೆಲವು ಆರ್ಯುವೇದ ಸಲಹೆಗಳು:

ರೋಸ್ ವಾಟರ್:

ಈ ರೋಸ್ ವಾಟರ್ ಒಣ ಕಣ್ಣಿಬ ಸಮಸ್ಯೆಗೆ ಒಂದು ಉತ್ತಮ ಆರ್ಯುವೇದದ ಔಷಧಿಯಾಗಿದೆ ಎಂದು ಡಿಂಪಲ್​​ ಹೇಳುತ್ತಾರೆ. ಪ್ರತಿ ದಿನ ರಾತ್ರಿ ನೀವು ಮಲಗುವ ಮನ್ನ ನಿಮ್ಮ ಕಣ್ಣುಗಳಿಗೆ ಎರಡು ಹನಿ ರೋಸ್​​ ವಾಟರ್​​ ಹಾಕಿ. ಇದು ನಿಮ್ಮ ಆಯಾಸಗೊಂಡ ಮತ್ತು ದಣಿದ ಕಣ್ಣುಗಳಿಗೆ ಹೆಚ್ಚಿನ ವಿಶ್ರಾಂತಿ ನೀಡುತ್ತದೆ. ಇದಲ್ಲದೆ, ಇದು ವಿಟಮಿನ್ ಎ ಅಂಶವನ್ನು ಸಮೃದ್ಧವಾಗಿದೆ ಎಂದು ಹೇಳುತ್ತಾರೆ.

 ತುಪ್ಪ:

ಒಣ ಕಣ್ಣಿನ ಸಮಸ್ಯೆಗೆ ಮಾತ್ರವಲದೇ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ತುಪ್ಪ ಅತ್ಯಂತ ಪ್ರಯೋಜನಕಾರಿಯಾಗಿದೆ. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ (ಉಗುರು ಬೆಚ್ಚಗೆ) ಮತ್ತು ನೀವು ಮಲಗುವ ಮುನ್ನ ಕಣ್ಣಿಗೆ ಹಚ್ಚಿ. ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ವಿಶ್ರಾಂತಿಯ ಅನುಭವವನ್ನು ನೀಡುತ್ತದೆ ಎಂದು ಡಾ. ಡಿಂಪಲ್​​ ಹೇಳುತ್ತಾರೆ.

ಅಲೋವೆರಾ ಜೆಲ್:

ಒಣ ಕಣ್ಣುಗಳಿಗೆ ಅಲೋವೆರಾ ಜೆಲ್ ಪರಿಣಾಮಕಾರಿ ಪರಿಹಾರವಾಗಿದೆ. 1/2 ಚಮಚ ಅಲೋವೆರಾ ಜೆಲ್​​ನ್ನು ಒಂದು ಕಪ್​​ ನೀರಿಗೆ ಹಾಕಿ ಮತ್ತು ಈ ನೀರಿನಿಂದ ಮುಖ ತೊಳೆಯಿರಿ. ಉರಿಯೂತದ ಗುಣಲಕ್ಷಣಗಳು ಕೆಂಪು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ಆರಾಮವನ್ನು ನೀಡುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೀದರ ಬ್ರೀಮ್ಸ ಆಸ್ಪತ್ರೆ ಒಪಿಡಿ ಬಂದ್ ರೋಗಿಗಳು ಪರದಾಟ.

Wed Mar 1 , 2023
  ವಿವಿಧ ಬೇಡಿಕೆ ಈಡೇರಿಸುವಂತ್ತೆ ಸರ್ಕಾರಿ ನೌಕರರು‌ ಇಂದು ಮುಷ್ಕರಕ್ಕೆ‌ ಕರೆ ನೀಡದ್ದು ಬೀದರ್ ಬ್ರೀಮ್ಸ್ ಆಸ್ಪತ್ರೆಯಲ್ಲಿ ಓಪಿಡಿ ಬಂದ್ ಅಗಿದೆ ತುರ್ತು ಚಿಕಿತ್ಸೆಗೆ ಮಾತ್ರ ಓಪಿಡಿ ಚೀಟಿ‌ ನೀಡುತ್ತಿದ್ದು ಬೇರೆ ರೋಗಿಗಳಿಗೆ ಓಪಿಡಿ ಬಂದ್ ಮಾಡಲಾಗಿದೆ ಓಪಿಡಿ ಬಂದ್ ಮಾಡಿದ್ರಿಂದ ಕುಗ್ರಾಮಗಳಿಂದ ಬ್ರೀಮ್ಸ್ ಗೆ ಬಂದ ರೋಗಿಗಳು ಪರದಾಡುವಂತ್ತಾಗಿದ್ದು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ ಓಪಿಡಿ ಚೀಟಿ ಕೊಡುವ ಕೆಲ ಸಿಬ್ಬಂದಿಗಳು ಕೂಡಾ ಕೆಲಸಕ್ಕೆ ಗೈರು ಆಗಿದ್ದು ತುರ್ತು […]

Advertisement

Wordpress Social Share Plugin powered by Ultimatelysocial