ಧ್ವಜದ ಕಟ್ಟೆಯ ಮೇಲೆ ಕೇಸರಿ ಬಾವುಟ ಹಾರಿಸಿದ್ದು ತಪ್ಪು : ಸಚಿವ ಆರ್.ಅಶೋಕ್

ಬೆಂಗಳೂರು : ಕಾಲೇಜು ಕ್ಯಾಂಪಸ್ ನ ಒಳಗೆ ಕೇಸರಿ ಶಾಲು ಹಾಗೂ ಹಿಜಾಬ್ ಎರಡನ್ನು ಧರಿಸುವುದೂ ತಪ್ಪು. ಸಮವಸ್ತ್ರ ಸಂಹಿತೆ ಪಾಲನೆಯಾಗಬೇಕು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಪ್ರಕರಣದ ಹಿಂದೆ ಕಾಂಗ್ರೆಸ್ ನ ಷಡ್ಯಂತ್ರ ಇದೆ.ಕಾಂಗ್ರೆಸ್ ನ ಒಂದು ವರ್ಗ ಪ್ರಚೋದನೆ ನೀಡುತ್ತದೆ.

ಮತ್ತೊಂದು ವರ್ಗ ಬ್ಯಾಲೆನ್ಸ್ ಮಾಡುತ್ತದೆ ಎಂದು ಆರೋಪಿಸಿದರು. ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ಇಳಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.

ಡಿಕೆ ಶಿವಕುಮಾರ್ ಕಾಂಗ್ರೆಸ್ ಗೆ ಏನು ಬೇಕು ಆ ಸ್ಟೇಟ್ಮೆಂಟ್ ನೀಡಿದ್ದಾರೆ.ಅಲ್ಲಿನ ಎಸ್ ಪಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.ಧ್ವಜ ಇಳಿಸಿಲ್ಲ ಎಂದು ಹೇಳಿದ್ದಾರೆ. ಎಸ್ ಪಿ ಹೇಳೋದು ನಿಖರ ಮಾಹಿತಿ, ಡಿಕೆಶಿ ಹೇಳಿದ್ದು ಅಲ್ಲ.ಆದ್ರೆ ಧ್ವಜದ ಕಟ್ಟೆಯ ಮೇಲೆ ಕೇಸರಿ ಬಾವುಟ ಹಾರಿಸಿದ್ದು ತಪ್ಪು ಎಂದು ಅಭಿಪ್ರಾಯ ಪಟ್ಟರು.

ಡ್ರೆಸ್ ಕೋಡ್ ಏನಿದೆ ಎಂದು ಸರ್ಕಾರ ಆದೇಶಿಸಿದೆ. ಹಿಜಾಬ್,ಕೇಸರಿ ಶಾಲು ಧರಿಸುವುದು ತಪ್ಪು.ಶಾಲೆ ಆವರಣದಲ್ಲಿ ಎರಡೂ ತಪ್ಪೇ.ಕೋರ್ಟ್ ತೀರ್ಪು ಬರಬೇಕಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

KASHMIR:ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ;

Wed Feb 9 , 2022
J-K ನಲ್ಲಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಉಸಿರುಕಟ್ಟುವ ಚಿತ್ರಗಳು, ವೈರಲ್ ಚಿತ್ರಗಳನ್ನು ನೋಡಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಚೆನಾಬ್ ಸೇತುವೆಯ ಕಮಾನಿನ ಚಿತ್ರವನ್ನು ಹಂಚಿಕೊಂಡಿದ್ದಾರೆ, ಇದು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ. ‘ಮೋಡಗಳ ಮೇಲಿನ ವಿಶ್ವದ ಅತಿ ಎತ್ತರದ ಕಮಾನು ಚೆನಾಬ್ ಸೇತುವೆ’ ಎಂಬ ಟಿಪ್ಪಣಿಯೊಂದಿಗೆ ಚಿತ್ರಗಳನ್ನು Koo ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಚಿತ್ರವು ಹಿನ್ನೆಲೆಯಲ್ಲಿ ಪರ್ವತಗಳೊಂದಿಗೆ ಮೋಡಗಳ ಮೇಲೆ […]

Advertisement

Wordpress Social Share Plugin powered by Ultimatelysocial