ಬಂಜೆತನಕ್ಕೆ ಕಾರಣವಾಗುವ ಈ ‘ಪಾನೀಯ’ ಸೇವಿಸದಿರುವುದೇ ಒಳಿತು

ಗರದ ಜೀವನ ಶೈಲಿ ಮತ್ತು ಅಧಿಕ ಒತ್ತಡ ಬಂಜೆತನಕ್ಕೆ ಮೂಲ ಕಾರಣ. ಕೇವಲ ಇದರಿಂದ ಮಾತ್ರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಕೃತಕ ಸೋಡಾ ಪಾನೀಯದಿಂದ್ಲೂ ನಪುಂಸಕತೆ ಉಂಟಾಗಬಹುದು ಅನ್ನೋ ಆಘಾತಕಾರಿ ಮಾಹಿತಿಯೊಂದು ವೈದ್ಯಲೋಕದಿಂದ ಹೊರಬಿದ್ದಿದೆ.

ಕೃತಕ ಸೋಡಾ ಡ್ರಿಂಕ್ಸ್ ನಲ್ಲಿ ಸಿಹಿಗಾಗಿ ಸ್ಪಾರ್ಟಮೆ ಎಂಬ ವಸ್ತುವನ್ನು ಬಳಸಲಾಗುತ್ತದೆ.

ಅದು ಮನುಷ್ಯನ ಎಂಡೋಕ್ರೇನ್ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಇದರಿಂದ ಹಾರ್ಮೋನ್ ವ್ಯವಸ್ಥೆ ಏರುಪೇರಾಗುತ್ತದೆ, ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳಬಹುದು. ಬಹುತೇಕ ಎಲ್ಲ ಸೋಡಾ ಮತ್ತು ತಂಪು ಪಾನೀಯಗಳಲ್ಲಿ ಸ್ಪಾರ್ಟಮೆ ಎಂಬ ವಸ್ತುವನ್ನು ಬಳಸಲಾಗುತ್ತದೆಯಂತೆ.

ಅದರಿಂದ ಬಂಜೆತನ ಮತ್ತು ಗರ್ಭಪಾತದಂತಹ ಹಲವು ಸಮಸ್ಯೆಗಳು ಉದ್ಭವಿಸುತ್ತವೆ. ಇವುಗಳ ಅತಿಯಾದ ಸೇವನೆಯಿಂದ ವೃಷಣಕ್ಕೆ ಸಂಬಂಧಪಟ್ಟ ಖಾಯಿಲೆಗಳು ಕೂಡ ಆವರಿಸಿಕೊಳ್ಳಬಹುದು.

ಸ್ಪಾರ್ಟಮೆಯಲ್ಲಿರುವ ಫೆನಿಲಯೇಲಾನಿನ್ ಹಾಗೂ ಅಸ್ಪಾರ್ಟಿಕ್ ಎರಡೂ ಅಮಿನೋ ಆಮ್ಲಗಳು. ಇತರ ಆಮ್ಲಗಳೊಡನೆ ಬೆರೆಸದೇ ಇವನ್ನು ಸೇವನೆ ಮಾಡಿದಲ್ಲಿ ಫ್ರೀ ರಾಡಿಕಲ್ ಗಳ ಉತ್ಪಾದನೆ ಅತ್ಯಂತ ವೇಗವಾಗಿ ಆಗುತ್ತದೆ. ಇದರಿಂದ ಜೀವಕೋಶಗಳು ಸಾಯಲು ಆರಂಬಿಸುತ್ತವೆ. ವೀರ್ಯ ಮತ್ತು ಅಂಡಾಣು ಜೀವಕೋಶಗಳು. ಕೃತಕ ಪೇಯಗಳ ಸೇವನೆಯಿಂದ ಇವು ಕೂಡ ಸಾಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಅಷ್ಟೇ ಅಲ್ಲ ಕೃತಕ ಸಿಹಿ ಅಥವಾ ಇನ್ಯಾವುದೇ ಕೃತಕ ವಸ್ತುಗಳಿಂದ ತಯಾರಾದ ತಿನಿಸುಗಳು ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕೂಡ ಕುಗ್ಗಿಸುತ್ತವೆ. ಇದರಿಂದ ತೂಕ ಹೆಚ್ಚಾಗುತ್ತದೆ, ಹಾರ್ಮೋನುಗಳಲ್ಲಿ ಏರುಪೇರು ಉಂಟಾಗುತ್ತದೆ. ಇವೆರಡೂ ಬಂಜೆತನಕ್ಕೆ ಪ್ರಮುಖ ಕಾರಣಗಳು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ

Sat Jan 28 , 2023
ಬಿಪಿ ಸಮಸ್ಯೆ ಇದೆಯೇ? ಹಾಗಾದರೆ ನೀವು ಆಹಾರಕ್ರಮದ ಕಡೆ ತುಂಬಾನೇ ಗಮನಹರಿಸಬೇಕು. ಅದರಲ್ಲೂ ಅಧಿಕ ಸೋಡಿಯಂ ಇರುವ ಆಹಾರ ಸೇವಿಸಬಾರದು, ಅಧಿಕ ಸೋಡಿಯಂ ಇರುವ ಆಹಾರಗಳು ಬಿಪಿ ಮತ್ತಷ್ಟು ಹೆಚ್ಚು ಮಾಡುವುದು. ಬಿಪಿ ಸಮಸ್ಯೆ ಇರುವವರು ಪಿಜ್ಜಾ, ಸ್ಯಾಂಡ್‌ವಿಚ್‌, ಡ್ರೆಸ್ಸಿಂಗ್‌ ಮಾಡಿದ ಸಲಾಡ್, ಮಜ್ಜಿಗೆ ಬಗೆಯ ಆಹಾರಗಳನ್ನು ದೂರವಿಡುವುದು ಒಳ್ಳೆಯದು: ಟೇಬಲ್‌ ಸಾಲ್ಟ್ ಉಪ್ಪಿನಂಶ ಅಧಿಕ ತೆಗೆದುಕೊಂಡರೆ ದೇಹದಲ್ಲಿರುವ ನೀರಿನಂಶ ಕಡಿಮೆಯಾಗುವುದು, ಅಲ್ಲದೆ ರಕ್ತದಲ್ಲಿರುವ ನೀರಿನಂಶದ ಮೇಲೆ ಅಧಿಕ ಒತ್ತಡ […]

Related posts

Advertisement

Wordpress Social Share Plugin powered by Ultimatelysocial