ಕೋಟ್ಯಂತರ ರೂಪಾಯಿ ನಗದು,ಚಿನ್ನಾಭರಣಗಳನ್ನು ಈಗಾಗಲೇ ಜಪ್ತಿ :ಸಚಿವೆ ನಿರ್ಮಲಾ ಸೀತಾರಾಮನ್;

ನವದೆಹಲಿ ಉತ್ತರಪ್ರದೇಶ ಉದ್ಯಮಿ ಪಿಯೂಷ್ ಜೈನ್ ಅವರ ಮನೆ, ಕಾರ್ಖಾನೆ ಮತ್ತು ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣಗಳನ್ನು ಈಗಾಗಲೇ ಜಪ್ತಿ ಮಾಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಾತನಾಡಿದ್ದಾರೆ.

ದೆಹಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ನಿರ್ಮಲಾ ಸೀತಾರಾಮನ್​, ಕನೌಜ್​​ನಲ್ಲಿ ಸುಗಂಧ ದ್ರವ್ಯ ವ್ಯಾಪಾರಿ ಮೇಲೆ ದಾಳಿ ನಡೆಸಿ 200 ಕೋಟಿ ರೂ. ವಶಕ್ಕೆ ಪಡಿಸಿಕೊಳ್ಳಲಾಗಿದೆ. ಇದು ಬಿಜೆಪಿ ಹಣವಲ್ಲ ಎಂದು ತಿಳಿಸಿದ್ದಾರೆ.ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಹಣ ಬಿಜೆಪಿ ಪಕ್ಷಕ್ಕೆ ಸೇರಿದ್ದು ಎಂದು ಪ್ರತಿಪಕ್ಷಗಳು ಮಾತನಾಡಿಕೊಳ್ಳುತ್ತಿವೆ.

ಐಟಿ ಅಧಿಕಾರಿಗಳು ತಪ್ಪಾಗಿ ಪಿಯೂಷ್​ ಜೈನ್​ ನಿವಾಸದ ಮೇಲೆ ದಾಳಿ ನಡೆಸಿವೆ ಎಂಬ ಮಾತು ಕೇಳಿ ಬರಲು ಶುರುವಾಗಿದೆ ಎಂದು ಪ್ರಶ್ನೆ ಮಾಡಿದವು. ಈ ವೇಳೆ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್​, ಇದು ಬಿಜೆಪಿ ಹಣವಲ್ಲ. ಯಾವುದೇ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ 24 ಕೆಜಿ ಚಿನ್ನ ಇರಲು ಸಾಧ್ಯವಿಲ್ಲ. ಮನೆಯ ಗೋಡೆ ಎಷ್ಟು ಎತ್ತರವೂ, ನಗದು ಕೂಡ ಅಷ್ಟೇ ಎತ್ತರವಾಗಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BGMI: ಹ್ಯಾಕರ್​​ಗಳಿಗೆ ಶಾಶ್ವತವಾಗಿ ಡಿವೈಸ್ ಬ್ಯಾನ್ ಫೀಚರ್ ಪರಿಚಯ!

Sun Jan 2 , 2022
ಜನಪ್ರಿಯ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ  ಗೇಮ್ನ ಡೆವಲಪರ್ ಕ್ರಾಫ್ಟನ್ ಭಾರತದಲ್ಲಿನ ತನ್ನ ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್ಗಳಲ್ಲಿ ಮೋಸ ಮಾಡುವ ಗೇಮರುಗಳಿಗಾಗಿ ಬಳಸುವ ಡಿವೈಸ್ಗಳನ್ನು ನಿಷೇಧಿಸಲು ಪ್ರಾರಂಭಿಸುವುದಾಗಿ ಬಹಿರಂಗಪಡಿಸಿದೆ. ಡಿವೈಸ್ ನಿಷೇಧವು ಡಿಸೆಂಬರ್ 24 ರಿಂದ ಅನ್ವಯವಾಗುತ್ತದೆ. ಮತ್ತು ಕಂಪನಿಯು ಬ್ಲಾಗ್ ಪೋಸ್ಟ್ನಲ್ಲಿ ಹೇಳಿದೆ. ನ್ಯಾಯಯುತವಾದ ಆಟವನ್ನು ಒದಗಿಸಲು ಮತ್ತು ಕಾನೂನುಬಾಹಿರ ಕಾರ್ಯಕ್ರಮಗಳ ಬಳಕೆಯನ್ನು ತೊಡೆದುಹಾಕಲು ನಾವು ವಂಚಕರಿಗೆ ಹೆಚ್ಚುವರಿ ಶಿಕ್ಷೆಯನ್ನು ಘೋಷಿಸಲು ಬಯಸುತ್ತೇವೆ. ಇಲ್ಲಿಯವರೆಗೆ ನಿರ್ಬಂಧಗಳನ್ನು ಖಾತೆಗಳಿಗೆ ಮಾತ್ರ […]

Advertisement

Wordpress Social Share Plugin powered by Ultimatelysocial