ಹಾಡಹಗಲೇ ಬಂಗಾಳದ ಹೈವೇಯಲ್ಲಿ ಗುಂಡಿನ ದಾಳಿಗೆ ನಟಿ ರಿಯಾ ದುರಂತ ಅಂತ್ಯ

ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಜಾರ್ಖಂಡ್ ಮೂಲದ ನಟಿ ರಿಯಾ ಕುಮಾರಿ ಗುಂಡಿನ ದಾಳಿಯಲ್ಲಿ ದಾರುಣ ಅಂತ್ಯ ಕಂಡಿರುವ ಭೀಕರ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.ನಟಿ ರಿಯಾ ಪತಿ ಪ್ರಕಾಶ್ ಕುಮಾರ್ ಹೇಳಿಕೆ ಪ್ರಕಾರ, ರಿಯಾ ಕೋಲ್ಕತಾದಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ವೇಳೆ ಬುಧವಾರ 6ಗಂಟೆಗೆ ಈ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ. ಘಟನೆ ವೇಳೆ ಪತಿ ಪ್ರಕಾಶ್ ಕುಮಾರ್ ವಾಹನ ಚಲಾಯಿಸುತ್ತಿದ್ದು, ದಂಪತಿಗೆ ಮೂರು ವರ್ಷದ ಮಗಳಿದ್ದಾಳೆ ಎಂದು ವರದಿ ತಿಳಿಸಿದೆ.ಪ್ರಕಾಶ್ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ, ಹೌರಾ ಜಿಲ್ಲೆಯ ಬಗ್ನಾನ್ ಪ್ರದೇಶದ ಮಹಿಶ್ರೇಖಾ ಸೇತುವೆ ಸಮೀಪ ತಮ್ಮ ಕಾರನ್ನು ನಿಲ್ಲಿಸಿದ್ದು, ಈ ಸಂದರ್ಭದಲ್ಲಿ ಮೂವರು ಆಗಂತುಕರು ಶಸ್ತ್ರಾಸ್ತ್ರದೊಂದಿಗೆ ದರೋಡೆ ಮಾಡುವ ಉದ್ದೇಶದಿಂದ ದಾಳಿ ನಡೆಸಿದ್ದರು.ಈ ಸಂದರ್ಭದಲ್ಲಿ ನಾವು ಪ್ರತಿರೋಧ ಒಡ್ಡಿದ್ದು, ಆಗ ಒಬ್ಬಾತ ರಿಯಾ ಮೇಲೆ ಪಾಯಿಂಟ್ ಬ್ಲ್ಯಾಂಕ್ ರೇಂಜ್ ನಿಂದ ಗುಂಡಿಟ್ಟಿದ್ದ. ಆಕೆ ರಕ್ತದ ಮಡುವಿನಲ್ಲೇ ಕೊನೆಯುಸಿರೆಳೆದಿದ್ದಳು ಎಂದು ಪ್ರಕಾಶ್ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕದಲ್ಲಿನ ರಾಯಭಾರಿ ಕಚೇರಿ ಕಟ್ಟಡ ಮಾರಾಟಕ್ಕಿಟ್ಟ ಪಾಕ್

Wed Dec 28 , 2022
  ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನಕ್ಕೆ ಸಾಧ್ಯವಾಗದೆ ಇದೀಗ ಅಮೆರಿಕದಲ್ಲಿರುವ ತನ್ನ ರಾಯಭಾರ ಕಚೇರಿ ಕಟ್ಟಡವನ್ನು ಮಾರಾಟಕ್ಕಿಟ್ಟಿದೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಆಸ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.ವಾಷಿಂಗ್ಟನ್‌ನಲ್ಲಿ ರಾಯಭಾರಿ ಕಚೇರಿ ಕಟ್ಟಡದ ಮಾರಾಟಕ್ಕೆ ಬಿಡ್‌ಗಳನ್ನು ಆಹ್ವಾನಿಸಲಾಗಿದ್ದು, ಇದುವರೆಗೂ ಮೂರು ಬಿಡ್‌ಗಳನ್ನು ಸಲ್ಲಿಸಲಾಗಿದೆ ಎಂದು ಡಾನ್ ದಿನಪತ್ರಿಕೆ ಬಹಿರಂಗಪಡಿಸಿದೆ.ಈ ಮೂರು ಬಿಡ್‌ಗಳಲ್ಲಿ, ಒಂದು ಬಿಡ್ ಯಹೂದಿ ಕಂಪನಿ ಮತ್ತು ಇನ್ನೊಂದು ಭಾರತದಿಂದ ರಿಯಲ್ ಎಸ್ಟೇಟ್ ಕಂಪನಿ ಇದೆ. ಪಾಕಿಸ್ತಾನದ […]

Advertisement

Wordpress Social Share Plugin powered by Ultimatelysocial