ಕುಖ್ಯಾತ ರೌಡಿಶೀಟರ್ ಸೈಕಲ್ ರವಿ ಖಾಕಿಗೆ ಶರಣು.!

ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಪೊಲೀಸ್​ ಠಾಣೆ ಬಳಿ ದಿಢೀರ್  ಪ್ರತ್ಯಕ್ಷವಾಗಿದ್ದಾರೆ. ಸೈಕಲ್​ ರವಿ ತಮ್ಮ ವಕೀಲರೊಂದಿಗೆ ವಿ.ವಿ ಪುರಂ ಠಾಣೆಗೆ  ಭೇಟಿಕೊಟ್ಟಿದ್ದಾರೆ. ಜಯನಗರ ಠಾಣಾ ವ್ಯಾಪ್ತಿಯಲ್ಲಿ ಕೆಲ ಕುಖ್ಯಾತ ದುಷ್ಕರ್ಮಿಗಳು ಸೈಕಲ್ ರವಿ ಹತ್ಯೆಗೆ ಸ್ಕೆಚ್ ಹಾಕಿದ್ದರು.

ಅಷ್ಟೇ ಅಲ್ಲದೇ ಇತ್ತೀಚೆಗೆ ರಾಬರ್ಟ್​ ಸಿನಿಮಾ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಮತ್ತು ಅವರ ಸಹೋದರ ದೀಪಕ್ ಹತ್ಯೆಗೂ ಸಂಚು ಸಹ ರೂಪಿಸಿದ್ದರು. ಪ್ರಕರಣ ಸಂಬಂಧ ಸೈಕಲ್ ರವಿ ವಿಚಾರಣೆಗೆ ಪೊಲೀಸರು ಹುಡುಕಾಟ ನಡೆಸಿದ್ದು ಪೊಲೀಸರ ಕೈಗೆ ಸಿಗದೆ ಸೈಕಲ್ ರವಿ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರಿಗೆ ಆತನೇ ಬಂದು ಶರಣಾಗಿರುವುದು ಕೆಲ ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.

ಇದನ್ನೂ ಓದಿ : ಸಿಡಿ ವಿಚಾರದ ಪ್ರಶ್ನೆಗೆ ಸಿದ್ದು ಗಪ್-ಚುಪ್.!

Please follow and like us:

Leave a Reply

Your email address will not be published. Required fields are marked *

Next Post

ಹುಚ್ಚಾಟನ ರಂಪಾಟಕ್ಕೆ ಖಾಕಿಗೆ ಬಿತ್ತು ಏಟು.!

Tue Mar 16 , 2021
ತುಮಕೂರಿನ ಮಧುಗಿರಿ ತಾಲೂಕಿನಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ಹಲ್ಲೆ ಮಾಡಿದ್ದಾನೆ. ಮಧುಗಿರಿಯ ತಾಲ್ಲೂಕು ಕಚೇರಿ ಅವರಣ ಬಳಿ ಈ ಘಟನೆ ನಡೆದಿದ್ದು, ಶೂ ಹಿಡಿದು ಪೊಲೀಸರ ಮೇಲೆಯೇ ಎರಗಿದ್ದಾನೆ. ತುಂಗೋಟಿ ರಂಗರಾಜುನಿಂದ ಈ ರಂಪಾಟ ನಡೆದಿದ್ದು, ತನ್ನ ಹುಚ್ಚಾಟದಿಂದ ಪ್ರತಿಭಟನಾ ನಿರತರಿಂದ ಮೈಕ್ ಕಿತ್ತುಕೊಂಡು ರಂಪ ನಡೆಸಿದ್ದಾನೆ. ಈ ವೇಳೆ ಇದ್ದನ್ನು ಬೀಡಿಸಲು ಬಂದ ಖಾಕಿಯ ಮೇಲೆ ದಾಳಿ ನಡೆಸಿದ್ದಾನೆ. ಬಳಿಕ ಆಂಬ್ಯುಲೆನ್ಸ್ ಮೂಲಕ ಮಾನಸಿಕ ಅಸ್ವಸ್ಥತನನ್ನು […]

Advertisement

Wordpress Social Share Plugin powered by Ultimatelysocial