ಹಿಜಾಬ್ ವಿವಾದ; ಪರೀಕ್ಷೆ ತಪ್ಪಿಸಿಕೊಂಡವರಿಗೆ ಮರು ಪರೀಕ್ಷೆಗಿಲ್ಲ ಅವಕಾಶ; ಸಚಿವ ಮಾಧುಸ್ವಾಮಿ ಸ್ಪಷ್ಟನೆ

ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡರೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಚಿವ ಜೆ. ಮಾಧುಸ್ವಾಮಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ರಘುಪತಿ ಭಟ್, ಹಿಜಾಬ್ ಸಂಘರ್ಷದ ವೇಳೆ ಪರೀಕ್ಷೆಯಿಂದ ವಂಚಿತರಾದವರಿಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಕೊಡಬೇಕು.

ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು.

 ಅಲ್ಲದೇ ಕೋರ್ಟ್ ತೀರ್ಪು ಬಂದ ಬಳಿಕವೂ ಕೆಲ ಕಾಲೇಜಿನಲ್ಲಿ ವಿವಾದ ಮುಂದುವರೆದಿದೆ. ಅನಗತ್ಯ ವಿವಾದ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಹಿಜಾಬ್ ಕಾರಣಕ್ಕೆ ಪರೀಕ್ಷೆ ತಪ್ಪಿಸಿಕೊಂಡರೆ ಮರು ಪರೀಕ್ಷೆ ಬರೆಯಲು ಅವಕಾಶವಿಲ್ಲ. ಕೋರ್ಟ್ ಮಧ್ಯಂತರ ಆದೇಶದ ಬಳಿಕವೂ ಪರೀಕ್ಷೆ ತಪ್ಪಿಸಿಕೊಂಡರೆ ಅಂತಹ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ನಾವು ಒಂದು ವ್ಯವಸ್ಥೆಯಲ್ಲಿದ್ದೇವೆ. ಈಗ ಮರು ಪರೀಕ್ಷೆಗೆ ಅವಕಾಶ ಕೊಟ್ಟರೆ ಅದು ಬೇರೆ ರೀತಿ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.

ಒಂದು ವೇಳೆ ಮಧ್ಯಂತರ ಆದೇಶಕ್ಕಿಂತಲೂ ಮೊದಲೇ ಪರೀಕ್ಷೆ ಬರೆಯದವರಿಗೆ ಮತ್ತೆ ಅವಕಾಶ ಕೊಡುವ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಳೆದ ಜನ್ಮದಲ್ಲಿ ತನ್ನ ಪತ್ನಿ ತನ್ನ ಸಚಿವರೊಂದಿಗೆ ಸಂಬಂಧ ಹೊಂದಿದ್ದರು, ಅವರನ್ನು ಕೊಂದಿದ್ದರು ಎಂದು ಸಂಜಯ್ ದತ್!

Thu Mar 17 , 2022
ಬಿ-ಟೌನ್‌ನ ಅತ್ಯಂತ ಬೇಡಿಕೆಯ ಜೋಡಿಗಳಲ್ಲಿ ಒಬ್ಬರಾದ ಸಂಜಯ್ ದತ್ ಮತ್ತು ಮನಯತಾ ದತ್ ಅವರು ಎರಡು ವರ್ಷಗಳ ಪ್ರಣಯದ ನಂತರ ಫೆಬ್ರವರಿ 11, 2008 ರಂದು ಗಂಟು ಹಾಕಿದರು. ನಂತರ, ಅವರು ಅವಳಿ ಮಕ್ಕಳೊಂದಿಗೆ ಆಶೀರ್ವದಿಸಿದರು, ಅವರಿಗೆ ಇಕ್ರಾ ಮತ್ತು ಶಹರಾನ್ ಎಂದು ಹೆಸರಿಟ್ಟರು. ಅಂದಿನಿಂದ, ಹೆಚ್ಚು ಪ್ರೀತಿಯಲ್ಲಿರುವ ದಂಪತಿಗಳು ಮತ್ತು ಅವರ ಮಕ್ಕಳು ಯಾವಾಗಲೂ ಗುರಿಗಳ ನಂತರ ಅನುಕರಣೀಯವಾಗಿ ಸಂತೋಷದಿಂದ ಹೊಂದಿಸುತ್ತಿದ್ದಾರೆ. ಇತ್ತೀಚೆಗೆ, ಸಂಜಯ್ ಅವರು ಜನಪ್ರಿಯ ಚಾಟ್ […]

Advertisement

Wordpress Social Share Plugin powered by Ultimatelysocial