ಅಮೆರಿಕಾದಲ್ಲಿ ದೇವರನ್ನು ಭೇಟಿಯಾದ ರಾಜಮೌಳಿ.

ವಾಷಿಂಗ್ಟನ್‌ : ಭಾರತಕ್ಕೆ ಪ್ರತಿಷ್ಠಿತ ಗ್ಲೋಲ್ಡನ್‌ ಗ್ಲೋಬ್‌ ಅವಾರ್ಡ್‌ ತಂದುಕೊಟ್ಟ ʼಆರ್‌ ಆರ್‌ ಆರ್‌ʼ ಚಿತ್ರದ ʼನಾಟು ನಾಟುʼ ಹಾಡು ಇದೀಗ ವಿದೇಶಿ ಮಂದಿಯಲ್ಲೂ ಮೋಡಿ ಮಾಡಿದೆ.

80ನೇ ಗೋಲ್ಡನ್ ಗ್ಲೋಬ್‌ ಅವಾರ್ಡ್ಸ್‌ ನಲ್ಲಿ ಬೆಸ್ಟ್‌ ಒರಿಜಿನಲ್‌ ಸಾಂಗ್‌ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಈ ವೇಳೆ ಸಂತಸವನ್ನು ಹಂಚಿಕೊಂಡು ನಿರ್ದೇಶಕ ರಾಜಮೌಳಿ ಅವರು ʼಆರ್‌ ಆರ್‌ ಆರ್‌ʼ ಪಾರ್ಟ್‌ -2 ಮಾಡುವ ಬಗ್ಗೆಯೂ ಮಾತಾನಾಡಿದ್ದರು.

ಬಾಹುಬಲಿ ಸರಣಿಯಂತಹ ಐತಿಹಾಸಿಕ ಸಿನಿಮಾಗಳನ್ನು ಕೊಟ್ಟಿರುವ  ತನ್ನ ಮೆಚ್ಚಿನ ನಿರ್ದೇಶಕರನ್ನು ಭೇಟಿಯಾಗಿದ್ದಾರೆ.

ಹಾಲಿವುಡ್‌ ನಲ್ಲಿ ಮಾಸ್ಟರ್ ಆಫ್‌ ಸ್ಟೋರಿ ಟೇಲಿಂಗ್‌ ಎಂದೇ ಖ್ಯಾತರಾಗಿರುವ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ (Steven Spielberg) ಅವರನ್ನು ರಾಜಮೌಳಿ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ ನಲ್ಲಿ ಭೇಟಿಯಾಗಿರುವ ಫೋಟೋವನ್ನು ಹಂಚಿಕೊಂಡು, “ನಾನು ದೇವರನ್ನು ಭೇಟಿಯಾದೆ” ಎಂದು ಬರೆದುಕೊಂಡಿದ್ದಾರೆ.

ಸ್ಟೀವನ್ ಸ್ಪೀಲ್ಬರ್ಗ್ ಹಾಲಿವುಡ್‌ ನಲ್ಲಿ ʼ ಇಂಡಿಯಾನಾ ಜೋನ್ಸ್ʼ ಸರಣಿಯ ಸಿನಿಮಾಗಳಲ್ಲಿ ಖ್ಯಾತನಾಮರಾದವರು. ‘ಜಾವಸ್‌ʼ (Jaws), ʼಜುರಾಸಿಕ್ ಪಾರ್ಕ್ʼ(Jurassic Park) ,ʼ ಕಲರ್ ಪರ್ಪಲ್  ʼವೆಸ್ಟ್‌ ಸೈಡ್‌ ಸ್ಟೋರಿʼ, (West Side Story) ಹೀಗೆ ನೂರಕ್ಕೂ ಹೆಚ್ಚಿನ ಸಿನಿಮಾಗಳನ್ನು ಮಾಡಿದ್ದಾರೆ.

2023 ಗೋಲ್ಡನ್‌ ಗ್ಲೋಬ್‌ ನಲ್ಲಿ ʼದಿ ಫ್ಯಾಬೆಲ್‌ಮ್ಯಾನ್ಸ್ʼ ಸಿನಿಮಾಕ್ಕಾಗಿ ಬೆಸ್ಟ್‌ ಡೈರೆಕ್ಟರ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮಹೇಶ್‌ ಬಾಬು ಅವರೊಂದಿಗೆ ರಾಜಮೌಳಿ ಮಾಡುತ್ತಿರುವ ಸಿನಿಮಾಕ್ಕೆ ಖ್ಯಾತರಾಗಿರುವ ಸ್ಟೀವನ್ ಸ್ಪೀಲ್ಬರ್ಗ್ ಅವರ ʼಇಂಡಿಯಾನಾ ಜೋನ್ಸ್ʼ ಸಿನಿಮಾವೇ ಸ್ಫೂರ್ತಿಯಾಗಲಿದೆ ಎಂದು ರಾಜಮೌಳಿ ಅವರು ಈ ಹಿಂದೆ ಹೇಳಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊನ್ನಪ್ಪ ಭಾಗವತರ್ ಅಂದರೆ ಅದೊಂದು ಸಾಂಸ್ಕೃತಿಕ ಶ್ರೇಷ್ಠತೆಯ ಶಿಖರ.

Sat Jan 14 , 2023
ಹೊನ್ನಪ್ಪ ಭಾಗವತರ್ ಅಂದರೆ ಅದೊಂದು ಸಾಂಸ್ಕೃತಿಕ ಶ್ರೇಷ್ಠತೆಯ ಶಿಖರ. ಸಂಗೀತ, ರಂಗಭೂಮಿ, ಸಿನಿಮಾ ಹೀಗೆ ಎಲ್ಲೆಡೆ ನಟನೆ ಮತ್ತು ಗಾಯನದಲ್ಲಿ ಅವರು ವ್ಯಾಪಿಸಿದ್ದ ರೀತಿ ಹಾಗೂ ಅದಕ್ಕೆ ಮೆರುಗು ನೀಡುವಂತೆ ಹೊಂದಿದ್ದ ಸುರದ್ರೂಪ ಇವೆಲ್ಲವೂ ಅಪ್ಯಾಯಮಾನತೆ ಹುಟ್ಟಿಸುವಂತದ್ದು. ಮಹಾಕವಿ ಕಾಳಿದಾಸ ಚಿತ್ರವನ್ನು ನೋಡುವಾಗ ‘ಚೆಲುವಯ್ ಚೆಲ್ವೋ ತಾನಿ ತಂದನಾ  ಗೀತೆಯಲ್ಲಿ ಅವರು ತೋರುವ ಮುಗ್ದತೆ, ಆಕರ್ಷಕ ನಿಲುವು, ಜನಪದೀಯ ಶೈಲಿಯ ಗಾಯನ ಒಂದೆಡೆಯಾದರೆ, ಮುಂದೆ ಪ್ರಬುದ್ಧ ಕಾಳಿದಾಸನಾಗಿ ಅವರು ಕಾಣುವ […]

Advertisement

Wordpress Social Share Plugin powered by Ultimatelysocial