ಹೃದಯದ ಆರೋಗ್ಯ ಸೂತ್ರ

ಹೃದಯದ ಆರೋಗ್ಯ ಸೂತ್ರ

ಚೇತನಾಸ್ಥಾನ, ಚಿಂತನಾಕೇಂದ್ರ, ಶಬ್ದ-ಸ್ಪರ್ಶ-ರೂಪ-ರಸ-ಗಂಧದಂತಹ ಇಂದ್ರಿಯವಿಷಯಗಳ ಗ್ರಾಹಕ, ರಸವಹಸ್ರೋತಸ್ಸು, ಪ್ರಾಣವಹಸ್ರೋತಸ್ಸುಗಳ ಮೂಲ; ದಶಮಹಾಧಮನಿಗಳ ಆಶ್ರಯ; ಅಷ್ಟಬಿಂದುರೂಪದ ‘ಓಜಸ್ಸಿ’ನ ನೆಲೆ; ತ್ರಿಮರ್ಮಗಳಲ್ಲಿ ಒಂದು. ಕಟ್ಟಡವನ್ನು ಸ್ಥಿರವಾಗಿಡುವ ಕಂಬ-ಜಂತಿಗಳಂತೆ, ಚಕ್ರದ ನಾಭಿಯಂತೆ ಹೃದಯವೇ ‘ಷಡಂಗ’ಗಳನ್ನು ಜೋಡಿಸಿಡುವ-ಆಧರಿಸುವ ‘ಮರ್ಮ’.

ಆಹಾರ

ಘನ-ದ್ರವಾಹಾರ ಸಾರವೆಲ್ಲಾ ಹೃದಯದ ಮೂಲಕ ಇತರ ಸ್ರೋತಸ್ಸು-ಧಾತುಗಳ ಪುಷ್ಟಿಗಾಗಿ ಅಭಿವಹನಗೊಳ್ಳುತ್ತದೆ. ಆಹಾರಸೇವನೆಯ ಕಾಲ-ವಿಧಾನವನ್ನಾಧರಿಸಿ ಹೃದಯದ ಪೋಷಣೆಯಾಗುತ್ತದೆ.

ಹಸಿವೆ/ಬಾಯಾರಿಕೆಯಾದಾಗ ಏನನ್ನೂ ಸೇವಿಸದೆ ವ್ಯಾಯಾಮ, ಆಯಾಸವಾಗುವಷ್ಟು ಕೆಲಸಮಾಡುವುದು ಹೃದಯವನ್ನು ಶೋಷಿಸುತ್ತದೆ. ದೇಹಬಯಸಿದ್ದು ಆಹಾರವಾದ್ದರಿಂದ ಜೈವಿಕಕರೆಯನ್ನು ಗೌರವಿಸುವುದೇ ಆರೋಗ್ಯಕ್ಕೆ ರಹದಾರಿ.

ಹಸಿವೆ/ಬಾಯಾರಿಕೆಯಿರದಿದ್ದರೂ ದ್ರವ-ಘನಾಹಾರ ಸೇವಿಸುವುದು ಹೃದಯಮಿಡಿತವನ್ನು ಏರುಪೇರುಗೊಳಿಸುತ್ತದೆ. ಇದು ಕಫಜಹೃದ್ರೋಗಕ್ಕೆ ಕಾರಣ. ಪದೇಪದೇ ತಿಂದರೆ ಹೃದಯಗತಿ ಕೆಡುತ್ತದೆ. ನಿಗದಿತ ಎರಡು/ಮೂರು ಆಹಾರಕಾಲದಲ್ಲಿ ಮಾತ್ರ ಸೇವಿಸುವುದು ಕ್ಷೇಮ.

ಗಡಿಬಿಡಿಯಿಂದ ದ್ರವ-ಘನಾಹಾರದ ಪ್ರಮಾಣ ತಪ್ಪುತ್ತದೆ. ಇದು ಅವರೋಧಾತ್ಮಕ ಹೃದ್ರೋಗಕ್ಕೆ ಕಾರಣವಾಗಬಹುದು. ಸಾವಧಾನವಾಗಿ ಸಾವಕಾಶವಾಗಿ ಸೇವಿಸುವುದು ಹಿತಕರ.

Please follow and like us:

Leave a Reply

Your email address will not be published. Required fields are marked *

Next Post

ಬೆಳಗಿನ ಆಯಾಸಕ್ಕೆ ಮನೆ ʼಮದ್ದುʼ

Fri Dec 17 , 2021
ಬೆಳಿಗ್ಗೆ ಎದ್ದ ತಕ್ಷಣ ಆಯಾಸ, ಆಲಸ್ಯ ಎನ್ನುವವರು ಅನೇಕ ಮಂದಿ. ಇದಕ್ಕೆ ಅನೇಕ ಕಾರಣಗಳಿವೆ. ದೀರ್ಘ ಕಾಲದ ಅಸ್ವಸ್ಥತೆ, ನಿದ್ರಾಹೀನತೆ, ಕಳಪೆ ಆಹಾರ, ಥೈರಾಯ್ಡ್, ಅನಿಯಮಿತ ದಿನಚರಿಗಳು, ದೇಹದಲ್ಲಿ ಅತಿಯಾದ ಆಮ್ಲ ಇರುವುದು ಮುಖ್ಯ ಕಾರಣ. ಬಿಡುವಿಲ್ಲದ ಕೆಲಸದಿಂದಾಗಿ ಎಲ್ಲರಿಗೂ ಸುಸ್ತಾಗೋದು ಕಾಮನ್. ಆದ್ರೆ ರಾತ್ರಿ ಸುಖಕರ ನಿದ್ದೆ ಬಂದಿದ್ದರೂ ಕೆಲವೊಬ್ಬರಿಗೆ ಬೆಳಿಗ್ಗೆ ಆಯಾಸ ಕಾಣಿಸಿಕೊಳ್ಳುತ್ತದೆ. ಅಂತವರು ತಮ್ಮ ದಿನಚರಿಯಲ್ಲಿ ಹಾಗೂ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಲ್ಲಿ ಈ ಸಮಸ್ಯೆಯಿಂದ […]

Advertisement

Wordpress Social Share Plugin powered by Ultimatelysocial