ಗಿನ್ನಿಸ್ ದಾಖಲೆ ನಿರ್ಮಿಸಿದ ಹುಬ್ಬಳ್ಳಿಯ ರೈಲು ನಿಲ್ದಾಣ!

ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯದ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಈಗ ಮತ್ತೊಂದು ಗೌರವದ ಗರಿಯನ್ನು ಮುಡಿಗೇರಿಸಿಕೊಂಡಿದೆ. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ (ಎಸ್ ಎಸ್ಎಸ್) ರೈಲು ನಿಲ್ದಾಣದಲ್ಲಿರುವ 1,507 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.

ಹೌದು.. ವಿಶ್ವದಲ್ಲಿಯೇ ಅತಿ ಉದ್ದನೆಯ ರೈಲ್ವೆ ಫ್ಲಾಟ್‌ಫಾರ್ಮ್ ಇದಾಗಿದೆ. ಹುಬ್ಬಳ್ಳಿಯ ಎಸ್ ಎಸ್‌ಎಸ್ ರೈಲು ನಿಲ್ದಾಣದಲ್ಲಿರುವ ಪ್ಲಾಟ್ ಫಾರ್ಮ್ ವಿಶ್ವದಲ್ಲಿಯೇ ಅತಿ ಉದ್ದನೆಯದ್ದು, ಎಂಬುದನ್ನು ಗಿನ್ನಿಸ್ ರೆಕಾರ್ಡ್ಸ್‌ನಲ್ಲಿ ಗುರುತಿಸಿದೆ.

ಮಾ. 12ರಂದು ಧಾರವಾಡದಲ್ಲಿ ಏರ್ಪಾಟಾಗಿದ್ದ ಐಐಟಿ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಇಲೆಕ್ಟಿಕ್ ಇಂಜಿನ್ ಅಳವಡಿಸಿದ್ದ ಹುಬ್ಬಳ್ಳಿ ದಾದರ ಎಕ್ಸ್‌ಪ್ರೆಸ್ ಮತ್ತು ಬೆಳಗಾವಿ- ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು. ಆ ಮೂಲಕ ವಿಶ್ವದ ಅತಿ ಉದ್ದನೆಯ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಲೋಕಾರ್ಪಣೆಗೊಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಗ ಚೈತನ್ಯ ಒಳ್ಳೆ ಗಂಡ ಅಲ್ಲ, ಸಮಂತಾಗೆ ಟಾರ್ಚರ್ ಕೊಟ್ಟ, ಅಬಾರ್ಷನ್ ಆಯ್ತು!

Tue Mar 14 , 2023
ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಸಮಂತಾಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಅಂದಿನಿಂದ ಸಮಂತಾಗೆ ಸಂಬಂಧಿಸಿದ ಅನೇಕ ಸುದ್ದಿಗಳು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಮಂತಾ-ನಾಗ ಚೈತನ್ಯ ವಿಚ್ಛೇದನ ವಿಚಾರವಾಗಿ ಸಿನಿಮಾ ವಿಮರ್ಶಕರೊಬ್ಬರು ಮಾಡಿರುವ ಟ್ವೀಟ್ ಇದೀಗ ಭಾರೀ ವೈರಲ್ ಆಗ್ತಿದೆ. ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದರು. ಇಬ್ಬರೂ ಕುಟುಂಬ […]

Advertisement

Wordpress Social Share Plugin powered by Ultimatelysocial