ನಾಗ ಚೈತನ್ಯ ಒಳ್ಳೆ ಗಂಡ ಅಲ್ಲ, ಸಮಂತಾಗೆ ಟಾರ್ಚರ್ ಕೊಟ್ಟ, ಅಬಾರ್ಷನ್ ಆಯ್ತು!

ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಸಮಂತಾಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಅಂದಿನಿಂದ ಸಮಂತಾಗೆ ಸಂಬಂಧಿಸಿದ ಅನೇಕ ಸುದ್ದಿಗಳು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಮಂತಾ-ನಾಗ ಚೈತನ್ಯ ವಿಚ್ಛೇದನ ವಿಚಾರವಾಗಿ ಸಿನಿಮಾ ವಿಮರ್ಶಕರೊಬ್ಬರು ಮಾಡಿರುವ ಟ್ವೀಟ್ ಇದೀಗ ಭಾರೀ ವೈರಲ್ ಆಗ್ತಿದೆ.

ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದರು. ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರಿಶ್ಚಿಯನ್ ರೀತಿಯಲ್ಲಿ ವಿವಾಹವಾದರು.

ಮದುವೆಯ ನಂತರ, ಚೈ ಸ್ಯಾಮ್ ಸಂತೋಷದ ಕ್ಷಣಗಳನ್ನು ಕಳೆಯುತ್ತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ತಿದ್ರು. 4 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. ಬಳಿಕ ದಿಢೀರ್ ಅಂತ ಸೋಶಿಯಲ್ ಮೀಡಿಯಾ ಮೂಲಕ ಇಬ್ಬರೂ ವಿಚ್ಛೇದನ ನೀಡಿದ್ದಾರೆ.

ಚೈ ಸಾಮ್ ಜೋಡಿಯು ಟಾಲಿವುಡ್​ನ ಮೋಸ್ಟ್ ಬ್ಯೂಟಿಫುಲ್ ಮತ್ತು ರೊಮ್ಯಾಂಟಿಕ್ ಜೋಡಿ ಎಂದು ಹೆಸರಾಗಿತ್ತು. ಮದುವೆಯಾದ ನಂತರವೂ ಇಬ್ಬರೂ ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಅಕ್ಟೋಬರ್ 2, 2021 ರಂದು ಚೈ ಸ್ಯಾಮ್ ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸಿದರು.

ಈ ಜೋಡಿ ವಿಚ್ಛೇದನ ಪಡೆದ ಬಳಿಕ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಮಂತಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸ್ಯಾಮ್ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ತೆರೆಗೆ ಬರಲು ರೆಡಿಯಾಗಿದೆ.

ಆದರೆ ನಾಗ ಚೈತನ್ಯ-ಸಮಂತಾ ಬ್ರೇಕ್ ಅಪ್ ಆಗಿದ್ದು ಯಾಕೆ? ಇದರ ಹಿಂದಿನ ಕಾರಣಗಳೇನು ಎಂದು ನೆಟ್ಟಿಗರು ಹುಡುಕುತ್ತಲೇ ಇದ್ದಾರೆ. ಈ ಸನ್ನಿವೇಶಗಳ ನಡುವೆ, ಸೆನ್ಸಾರ್ ಸದಸ್ಯ ಮತ್ತು ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಅವರು ಇತ್ತೀಚೆಗೆ ಮಾಡಿದ ಟ್ವೀಟ್ ಒಂದು ಇದೀಗ ಸಂಚಲನ ಮೂಡಿಸುತ್ತಿದೆ.

ನಾಗ ಚೈತನ್ಯ ಕಿರುಕುಳದಿಂದಲೇ ಸಮಂತಾ ಆತನೊಂದಿಗಿನ ಸಂಬಂಧವನ್ನು ಕಳೆದುಕೊಂಡಿದ್ದಾರೆ ಎಂದು ಉಮೈರ್ ಸಂಧು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ನಾಗ ಚೈತನ್ಯ ಒಬ್ಬ ಕೆಟ್ಟ ಗಂಡ. ಅವರು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟಿದ್ದಾನೆ. ನಾನು ಗರ್ಭಿಣಿಯಾಗಿದ್ದೆ ಬಳಿಕ ನಾನು ಗರ್ಭಪಾತ ಮಾಡಿಸಬೇಕಾಗಿ ಬಂತು. ಆತನ ಕಿರುಕುಳವನ್ನು ಸಹಿಸಲಾಗುತ್ತಿಲ್ಲ ಎಂದು ಸಮಂತಾ ಹೇಳಿದ್ದಾರೆ ಎಂದು ಉಮರ್ ಸಂಧು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಈ ಒಂದು ಹಣ್ಣಿನ ಬೀಜ ಸಾಕು!

Tue Mar 14 , 2023
ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದ್ದು ಅದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಉತ್ಪಾದಿಸಲು ಅಥವಾ ಬಳಸಲು ಸಾಧ್ಯವಾಗದಿದ್ದಾಗ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಮಧುಮೇಹಕ್ಕೆ ಹಲವಾರು ಔಷಧಿಗಳು ಮತ್ತು ಚಿಕಿತ್ಸೆಯ ಆಯ್ಕೆಗಳಿದ್ದರೂ, ಅನೇಕ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೈಸರ್ಗಿಕ ಪರಿಹಾರಗಳನ್ನು ಬಳಸಲು ಬಯಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗಿರುವ ಅಂತಹ ನೈಸರ್ಗಿಕ ಪರಿಹಾರವೆಂದರೆ ನೇರಳೆ ಹಣ್ಣಿನ ಬೀಜಗಳು. ನೇರಳೆ ಹಣ್ಣಿನ […]

Advertisement

Wordpress Social Share Plugin powered by Ultimatelysocial