ವರ್ಷಕ್ಕೆ ಒಂದು ಡೋಸ್ ಕೊರೊನಾ ಲಸಿಕೆ ನೀಡುವ ಬಗ್ಗೆ ಚರ್ಚೆ :

ಬೆಂಗಳೂರು: ಜೂನ್ ಅಂತ್ಯದಲ್ಲಿ ಕೋವಿಡ್ ಹೆಚ್ಚಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ ಅಕ್ಟೋಬರ್ ವರೆಗೂ ಇದೇ ಪರಿಸ್ಥಿತಿ ಇರಬಹುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಐಟಿ ಖಾನ್ಪುರ್ ಅವರು ಹೇಳಿರುವಂತ ಇದುವರೆಗಿನ ಎಲ್ಲಾ ಮಾಹಿತಿ ನಿಜವಾಗಿದೆ.

ಈಗ ನಾಲ್ಕನೇ ಅಲೆಯ ಬಗ್ಗೆಯೂ ಮಾಹಿತಿ ನೀಡಿದ್ದೂ, ಜೂನ್ ನಿಂದ 4ನೇ ಅಲೆ ಆರಂಭಗೊಂಡು, ಅಕ್ಟೋಬರ್ ವರೆಗೆ ಇರಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ರಾಜ್ಯದ ಜನತೆಗೆ ಮನವಿ ಮಾಡಿದರು.

ದಿನದಿಂದ ದಿನಕ್ಕೆ ಕೋವಿಡ್ ಹೆಚ್ಚಾಗುತ್ತಿದೆ. ಈ ಸಂಬಂಧ ಮೋದಿ ಎಲ್ಲಾ ರಾಜ್ಯದ ಸಿಎಂಗಳ ಜೊತೆಗೆ ಸಭೆ ಕರೆದಿದ್ದಾರೆ. ಎಲ್ಲಾ ರಾಜ್ಯದ ಸ್ಥಿತಿ ಗತಿ ಅವಲೋಕನದ ಮಾಡಲಿದ್ದಾರೆ. ಸಿದ್ದತೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ಇದೆ. ಬರುವಂತಹ ದಿನಗಳಲ್ಲಿ ವರ್ಷಕ್ಕೆ ಒಂದು ಡೋಸ್ ಲಸಿಕೆ ನೀಡಬೇಕೆ ಎಂಬ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

II PUC ಪರೀಕ್ಷೆಯ ಅರ್ಥಶಾಸ್ತ್ರದ ಪತ್ರಿಕೆಯನ್ನು 28,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಟ್ಟುಬಿಟ್ಟಿದ್ದಾರೆ!

Tue Apr 26 , 2022
ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಸೋಮವಾರ ದಾಖಲೆ ಗೈರು ಹಾಜರಾಗಿದ್ದು,ಒಟ್ಟು 28,512 ವಿದ್ಯಾರ್ಥಿಗಳು ಅರ್ಥಶಾಸ್ತ್ರ ಪತ್ರಿಕೆಯನ್ನು ಬಿಟ್ಟು ಹೋಗಿದ್ದಾರೆ. ಫ್ರೆಶರ್‌ಗಳು ಗೈರುಹಾಜರಾದವರ ದೊಡ್ಡ ಗುಂಪನ್ನು ರಚಿಸಿದರು, ಅವರಲ್ಲಿ 20,147 ಮಂದಿ ಪರೀಕ್ಷೆಗೆ ಹಾಜರಾಗಲು ವಿಫಲರಾಗಿದ್ದಾರೆ. 5,959 ಖಾಸಗಿ ಅಭ್ಯರ್ಥಿಗಳು ಮತ್ತು 2,019 ಪುನರಾವರ್ತಿತರು ಸಹ ಪರೀಕ್ಷೆಯನ್ನು ತೆಗೆದುಕೊಳ್ಳಲಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಈ ವರ್ಷ ಎಕನಾಮಿಕ್ಸ್ ಪೇಪರ್‌ಗೆ ಹೆಚ್ಚಿನ ಸಂಖ್ಯೆಯ ನೋಂದಣಿಗಳು ದಾಖಲೆಗೆ ಗೈರುಹಾಜರಾಗಲು ಕಾರಣವೆಂದು […]

Advertisement

Wordpress Social Share Plugin powered by Ultimatelysocial