ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ, ಕಾಂಗ್ರೆಸ್ ನಿಂದ ಧರಣಿ, ಪ್ರತಿಭಟನೆ ಮುಂದುವರೆದಿದೆ.!

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಈಶ್ವರಪ್ಪ  ರಾಜೀನಾಮೆಗೆ ಒತ್ತಾಯಿಸಿ, ಕಾಂಗ್ರೆಸ್ ನಿಂದ ಧರಣಿ, ಪ್ರತಿಭಟನೆ ಮುಂದುವರೆದಿದೆ. ಈ ಕಾರಣದಿಂದ ಸಿಎಂ ಬಸವರಾಜ ಬೊಮ್ಮಾಯಿಯವರು   ಒತ್ತಡಕ್ಕೂ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ಹಿನ್ನಲೆಯಲ್ಲಿ ಇವರ ಮುಖದಲ್ಲಿ ಲವಲವಿಕೆಯೇ ಕಾಣುತ್ತಿದ್ದ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ಇನ್ನೂ ಇಂದು ವಿಧಾನಸೌಧದಲ್ಲಿ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಒತ್ತಡಕ್ಕೆ ಸಿಲುಕಿರುವಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಸಿಎಂ ಕೊಠಡಿಯಲ್ಲಿ ಏಕಾಂಕಿಯಾಗಿದ್ದದ್ದು ಕಂಡು ಬಂದಿತು. ಈ ವಿಚಾರವಾಗಿಯೇ ಚರ್ಚಿಸೋದಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ರನ್ನ ಕರೆಸಿಕೊಂಡು ಚರ್ಚಿಸಿದರು.

ಇದಾದ ಬಳಿಕ ಸಿಎಸ್ ರವಿಕುಮಾರ್, ಮಂಜುನಾಥ್ ಪ್ರಸಾದ್ ತೆರಳಿದ ಬಳಿಕ ಏಕಾಂಗಿಯಾಗಿ ತಮ್ಮ ಕೊಠಡಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇದ್ದದ್ದು ಕಂಡು ಬಂತು. ಈ ವೇಳೆ ಸಿಎಂ ಕೊಠಡಿಗೆ ಆಗಮಿಸಿದ ಪರಿಷತ್ ಸದಸ್ಯ ನಾರಾಯಣಸ್ವಾಮಿ ಹಾಗೂ ಜೆಡಿಎಸ್ ನ ರಮೇಶ್ ಗೌಡ, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಆಗಮಿಸಿದ್ದು ಕಂಡು ಬಂತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

1хбет зеркало рабочее Актуальное на сегодня 1xbet зеркал

Thu Apr 14 , 2022
1хбет зеркало рабочее Актуальное на сегодня 1xbet зеркало 1XBET зеркало рабочее 1ХБЕТ официальный сайт Вход Content 🤩 Виды спорта для ставок в букмекерской конторе 1xBet Bet зеркало рабочее на сегодня Безопасно ли использовать зеркало официального сайта 1xbet? Регистрация нового счета 1xbet Букмекеры Как скачать приложение для Iphone iOS Как часто […]

Advertisement

Wordpress Social Share Plugin powered by Ultimatelysocial