‘ಕಾಶ್ಮೀರ ಫೈಲ್ಸ್’ಗೆ ಟಿಕೆಟ್ ವಿತರಿಸಿದಂತೆ ಪೆಟ್ರೋಲ್, ಡೀಸೆಲ್ ಗೆ ಬಿಜೆಪಿ ಕೂಪನ್ ವಿತರಿಸಲಿ: ರಾಜಸ್ಥಾನ ಸಚಿವ

ಜೈಪುರ: ಕಳೆದ ಒಂದು ವಾರದಿಂದ ಪೆಟ್ರೋಲ್ ಹಾಗೂ ಡೀಸೆಲ್ ಎರಡರ ಬೆಲೆ ಲೀಟರ್‌ಗೆ ಸುಮಾರು 5 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಕೇಂದ್ರದ ಆಡಳಿತಾರೂಢ ಬಿಜೆಪಿಯ ಮಂತ್ರಿಗಳು ”ಕಾಶ್ಮೀರ ಫೈಲ್ಸ್’ ಚಲನಚಿತ್ರದ ಟಿಕೆಟ್‌ಗಳನ್ನು ವಿತರಿಸಿದ ರೀತಿಯಲ್ಲಿ ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಗಾಗಿ ಕೂಪನ್‌ಗಳನ್ನು ವಿತರಿಸಬೇಕು ಎಂದು ರಾಜಸ್ಥಾನದ ಸಚಿವ ಪ್ರತಾಪ್ ಖಚರಿಯಾವಾಸ್ ಸೋಮವಾರ ಸಲಹೆ ನೀಡಿದ್ದಾರೆ.ಚುನಾವಣೆಯ ನಂತರ ಬಿಜೆಪಿಯು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಬಿಜೆಪಿ ನಾಯಕರು ರಾವಣನ ನೀತಿಯನ್ನು ಪಾಲಿಸುತ್ತಿದ್ದಾರೆಯೇ ಹೊರತು ಭಗವಾನ್ ರಾಮನ ನೀತಿಯನ್ನಲ್ಲ. ಬಿಜೆಪಿ ನಾಯಕರು ‘ರಾವಣ ಭಕ್ತರು’ ‘ರಾಮಭಕ್ತರು’ ಅಲ್ಲ. ಬಿಜೆಪಿಯ ಕೇಂದ್ರದ ಮಂತ್ರಿಗಳು ನಿನ್ನೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಟಿಕೆಟ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ,. ಅದೇ ರೀತಿ ಪೆಟ್ರೋಲ್, ಡೀಸೆಲ್‌ ಹಾಗೂ ಎಲ್ ಪಿಜಿಗೂ ಕೂಪನ್‌ಗಳನ್ನು ವಿತರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಪ್ರತಿದಿನ ಪರಿಷ್ಕರಿಸಲ್ಪಡುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕಾರಣಕ್ಕೆ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಬದಲಾಗದೆ ಉಳಿದಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕಳೆದ ಮಂಗಳವಾರದಿಂದ ಏಳು ಬಾರಿ ಏರಿಕೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಕಾಂಗ್ರೆಸ್‌ ಪ್ರಬಲವಾಗಲೆಂಬುದು ನನ್ನ ಹೃದಯಪೂರ್ವಕ ಆಶಯ: ನಿತಿನ್ ಗಡ್ಕರಿ

Tue Mar 29 , 2022
ಪುಣೆ: ‘ಪ್ರಜಾಪ್ರಭುತ್ವ ಬಲಗೊಳ್ಳಲು ಪ್ರಬಲ ವಿರೋಧಪಕ್ಷ ಅಗತ್ಯ. ಕಾಂಗ್ರೆಸ್‌ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಆ ನಿಟ್ಟಿನಲ್ಲಿ ಪ್ರಬಲವಾಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೇನೆ’ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿದರು.₹ 2,344 ಕೋಟಿ ವೆಚ್ಚದ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ಎಂಬುದು ಎರಡು ಚಕ್ರಗಳ ಮೇಲೆ ಸಾಗಲಿದೆ. ಒಂದು ಆಡಳಿತ ಪಕ್ಷ, ಮತ್ತೊಂದು ವಿರೋಧಪಕ್ಷ. ಇದೇ ಕಾರಣದಿಂದ ಕಾಂಗ್ರೆಸ್‌ […]

Advertisement

Wordpress Social Share Plugin powered by Ultimatelysocial