2022ರಲ್ಲಿ ಮಾರುತಿ ಸುಜುಕಿ ಬಲೆನೊ ಕಾರು;

ಮಾರುತಿ ಸುಜುಕಿ ಬಲೆನೊ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. 2021ರಲ್ಲಿ ಇದು ತನ್ನ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಮತ್ತು ಒಟ್ಟಾರೆ ನಮ್ಮ ದೇಶದಲ್ಲಿ ಮೂರನೇ ಅತಿ ಹೆಚ್ಚು ಮಾರಾಟವಾದ ಕಾರ್ ಆಗಿದೆ.

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಳೆದ ವರ್ಷ ಬಲೆನೊದ ಒಟ್ಟು 1,72,237 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ, ಇದು ಅತ್ಯಂತ ಪ್ರಭಾವಶಾಲಿ ಮಾರಾಟ ಸಂಖ್ಯೆಯಾಗಿದೆ.

ಇದರ ಒಂದು ವರ್ಷದ ಹಿಂದಿನ ಮಾರಾಟದ ಅಂಕಿ ಅಂಶಕ್ಕೆ ಹೋಲಿಸಿದರೆ, 2020 ರಲ್ಲಿ ಬಲೆನೊದ 1,53,986 ಯುನಿಟ್‌ಗಳು ಮಾರಾಟವಾಗಿತ್ತು. ಮಾರುತಿ ಬಲೆನೊ ವರ್ಷದಿಂದ ವರ್ಷಕ್ಕೆ (YoY) ಆಧಾರದ ಮೇಲೆ ಶೇಕಡಾ 11.85 ರಷ್ಟು ಮಾರಾಟದ ಬೆಳವಣಿಗೆಯನ್ನು ಕಂಡಿದೆ. ಹ್ಯಾಚ್‌ಬ್ಯಾಕ್‌ನ ಮಾರುಕಟ್ಟೆ ಪಾಲು ಬಹುತೇಕ ಸ್ಥಿರವಾಗಿದೆ, ಸುಮಾರು ಶೇ.6 ರಷ್ಟು ಇದೆ.

ಬಲೆನೊ ಹ್ಯಾಚ್‌ಬ್ಯಾಕ್‌ ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಕಂಪನಿಯು 2015ರಲ್ಲಿ ಮೊದಲ ಬಾರಿಗೆ ಬಲೆನೊ ಕಾರನ್ನು ಬಿಡುಗಡೆಗೊಳಿಸಿತ್ತು. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ.

ಈ ಮಾರುತಿ ಬಲೆನೊ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 82 ಬಿಎಚ್‌ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಈ ಜನಪ್ರಿಯ ಬಲೆನೊ ಕಾರು ಮಾರಾಟದಲ್ಲಿ 1 ಮಿಲಿಯನ್ ಅಥವಾ 10 ಲಕ್ಷ ಯುನಿಟ್‌ಗಳನ್ನು ದಾಟಿ ಕಳೆದ ವರ್ಷದ ಕೊನೆಯಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿತು. ಮಾರುತಿ ಸುಜುಕಿಯು 2020ರ ಮೇ ಮತ್ತು 2021ರ ಅಕ್ಟೋಬರ್ ತಿಂಗಳುಗಳ ನಡುವೆ 2.5 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ 2015 ರಲ್ಲಿ ಬಿಡುಗಡೆಯಾದಗಿನಿಂದ ತಯಾರಕರು ಈ ಹ್ಯಾಚ್‌ಬ್ಯಾಕ್‌ನಲ್ಲಿ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುತ್ತಾ ಬಂದಿದೆ.

ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡ ಮೊದಲ ಹ್ಯಾಚ್‌ಬ್ಯಾಕ್ ಈ ಬಲೆನೊ ಮಾದರಿಯಾಗಿದೆ. ಈ ಸಂದರ್ಭದಲ್ಲಿ ಬಲೆನೊ ಕಾರಿನಲ್ಲಿ ಕೆಲವು ಕಾಸ್ಮೆಟಿಕ್ ಬದಲಾವೆಣೆಗಳನ್ನು ಮಾಡಲಾಗಿತ್ತು. ಮೊದಲು ಮಾರುತಿ ಬಲೆನೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿತ್ತು. ಆದರೆ ಬಿಎಸ್ 6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿತ್ತು.

ಮಾರುತಿ ಸುಜುಕಿ ಕಂಪನಿಯು ಎಲ್ಲಾ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಈ ಮಾರುತಿ ಬಲೆನೊ ಕಾರು ಸಾಕಷ್ಟು ಪ್ರಮಾಣದ ಆಂತರಿಕ ಜಾಗವನ್ನು ನೀಡುತ್ತದೆ. ಇದು ಪ್ರಸ್ತುತ ಮಾರುತಿ ಸುಜುಕಿ ತಯಾರಿಸುವ ಅತಿದೊಡ್ಡ ಹ್ಯಾಚ್‌ಬ್ಯಾಕ್ ಆಗಿದೆ. ಇದು 2,520 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ, ಇದು ಪ್ರಯಾಣಿಕರಿಗೆ ಉತ್ತಮ ಪ್ರಮಾಣದ ಕ್ಯಾಬಿನ್ ಜಾಗವನ್ನು ಕೂಡ ಹೊಂದಿದೆ.

ಇದೀಗ ಮಾರುತಿ ಸುಜುಕಿ ಕಂಪನಿಯು ಈ ಬಲೆನೊ ಕಾರನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಮಾರುತಿ ಬಲೆನೊ ಕಾರನ್ನು ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಗಳಿದೆ. ಮಾರುತಿ ಸುಜುಕಿ ಕಂಪನಿಯು ತನ್ನ ಗುಜರಾತ್ ಮೂಲದ ಸ್ಥಾವರದಲ್ಲಿ ಹೊಸ 2022ರ ಮಾರುತಿ ಬಲೆನೊ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ,

ಈ ಹ್ಯಾಚ್‌ಬ್ಯಾಕ್‌ನ ಮೊದಲ ಯುನಿಟ್ ಅನ್ನು ಇದೇ ತಿಂಗಳ 24 ರಂದು ಹೊರತರಲಾಯಿತು. ಇದರ ಚಿತ್ರಗಳು ಈಗಾಗಲೇ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿವೆ.. ಮಾರುತಿಯ ನೆಕ್ಸಾ ಡೀಲರ್‌ಶಿಪ್ ಶ್ರೇಣಿಯ ಮೂಲಕ ಮಾರಾಟ ಮಾಡಲು, ಹೊಸ ಬಲೆನೊ ಗಮನಾರ್ಹವಾಗಿ ಪರಿಷ್ಕೃತ ಮುಂಭಾಗದ ವಿನ್ಯಾಸದೊಂದಿಗೆ ಬರುತ್ತದೆ. ಹ್ಯಾಚ್‌ಬ್ಯಾಕ್‌ನ ಬಾಡಿ ಪ್ಯಾನೆಲ್‌ಗಳನ್ನು ಮರು-ವಿನ್ಯಾಸಗೊಳಿಸಲಾಗಿದೆ ಮತ್ತು ಹೊಸ ಮಾದರಿಯು ಪ್ರಸ್ತುತ ಕಾರ್‌ಗಿಂತ ಅಗಲವಾಗಿ ಮತ್ತು ದಪ್ಪವಾಗಿ ಕಾಣುತ್ತದೆ.

ಈ 2022ರ ಮಾರುತಿ ಬಲೆನೊ ಹೊಸ ದೊಡ್ಡ ಗ್ರಿಲ್ ಅನ್ನು ಪಡೆಯುತ್ತದೆ, ಎಲ್-ಆಕಾರದ ಸುತ್ತುವ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆದಿದೆ. ಹೆಡ್‌ಲ್ಯಾಂಪ್ ಯುನಿಟ್ ಡಿಆರ್‌ಎಲ್‌ಗಳು (ಡೇಟೈಮ್ ರನ್ನಿಂಗ್ ಲೈಟ್‌ಗಳು) ಮತ್ತು ಪ್ರೊಜೆಕ್ಟರ್ ಸೆಟಪ್ ಅನ್ನು ಹೊಂದಿರುತ್ತದೆ. ಬಾನೆಟ್ ವಿನ್ಯಾಸವನ್ನು ಸಹ ಬದಲಾಯಿಸಲಾಗಿದೆ. ಹೊಸ ಬಲೆನೊ ಸೈಡ್ ಪ್ರೊಫೈಲ್ ಹೊರಹೋಗುವ ಮಾದರಿಗೆ ಹೋಲುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RANGE ROVER:ಹೊಸ ರೇಂಜ್ ರೋವರ್‌ ಬಿಡುಗಡೆ;

Sun Jan 30 , 2022
ವಿಶೇಷ ವಿನ್ಯಾಸದ ಥೀಮ್‌ಗಳು, ವಿವರಗಳು ಮತ್ತು ವಿಶೇಷ ವಾಹನ ಕಾರ್ಯಾಚರಣೆಗಳಿರುವ ಹೊಸ ರೇಂಜ್ ರೋವರ್ ಎಸ್‌ವಿಗಾಗಿ ಲ್ಯಾಂಡ್ ರೋವರ್‌ ಬುಕಿಂಗ್ ಗವಾಕ್ಷಿ ತೆರೆದಿದೆ. ಇದೇ ಮೊದಲ ಬಾರಿಗೆ ಐದು-ಆಸನದ ಎಲ್‌ಡಬ್ಲ್ಯೂಬಿ ಕಾನ್ಫಿಗರೇಶನ್ ಸೇರಿದಂತೆ ಸ್ಟ್ಯಾಂಡರ್ಡ್ ಮತ್ತು ಲಾಂಗ್ ವೀಲ್‌ಬೇಸ್ ಬಾಡಿ ವಿನ್ಯಾಸಗಳಲ್ಲಿ ಈ ವಾಹನ ಲಭ್ಯವಿರುತ್ತದೆ. ಎಲ್‌ಡಬ್ಲ್ಯೂಬಿ ಗ್ರಾಹಕರು ನಾಲ್ಕು-ಆಸನಗಳ ಎಸ್‌ವಿ ಸಿಗ್ನೇಚರ್ ಸೂಟ್ ಅನ್ನು ನಿರ್ದಿಷ್ಟಪಡಿಸುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ. ಎಲೆಕ್ಟ್ರಿಕ್ ಆಗಿ ನಿಯೋಜಿಸಬಹುದಾದ ಕ್ಲಬ್ ಟೇಬಲ್ ಮತ್ತು […]

Advertisement

Wordpress Social Share Plugin powered by Ultimatelysocial