ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಟ್ರೋಲಿಂಗ್ ಪಡೆದ ನಟಿ ಸ್ವರಾ ಭಾಸ್ಕರ್!

 

 

ಮುಂಬಯಿ: ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಟ್ರೋಲಿಂಗ್ ಪಡೆದ ನಟಿ ಸ್ವರಾ ಭಾಸ್ಕರ್. ಸ್ವರಾ ಏನಾದರೂ ಪೋಸ್ಟ್ ಮಾಡಿದರೆ ಟ್ರೋಲ್ ಗಳ ಸುರಿಮಳೆಯಾಗುತ್ತದೆ.ಈಗ ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿ ಮತ್ತೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.’ಮಹಾಭಾರತದಲ್ಲಿ ದ್ರೌಪದಿಯ ಬಟ್ಟೆಗಳನ್ನು ಬಲವಂತವಾಗಿ ತೆಗೆಸಲಾಯಿತು, ವಿಧಾನಸಭೆಯಲ್ಲಿ ಕುಳಿತಿರುವ ಜವಾಬ್ದಾರಿಯುತ, ಶಕ್ತಿಯುತ, ಕಾನೂನು ರೂಪಿಸುವವರು ಇಂದು ಅದೇ ರೀತಿ ನೆನಪಿಸಿಕೊಂಡಿದ್ದಾರೆ. ಎಂದು ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿದ್ದರು.ಸ್ವರಾ ಅವರ ಟ್ವೀಟ್‌ ಗೆ ಟೇಕೆಗಳ ಮಹಾಪೂರವೇ ಹರಿದು ಬಂದಿದ್ದು, ಕೆಲವರು ದ್ರೌಪದಿಯ ವಸ್ತ್ರಗಳನ್ನು ಬಲವಂತವಾಗಿ ತೆಗೆದುಹಾಕಲಾಯಿತು ಹೌದು ಆದರೆ ನಿಮ್ಮ ಬಟ್ಟೆಗಳನ್ನು ನೀವೇ ತೆಗೆದಿದ್ದೀರಾ? ನನಗೆ ಇಂದು ಮಿಯಾ ಖಲೀಫಾಳ(ನೀಲಿ ಚಿತ್ರ ನಟಿ) ಭಾರತೀಯ ನೋಟ ನೆನಪಾಯಿತು ಎಂದು ಬರೆದಿದ್ದಾರೆ.’ನೀವು ಹಿಂದೂ, ಮತ್ತು ನಿಮ್ಮ ಬಗ್ಗೆ ನಮಗೆ ನಾಚಿಕೆಯಾಗುತ್ತಿದೆ’ ಎಂದು ಮತ್ತೊಬ್ಬ ವ್ಯಕ್ತಿ ಬರೆದಿದ್ದಾರೆ.’ ಟ್ವೀಟ್‌ಗಾಗಿ, ಅವರನ್ನು ಅನೇಕರು ಹಿಂದೂ ವಿರೋಧಿ ಎಂದು ಕರೆದಿದ್ದಾರೆ. ಅನೇಕರು ಆಕೆಗೆ ಹಿಂದೂ ಧರ್ಮವನ್ನು ತ್ಯಜಿಸುವಂತೆ ಸಲಹೆ ನೀಡಿದ್ದಾರೆ.ಹಿಜಾಬ್ ವಿಷಯದ ಬಗ್ಗೆ ತನ್ನ ಆಲೋಚನೆಗಳನ್ನು ವ್ಯಕ್ತಪಡಿಸಿದ ಮೊದಲ ವ್ಯಕ್ತಿ ಸ್ವರಾ ಅಲ್ಲವಾದರೂ ಅವರ ಅಭಿಪ್ರಾಯಗಳನ್ನು ಹೊರ ಹಾಕಿದಾಗಲೆಲ್ಲಾ ಟ್ರೋಲ್ ಆಗುತ್ತಾರೆ. ಈ ಹಿಂದೆ, ಸ್ವರಾ ಭಾಸ್ಕರ್ ಮುಸ್ಲಿಂ ವಿದ್ಯಾರ್ಥಿನಿಯರ ವಿಡಿಯೋವನ್ನು ಹಂಚಿಕೊಂಡಿದ್ದರು, ಅದರ ಹಿಂದೆ ಕೆಲವು ಹುಡುಗರು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿವಾತಾತ್ಮಕ ಹೇಳಿಕೆ ಇಂದು ವಿಧಾನ ಪರಿಷತ್ ನಲ್ಲಿ!

Thu Feb 17 , 2022
ಬೆಂಗಳೂರು, ಫೆ.17- ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿವಾತಾತ್ಮಕ ಹೇಳಿಕೆ ಇಂದು ವಿಧಾನ ಪರಿಷತ್ ನಲ್ಲಿ ಪ್ರತಿಧ್ವನಿಸಿ ಕಲಾಪ ರಣಾಂಗಣವಾಗಿ ಮಾರ್ಪಟ್ಟಿತ್ತಲ್ಲದೆ, ಪ್ರತಿಪಕ್ಷದ ಧರಣಿ, ಆಡಳಿತ ಪಕ್ಷದ ಸಮರ್ಥನೆಯಿಂದ ಗೊಂದಲದ ಗೂಡಾಗಿ, ಮಧ್ಯಾಹ್ನಕ್ಕೆ ಮುಂದೂಡಿಕೆಯಾಗಿದೆ.ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಬೇಕು, ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದೆ.ಇಂದು ಬೆಳಗ್ಗೆ ವಿಧಾನ […]

Advertisement

Wordpress Social Share Plugin powered by Ultimatelysocial