ಡಿಕೆ ರವಿ‌ -ರೋಹಿಣಿ ಪ್ರೇಮ ಸಲ್ಲಾಪ ಸಿಬಿಐ ವರದಿಯಲ್ಲಿದೆ ಐಪಿಎಸ್ ರೂಪ ತಿರುಗೇಟು.

ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರು ಮಾನಸಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ಹೇಳುತ್ತಿರುವ ರೋಹಿಣಿ ಸಿಂಧೂರಿ, ಅವರ ಖಾತೆಯನ್ನು ಏಕೆ ಬ್ಲಾಕ್‌ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪವು ಸಿಬಿಐ ಕೊಟ್ಟ ಅಂತಿಮ ವರದಿಯಲ್ಲಿ ಎಲ್ಲರ ಕೈ ಸೇರಿವೆ. ಐಎಎಸ್‌ ಅಧಿಕಾರಿಗೆ ಕಳಿಸಿರುವ ಫೋಟೋಗಳು ಉತ್ತೇಜನ ಕೊಡುವುದಿಲ್ಲವೇ ಎಂದು ರೋಹಿಣಿ ಸಿಂಧೂರಿ ಪ್ರತಿಕ್ರಿಯೆಗೆ ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತೆ ತಿರುಗೇಟು ನೀಡಿದ್ದಾರೆ. ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರು ಬೆಳಗ್ಗೆಯಿಂದ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಹಂಚಿಕೊಂಡು ಇವುಗಳನ್ನು ಕೆಲ ಐಎಎಸ್‌ ಅಧಿಕಾರಿಗಳಿಗೆ ಕಳುಹಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಈ ಆರೋಪಕ್ಕೆ ಮೊದಲ ಬಾರಿಗೆ ಮಾಧ್ಯಮ ಪ್ರಕಟಣೆಯ ಮೂಲಕ ಪ್ರತಿಕ್ರಿಯೆ ನೀಡಿದ್ದ ರೋಹಿಣಿ ಸಿಂಧೂರಿ ಅವರು, ರೂಪಾ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ತಿಳಿಸಿದ್ದರು.ಇದಕ್ಕೆ ಪುನಃ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ ರೂಪಾ ಮೌದ್ಗಿಲ್‌ ಅವರು, “ಅದರಲ್ಲಿ ಆಕೆ ಹೇಳುತ್ತಾರೆ, ಡಿಕೆ ರವಿ ಸತ್ತದ್ದು mental illness ಎಂದು. ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಳಿಸಿದರೆ? ನನ್ನ ಪ್ರಶ್ನೆ ಇಷ್ಟೇ.. ರೋಹಿಣಿ ಸಿಂಧೂರಿ ಏಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಏಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್ ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಅವರು ಯಾವ ಪೋರಂ ಹೋದರೂ, ಸತ್ಯ ಸತ್ಯವೇ. ಸತ್ಯ ಮಣಿಸಲು ಸಾಧ್ಯವಿಲ್ಲ. ಈ ಬಾರಿ ಸಾಧ್ಯವಿಲ್ಲ. ಎಂದು ಹೇಳಿದ್ದಾರೆ.ಈ ಪಿಕ್ಸ್ ಈಗ ಯಾಕೆ ಹಾಕಿದ್ದೀರಿ ಎಂದು ಕೇಳುವವರಿಗೆ ಹೇಳುವುದು ಇಷ್ಟೇ. ಈ ಚಿತ್ರಗಳು ನನ್ನ ಕೈ ಸೇರಿದ್ದು ಕೇವಲ ಇತ್ತೀಚೆಗೆ. ವಿಷಯ ತಿಳಿದ ತಕ್ಷಣ ಸರ್ಕಾರದ ಮಟ್ಟದಲ್ಲಿ ವಿಷಯ ಎಲ್ಲೆಲ್ಲಿ ತಿಳಿಸಬೇಕು ಅಲ್ಲಿ ತಿಳಿಸಿದ್ದೇನೆ. ನಾನು ಹಾಕಿದ 20 ಅಂಶಗಳ ಪೋಸ್ಟ್‌ನಲ್ಲಿ ಒಂದಂಶ ಈ ಚಿತ್ರಗಳ ಬಗ್ಗೆ ಹೇಳಿದ್ದೇನೆ. ಅದಕ್ಕಾಗಿ ಈ ಚಿತ್ರಗಳನ್ನು ( ಅದರಲ್ಲೂ ಆದಷ್ಟು ಗಂಭೀರ ಚಿತ್ರಗಳನ್ನು) ಹಾಕಿದ್ದೇನೆ. 20 ಅಂಶಗಳ ಬಗ್ಗೆ , ಅಂದರೆ ಕೆಲವು ಹಿಂದಿನವು, ಈಗ ಏಕೆ ಪ್ರಸ್ತಾಪ ಮಾಡಿದ್ದೀರಿ ಅಂತ ಕೇಳುವವರಿಗೆ ಹೇಳುವುದು ಇಷ್ಟೇ…ಅನೇಕ ವಿಷಯಗಳು ನನಗೆ ಇತ್ತೀಚೆಗೆ ಒಂದು ವರ್ಷದೊಳಗೆ ಗೊತ್ತಾಗಿದ್ದು. ಎಂದ ಡಿ ರೂಪಾ ಶಾಸಕರ ಬಳಿ ಸಂಧಾನ ಯಾವ ನಿಯಮದಲ್ಲಿದೆ: ಒಬ್ಬ ಎಂಎಲ್ ಎ ಒಬ್ಬರ ಹತ್ರ ಡಿಸಿ ಆಗಿದ್ದ ಐಎಎಸ್ ಅಧಿಕಾರಿ ಸಂಧಾನಕ್ಕೆ ಹೋಗಿದ್ದಾರೆ ಎಂಬ ವಿಷಯ ಮಾಧ್ಯಮದಲ್ಲಿ ಬಂದಿದ್ದರಿಂದ ಈ ಐಎಎಸ್ ಅಧಿಕಾರಿಯ( ರೋಹಿಣಿ ಸಿಂಧೂರಿ) ಅವರ ನಡವಳಿಕೆ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವ ಹಳೆಯ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ. ಏಕೆ ಇವರು ಎಂಎಲ್ಎ ಬಳಿ ಸಂಧಾನಕ್ಕೆ ಹೋಗುತ್ತಾರೆ. ಸರ್ಕಾರದ ಯಾವ ನಿಯಮದಲ್ಲಿ ಈ ರೀತಿಯ ಸಂಧಾನಕ್ಕೆ ಅವಕಾಶ ಇದೆ. ಅಂದರೆ, ಇವರು ಏನನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಾ ಇದ್ದಾರೆ. ಈಕೆ ಮಾಡಿದ ಭ್ರಷ್ಟಾಚಾರವೋ, ಅನೈತಿಕ ನಡತೆಯೋ, ಆಕೆಯೇ ಉತ್ತರಿಸಬೇಕು.ನಾನು ಹಿಂದೆ ಕೂಡ ಇವರಿಗೆ ನಾನು ಹಾಗೂ ನನ್ನ ಪತಿ ಐಎಎಸ್ ಅಧಿಕಾರಿಯಾದ ಮೌದ್ಗಿಲ್ ಅವರು ತುಂಬಾ ಸಹಾಯ ಮಾಡಿದ್ದು ಆಕೆಗೂ ಗೊತ್ತಿದೆ ಎಂದು ಫೇಸ್ ಬುಕ್ ನಲ್ಲಿ ಬರೆದಿದ್ದೆ. ಆದರೆ ಬರಬರುತ್ತಾ ಆಕೆಯ ಅನೇಕ ವಿಷಯಗಳು ಬಯಲಾಗಿ ನನಗೆ ಗೊತ್ತಾದವು ಎಂದಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಟಿಎಂ ಕಾರ್ಡ್ ನೀಡುತ್ತೆ 10 ಲಕ್ಷ ರೂ. ವರೆಗೆ ವಿಮಾ ರಕ್ಷಣೆ.

Mon Feb 20 , 2023
    ಎಟಿಎಂಗಳ ಬಳಕೆಯು ನಮ್ಮ ದೈನಂದಿನ ಜೀವನದ ವ್ಯವಹಾರಗಳನ್ನು ಬಹಳ ಸುಲಭಗೊಳಿಸಿವೆ. ಎಟಿಎಂ ಕಾರ್ಡ್‌ ಇದ್ದರೆ ಬ್ಯಾಂಕ್‌ನಲ್ಲಿ ಹಣ ವಿತ್‌ಡ್ರಾ ಮಾಡುವುದಕ್ಕೆ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. ಆನ್‌ಲೈನ್‌ ಖರೀದಿಗಳನ್ನು ಕೂಡ ಎಟಿಎಂ ಕಾರ್ಡ್‌ನಿಂದ ಮಾಡಬಹುದು. ಅಷ್ಟೇಅಲ್ಲ ಹೆಚ್ಚಿನ ಕಂಪೆನಿಗಳು ಹಾಗೂ ಶಾಪಿಂಗ್‌ ಆಪ್‌ಗಳು ಆನ್‌ಲೈನ್‌ ಮೂಲಕ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿ ಶಾಪಿಂಗ್‌ ಮಾಡಿದರೆ ಅನೇಕ ರೀತಿಯ ಡಿಸ್ಕೌಂಟ್‌ ಆಫರ್‌ ನೀಡುತ್ತವೆ. ಹೀಗಿರುವಾಗ, ಎಟಿಎಂ ಕಾರ್ಡ್‌ ಬಳಕೆಯಿಂದ […]

Advertisement

Wordpress Social Share Plugin powered by Ultimatelysocial