ಮೋದಿ ಚುನಾವಣಾ ನಿಷ್ಠೆ ಪ್ರಶಂಸನೀಯ; ಕಾಂಗ್ರೆಸ್ ಈಗ ಬಲಹೀನ: ಹೆಚ್.ಡಿ. ದೇವೇಗೌಡ

 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ನಿಷ್ಠೆಯನ್ನು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಪ್ರಶಂಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಗೆಲುವಿಗಾಗಿ ವಿನಮ್ರತೆಯಿಂದ ಶ್ರಮಿಸುತ್ತಿದ್ದಾರೆ.

 ನಾಲ್ಕು ದಿಕ್ಕಿನಲ್ಲಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಅವರು ಗುಜರಾತ್ ಚುನಾವಣಾ ತಯಾರಿ ಆರಂಭಿಸಿದ್ದಾರೆ ಎಂದರು.

ಕೇಂದ್ರದಲ್ಲಿ ಮನ ಮೋಹನ್ ಸಿಂಗ್ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿಯನ್ನು ಹಿಮ್ಮುಖ ಮಾಡಲು ಸಾಧ್ಯವಾಗಿಲ್ಲ ಅನ್ನೋದು ವಾಸ್ತವಾಂಶವಾಗಿದ್ದು, ಕಾಂಗ್ರೆಸ್ ಈಗ ಬಲಹೀನವಾಗಿದೆ. ಅದು ಕೆಲವೇ ರಾಜ್ಯಗಳಿಗೆ ಸೀಮಿತವಾದ ಪ್ರಾದೇಶಿಕ ಪಕ್ಷದಂತೆ ಆಗಿದೆ. ಕರ್ನಾಟಕದ ಕಾಂಗ್ರೆಸ್ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ ಎಂದರು. ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಅಸಮಾಧಾನ ಸರಿಪಡಿಸಿ, ಒಟ್ಟಿಗೆ ಕರೆದೊಯ್ದಿದ್ದರೆ ಈಗಿನ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಎಲ್ಲಾ ಜಾತ್ಯತೀತ ಪ್ರಾದೇಶಿಕ ಪಕ್ಷಗಳು ಒಟ್ಟಾದರೆ ಒಳ್ಳೆಯದು: ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ತನ್ನ ಪಕ್ಷವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ನನ್ನ ಮುಂದಿರುವ ಅಜೆಂಡವಾಗಿದೆ. ಈಗ ಕಾಂಗ್ರೆಸ್ ಪರಿಸ್ಥಿತಿ ಏನು? ಪ್ರಾದೇಶಿಕ ಪಕ್ಷಗಳಂತೆ ಕೆಲವೊಂದು ಸ್ಥಳಗಳಿಗೆ ಮಾತ್ರ ಅದು ಸೀಮಿತವಾಗಿದೆ. ರಾಷ್ಟದ ಹಿತಾದೃಷ್ಟಿಯಿಂದ ಕಾಂಗ್ರೆಸ್ ಸೇರಿದಂತೆ ಎಲ್ಲಾ ಜಾತ್ಯತೀತ ಪ್ರಾದೇಶಿಕ ಪಕ್ಷಗಳು ಒಟ್ಟಾದರೆ ಒಳ್ಳೆಯದು ಎಂದರು.

 ಪಕ್ಷ ಸಂಘಟನೆಗಾಗಿ ಇದೇ ತಿಂಗಳ 20ನೇ ತಾರೀಖು ಮುಂದಿನ ಹೋರಾಟದ ಕಾರ್ಯಕ್ರಮ ರೂಪಿಸುತ್ತೇವೆ. ಎರಡೆರಡು ಜಿಲ್ಲೆಗೆ ಒಂದು ಸಭೆ ಮಾಡುತ್ತೀವಿ. ಬೆಂಗಳೂರಿನಲ್ಲಿ ಸಮಾವೇಶ ನಡೆಸಲಾಗುವುದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಸಮಾನ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಎಂಎಲ್ಸಿ ಸಿ. ಎಂ.ಇಬ್ರಾಹಿಂ ಪಕ್ಷ ಸೇರ್ಪಡೆ ಕುರಿತು ಮಾತನಾಡಿದ ದೇವೇಗೌಡರು, ಇದು ಹಲವಾರು ತಿಂಗಳಿನಿಂದ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ನಲ್ಲಿ ಅವರಿಗೆ ಸಾಕಷ್ಟು ನೋವು ನೀಡಲಾಗಿದೆ. ಆದರೆ, ಇದರ ಬಗ್ಗೆ ನನ್ನ ಬಳಿ ಬಂದು ಪಕ್ಷ ಸೇರುವ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಮುಂದೇನಾಗುತ್ತೆ ನೋಡೋಣ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೈಲಿನಲ್ಲಿ ಸೆಲ್ ಫೋನ್ ಬಳಕೆಗೆ ದಂಡ ವಿಧಿಸುವ ಕುರಿತು ಕರ್ನಾಟಕ ಸಚಿವ ಸಂಪುಟ ಚರ್ಚೆ!

Sun Mar 13 , 2022
ಜೈಲುಗಳಲ್ಲಿ ಮೊಬೈಲ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆಗೆ ದಂಡ ವಿಧಿಸುವ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಮಸೂದೆ 2022 ಅನ್ನು ಕ್ಯಾಬಿನೆಟ್ ಚರ್ಚಿಸಿದೆ ಎಂದು ನಂಬಲಾಗಿದೆ. ಜೈಲುಗಳಲ್ಲಿ ಫೋನ್‌ಗಳ ಬಳಕೆಯ ಬಗ್ಗೆ ಹಲವಾರು ಶಾಸಕರು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಚರ್ಚೆ ಬಂದಿದೆ. 2021 ರ ವಿಧಾನಸಭೆಯ ಅಧಿವೇಶನವೊಂದರಲ್ಲಿ, ಕೆಲವು ಕೈದಿಗಳು ಜೈಲಿನಿಂದ ಕುಟುಂಬಗಳು ಮತ್ತು ಸ್ನೇಹಿತರಿಗೆ ಮತ್ತು ಶಾಸಕರಿಗೆ ಹೇಗೆ ಕರೆ ಮಾಡುತ್ತಿದ್ದಾರೆ ಎಂಬುದನ್ನು ಕೆಲವು ಶಾಸಕರು […]

Advertisement

Wordpress Social Share Plugin powered by Ultimatelysocial