ಉಡುಪಿಯಲ್ಲಿ ಪ್ರಥಮ ಯಕ್ಷಗಾನ ಸಮ್ಮೇಳನ ಉದ್ಘಾಟನೆ

ಡುಪಿ, ಫೆಬ್ರವರಿ 11: ದೇವಸ್ಥಾನದ ಪಟ್ಟಣವಾದ ಉಡುಪಿಯು ಶನಿವಾರ ಎಂಜಿಎಂ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು.

ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರಾದ ಡಾ.ಎಂ. ಪ್ರಭಾಕರ ಜೋಶಿ ಅವರನ್ನು ಕಡಿಯಾಳಿ ದೇವಸ್ಥಾನದ ಮುಂಭಾಗ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಈ ಮೆರವಣಿಗೆಯೊಂದಿಗೆ ಸಾಂಸ್ಕೃತಿಕ ಕಲಾ ಪ್ರಕಾರಗಳು ಸಾಗಿದವು. ಇಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಸಹಸ್ರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರೊಂದಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ ಕುಮಾರ್‌, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ, ಶಾಸಕ ರಘುಪತಿ ಭಟ್‌, ಮೈಸೂರು ಎಲೆಕ್ಟಕ್ರಿಕ್‌ ಇಂಡಸ್ಟ್ರಿಸ್‌ ಅಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ, ಯಕ್ಷಗಾನ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿಎಲ್‌. ಹೆಗಡೆ, ಜಿಲ್ಲಾಧಿಕಾರಿ ಕೂರ್ಮಾರಾವ್‌, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌ ಪ್ರಸನ್ನ ಇದ್ದರು.

ಸಮ್ಮೇಳನದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಲೆಯ ಮೂಲ ಉಳಿಸುವ ಮೂಲಕ ಶಾಲೆ ಕಾಲೇಜುಗಳಲ್ಲಿ ಯಕ್ಷಗಾನದ ಮಹತ್ವ ತಿಳಿಸಿ, ಪಠ್ಯವಾಗಿ ಕಲಿಸುವ ಯತ್ನವಾಗಬೇಕು. ಜೊತೆಗೆ ಪ್ರಧಾನಿ ಮೋದಿ ಪ್ರತಿಪಾದಿಸಿದ ವೋಕಲ್ ಫಾರ್ ಲೋಕಲ್ ಯೋಜನೆಯಡಿ ಯಕ್ಷಗಾನ ಉಳಿಸಬೇಕು. ಯಕ್ಷಗಾನ ಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ. ದೇವಳ, ಭಾರತೀಯ‌ ಸಂಸ್ಕೃತಿ, ವೇದ ಪುರಾಣ, ನಾಟ್ಯ ಸಂಗೀತದ ಅವಿನಾಭಾವ ಸಂಬಂಧ ಯಕ್ಷಗಾನಕ್ಕಿದೆ. ಸಾಮಾಜಿಕ ನಾಟಕಕ್ಕೆ ಯಕ್ಷಗಾನ ಬಳಸಬೇಡಿ. ಯಕ್ಷಗಾನದ ತಳಪಾಯ ಅಲುಗಾಡಿಸಬೇಡಿ. ಗಂಡು ಕಲೆಯನ್ನು ಹೆಣ್ಣು ಮಕ್ಕಳು ಕಲಿಯುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಯಕ್ಷಗಾನ ಶಿಕ್ಷಣದ ಸವಾಲುಗಳು, ಯಕ್ಷಗಾನದಲ್ಲಿ ಕನ್ನಡದ ಅಸ್ಮಿತೆ, ಯಕ್ಷಗಾನ ಮತ್ತು ರಾಷ್ಟ್ರೀಯ ಚಿಂತನೆ, ಮೂಡಲಪಾಯದ ಸ್ವರೂಪ ಚರ್ಚೆಗಳು, ಮಹಿಳಾ ಯಕ್ಷಗಾನದ ಚರ್ಚೆ ಹಾಗೂ ಯಕ್ಷಗಾನ ಪ್ರಯೋಗ ಎಂಬ ಆರು ಪ್ರದರ್ಶನಗಳು ನಡೆಯಲಿವೆ. ಒಟ್ಟು 23 ತಂಡಗಳು ತೆಂಕುತಿಟ್ಟು ಬಡಗುತಿಟ್ಟುಮ ಮೂಡಲಯಪ ಮತ್ತು ಘಟ್ಟದ ​​ಕೋರೆ ಪ್ರಸ್ತುತ ಪಡಿಸಲಿವೆ. ರಾತ್ರಿಯಿಡೀ ಯಕ್ಷಗಾನ ನಡೆಯಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಳೆ ಮಹಾರಾಷ್ಟಕ್ಕೆ ಪ್ರಧಾನಿ ಮೋದಿ ಭೇಟಿ

Sat Feb 11 , 2023
ನವದೆಹಲಿ : ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇಯ 246-ಕಿಮೀ ದೆಹಲಿ-ದೌಸಾ-ಲಾಲ್ಸೋಟ್ ವಿಭಾಗವನ್ನು ಪ್ರಧಾನಿ ನರೇಂದ್ರ ಮೋದಿಯವರು ನಾಳೆ (ಭಾನುವಾರ) ಉದ್ಘಾಟಿಸಲಿದ್ದಾರೆ. ಹೊಸ ವಿಸ್ತರಣೆಯೊಂದಿಗೆ ರಾಷ್ಟ್ರ ರಾಜಧಾನಿಯಿಂದ ಜೈಪುರಕ್ಕೆ ಪ್ರಯಾಣದ ಸಮಯವನ್ನು ಐದು ಗಂಟೆಗಳಿಂದ ಸುಮಾರು ಮೂರೂವರೆವರೆಗೆ ಕಡಿಮೆ ಮಾಡಲಿದೆ. ಇದನ್ನು ಬರೋಬ್ಬರಿ 12,150 ಕೋಟಿ ರೂ. ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಇಡೀ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿಗಳ ಕಚೇರಿ (PMO) ಹೇಳಿದೆ. ಅದೇ ಸಮಯದಲ್ಲಿ ಮೋದಿಯವರು […]

Advertisement

Wordpress Social Share Plugin powered by Ultimatelysocial